Pat Cummins, IPL 2022 Auction: ಮತ್ತೆ ಕೋಲ್ಕತ್ತಾ ಸೇರಿದ ಪ್ಯಾಟ್ ಕಮಿನ್ಸ್! ಕೊಟ್ಟ ಹಣವೆಷ್ಟು ಗೊತ್ತಾ?

Pat Cummins Auction Price: ಪ್ಯಾಟ್ ಕಮ್ಮಿನ್ಸ್ ಕಳೆದ ಋತುವಿನವರೆಗೆ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ನ ಭಾಗವಾಗಿದ್ದರು, ಆದರೆ ನಂತರ ಫ್ರಾಂಚೈಸ್ ಅವರನ್ನು ಬಿಡುಗಡೆ ಮಾಡಿತು. ಅನೇಕ ಆಸ್ಟ್ರೇಲಿಯನ್ ಆಟಗಾರರಂತೆ ಪ್ಯಾಟ್ ಕಮ್ಮಿನ್ಸ್ ತಮ್ಮ ಹೆಸರನ್ನು ಹರಾಜಿಗೆ ನೋಂದಾಯಿಸಿಕೊಂಡಿದ್ದರು.

Pat Cummins, IPL 2022 Auction: ಮತ್ತೆ ಕೋಲ್ಕತ್ತಾ ಸೇರಿದ ಪ್ಯಾಟ್ ಕಮಿನ್ಸ್! ಕೊಟ್ಟ ಹಣವೆಷ್ಟು ಗೊತ್ತಾ?
ಪ್ಯಾಟ್ ಕಮಿನ್ಸ್
TV9kannada Web Team

| Edited By: pruthvi Shankar

Feb 12, 2022 | 12:40 PM

ಐಪಿಎಲ್ 2022 (IPL 2022) ರ ಮೆಗಾ ಹರಾಜು ಪ್ರಾರಂಭವಾಗಿದೆ. ಬೆಂಗಳೂರಿನಲ್ಲಿ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2022) ನ 10 ಫ್ರಾಂಚೈಸಿಗಳು ವಿಶ್ವದ ಕೆಲವು ಅತ್ಯುತ್ತಮ ಕ್ರಿಕೆಟಿಗರು ಮತ್ತು ಕೆಲವು ಯುವ ಮತ್ತು ಹೊಸ ಆಟಗಾರರ ಮೇಲೆ ಬಿಡ್ ಮಾಡುತ್ತಿವೆ. ಎಲ್ಲರ ಕಣ್ಣುಗಳು ಅನೇಕ ದೊಡ್ಡ ಆಟಗಾರರ ಮೇಲಿದೆ, ಅವರಲ್ಲಿ ಒಬ್ಬರು ಆಸ್ಟ್ರೇಲಿಯಾದ ಪ್ರಮುಖ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ (Pat Cummins). ಪ್ಯಾಟ್ ಕಮಿನ್ಸ್ ಅವರನ್ನು ಐಪಿಎಲ್ 15 ಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ 7.75 ಕೋಟಿ ರೂ. ನೀಡಿ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ.

ಪ್ಯಾಟ್ ಕಮ್ಮಿನ್ಸ್ ಕಳೆದ ಋತುವಿನವರೆಗೆ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ನ ಭಾಗವಾಗಿದ್ದರು, ಆದರೆ ನಂತರ ಫ್ರಾಂಚೈಸ್ ಅವರನ್ನು ಬಿಡುಗಡೆ ಮಾಡಿತು. ಅನೇಕ ಆಸ್ಟ್ರೇಲಿಯನ್ ಆಟಗಾರರಂತೆ ಪ್ಯಾಟ್ ಕಮ್ಮಿನ್ಸ್ ತಮ್ಮ ಹೆಸರನ್ನು ಹರಾಜಿಗೆ ನೋಂದಾಯಿಸಿಕೊಂಡಿದ್ದರು. ಕಮ್ಮಿನ್ಸ್ ತಮ್ಮ ಮೂಲ ಬೆಲೆಯನ್ನು 2 ಕೋಟಿಗೆ ನಿಗಧಿ ಪಡಿಸಿದ್ದರು. ಆಸ್ಟ್ರೇಲಿಯನ್ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಕಳೆದ ಋತುವಿನವರೆಗೆ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಬೌಲರ್ ಆಗಿದ್ದರು. ಕೋಲ್ಕತ್ತಾ ನೈಟ್ ರೈಡರ್ಸ್ ಅವರನ್ನು 15.5 ಕೋಟಿಗೆ ಖರೀದಿಸಿತು, ಆದರೆ ನಂತರ ಅವರನ್ನು ಬಿಡುಗಡೆ ಮಾಡಿತು.

ಕಮ್ಮಿನ್ಸ್ ದೆಹಲಿ ಮತ್ತು ಕೋಲ್ಕತ್ತಾ ಪರ ಆಡಿದ್ದಾರೆ

ಇತ್ತೀಚೆಗಷ್ಟೇ ಆಸ್ಟ್ರೇಲಿಯದ ಟೆಸ್ಟ್ ತಂಡದ ನಾಯಕರಾಗಿದ್ದ ನಂಬರ್ ಒನ್ ಟೆಸ್ಟ್ ಬೌಲರ್ ಪ್ಯಾಟ್ ಕಮಿನ್ಸ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ವರ್ಷ ಟಿ20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ಪ್ರಮುಖ ಭಾಗವಾಗಿದ್ದರು. ಕಮ್ಮಿನ್ಸ್ ಕಳೆದ ಕೆಲವು ಸೀಸನ್‌ಗಳಲ್ಲಿ ಮಾತ್ರ ಐಪಿಎಲ್‌ನ ಭಾಗವಾಗಿದ್ದಾರೆ. ಅವರು ಮೊದಲ ಬಾರಿಗೆ 2014 ರಲ್ಲಿ IPL ಆಡಿದ್ದು KKR ಅವರನ್ನು ಖರೀದಿಸಿತು. ಇದರ ನಂತರ, ಅವರು 2017 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಸೇರಿದರು. ಆದರೆ ಒಂದು ಋತುವಿನ ನಂತರ ಅವರು ಲೀಗ್ ಅನ್ನು ತೊರೆದರು. ನಂತರ 2020 ರಲ್ಲಿ ಈಪಿಎಲ್​ಗೆ ಹಿಂದಿರುಗಿದ ಅವರನ್ನು ಹರಾಜಿನಲ್ಲಿ ಅತ್ಯಂತ ದುಬಾರಿ ಬೆಲೆಗೆ ಖರೀದಿಸಲಾಗಿತ್ತು.

ಕಮ್ಮಿನ್ಸ್‌ ಪ್ರದರ್ಶನ

ಕಮ್ಮಿನ್ಸ್ ಇದುವರೆಗೆ ಐಪಿಎಲ್‌ನ 5 ಸೀಸನ್‌ಗಳಲ್ಲಿ ಮಾತ್ರ ಆಡಿದ್ದಾರೆ. ಇದರಲ್ಲಿ 4 ಸೀಸನ್‌ಗಳನ್ನು ಕೋಲ್ಕತ್ತಾದೊಂದಿಗೆ ಕಳೆದಿದ್ದಾರೆ. ಆದರೆ, ಅವರ ಐಪಿಎಲ್ ದಾಖಲೆ ಉತ್ತಮವಾಗಿಲ್ಲ. ಲೀಗ್‌ನಲ್ಲಿ ಇದುವರೆಗೆ ಒಟ್ಟು 37 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 38 ವಿಕೆಟ್‌ಗಳು ಮಾತ್ರ ಅವರ ಖಾತೆಗೆ ಬಂದಿವೆ. ಕಳೆದ ಋತುವಿನಲ್ಲಿ ಕಮ್ಮಿನ್ಸ್ ಕೆಕೆಆರ್ ಪರ 7 ಪಂದ್ಯಗಳಲ್ಲಿ 9 ವಿಕೆಟ್ ಪಡೆದಿದ್ದರು. ಆದಾಗ್ಯೂ, ಬ್ಯಾಟ್‌ನೊಂದಿಗೆ ಸಹ, ಕಮ್ಮಿನ್ಸ್ ಉಪಯುಕ್ತ ಇನ್ನಿಂಗ್ಸ್‌ಗಳನ್ನು ಆಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರು ಲೀಗ್‌ನಲ್ಲಿ ಎರಡು ಅರ್ಧ ಶತಕಗಳನ್ನು ಬಾರಿಸಿದ್ದಾರೆ.

ಇದನ್ನೂ ಓದಿ:IPL 2022 Auction Live: ದಾಖಲೆ ಮೊತ್ತಕ್ಕೆ ಸೇಲ್ ಆದ ಶ್ರೇಯಸ್ ಅಯ್ಯರ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada