Faf Du Plessis, IPL 2022 Auction: 7 ಕೋಟಿ ರೂ.ಗೆ ಆರ್​ಸಿಬಿ ಸೇರಿದ ಹರಿಣಗಳ ಸ್ಟಾರ್ ಬ್ಯಾಟರ್ ಫಾಫ್ ಡು ಪ್ಲೆಸಿಸ್

Faf Du Plessis Auction Price: 7 ಕೋಟಿಗೆ ಬಿಡ್ ಮಾಡುವ ಮೂಲಕ ಆರ್‌ಸಿಬಿ ದಕ್ಷಿಣ ಆಫ್ರಿಕಾದ ಮಾಜಿ ನಾಯಕನನ್ನು ತನ್ನೊಂದಿಗೆ ಸೇರಿಸಿಕೊಂಡಿದೆ.

Faf Du Plessis, IPL 2022 Auction: 7 ಕೋಟಿ ರೂ.ಗೆ ಆರ್​ಸಿಬಿ ಸೇರಿದ ಹರಿಣಗಳ ಸ್ಟಾರ್ ಬ್ಯಾಟರ್ ಫಾಫ್ ಡು ಪ್ಲೆಸಿಸ್
ಡು ಪ್ಲೆಸಿಸ್
Follow us
TV9 Web
| Updated By: ಪೃಥ್ವಿಶಂಕರ

Updated on:Feb 12, 2022 | 1:02 PM

ಐಪಿಎಲ್ 2022 ರಲ್ಲಿ ಫಾಫ್ ಡು ಪ್ಲೆಸಿಸ್ (Faf du Plessis) ಯಾವ ತಂಡಕ್ಕಾಗಿ ಆಡುತ್ತಾರೆ ಎಂಬುದು ಹರಾಜಿನಲ್ಲಿ ಅವರನ್ನು ಬಿಡ್ ಮಾಡಿದ ನಂತರ ಸ್ಪಷ್ಟವಾಗಿದೆ. ಮಾರ್ಕ್ಯೂ ಆಟಗಾರರ ಪಟ್ಟಿಯಲ್ಲಿ ಡು ಪ್ಲೆಸಿಸ್ ಹೆಸರಿತ್ತು. ಅಂತಹ ಪರಿಸ್ಥಿತಿಯಲ್ಲಿ, ಅವರ ಹೆಸರಿನ ಹರಾಜು ಆರಂಭದಲ್ಲೇ ಪ್ರಾರಂಭವಾಯಿತು. ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಫ್ರಾಂಚೈಸಿಗಳ ನಡುವೆ ಪೈಪೋಟಿಯೂ ಇತ್ತು. ಆದರೆ ಅಂತಿಮವಾಗಿ ಡು ಪ್ಲೆಸಿಸ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಖರೀದಿಸುವಲ್ಲಿ ಯಶಸ್ವಿಯಾಯಿತು. 7 ಕೋಟಿಗೆ ಬಿಡ್ ಮಾಡುವ ಮೂಲಕ ಆರ್‌ಸಿಬಿ ದಕ್ಷಿಣ ಆಫ್ರಿಕಾದ ಮಾಜಿ ನಾಯಕನನ್ನು ತನ್ನೊಂದಿಗೆ ಸೇರಿಸಿಕೊಂಡಿದೆ.

ಫಾಫ್ ಡು ಪ್ಲೆಸಿಸ್ ಅವರ ಐಪಿಎಲ್ ವೃತ್ತಿಜೀವನ ಅದ್ಭುತವಾಗಿದೆ. ಅವರು ಉತ್ತಮ ಬ್ಯಾಟ್ಸ್‌ಮನ್, ಉತ್ತಮ ಫೀಲ್ಡರ್ ಮತ್ತು ಉತ್ತಮ ನಾಯಕರೂ ಆಗಿದ್ದಾರೆ. ಅವರು ಐಪಿಎಲ್‌ನಲ್ಲಿ ದೀರ್ಘಕಾಲದವರೆಗೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಭಾಗವಾಗಿದ್ದರು.

ಐಪಿಎಲ್‌ನಲ್ಲಿ ಫಾಫ್ ಡು ಪ್ಲೆಸಿಸ್ ಸಾಧನೆ ಐಪಿಎಲ್ 2021 ರಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿ ಫಾಫ್ ಡು ಪ್ಲೆಸಿಸ್ 600 ಕ್ಕೂ ಹೆಚ್ಚು ರನ್ ಗಳಿಸಿದರು. ಫಾಫ್ ಡು ಪ್ಲೆಸಿಸ್ ಅವರ ಐಪಿಎಲ್ ವೃತ್ತಿಜೀವನದ ಬಗ್ಗೆ ಮಾತನಾಡುವುದಾದರೆ, ಅವರು ಒಟ್ಟು 100 ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು 34.94 ರ ಸರಾಸರಿಯಲ್ಲಿ 2935 ರನ್ ಗಳಿಸಿದ್ದಾರೆ. ಇದಲ್ಲದೆ, ಅವರು ಐಪಿಎಲ್‌ನಲ್ಲಿ 22 ಅರ್ಧಶತಕಗಳನ್ನು ಗಳಿಸಿದ್ದಾರೆ ಮತ್ತು ಅವರ ಅತ್ಯುತ್ತಮ ಬ್ಯಾಟಿಂಗ್ ಐಪಿಎಲ್ ಸ್ಕೋರ್ 96 ಆಗಿದೆ.

ಬಿಪಿಎಲ್ 2022 ರಲ್ಲಿ ಡು ಪ್ಲೆಸಿಸ್ ಅದ್ಭುತ ಇನ್ನಿಂಗ್ಸ್

ಇತ್ತೀಚೆಗೆ, ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ, ಫಾಫ್ ಡು ಪ್ಲೆಸಿಸ್ 7 ಪಂದ್ಯಗಳಲ್ಲಿ ಸುಮಾರು 115 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ, ಅದರಲ್ಲಿ ಅವರ ಅತ್ಯುತ್ತಮ ಸ್ಕೋರ್ ಅಜೇಯ 83. ಡು ಪ್ಲೆಸಿಸ್ ಈ ಇನ್ನಿಂಗ್ಸ್‌ನಲ್ಲಿ 55 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 8 ಬೌಂಡರಿಗಳನ್ನು ಬಾರಿಸಿದರು.

ಇದನ್ನೂ ಓದಿ:IPL 2022 Auction Live: 7 ಕೋಟಿಗೆ ಡುಪ್ಲೆಸಿಸ್​ರನ್ನು ಖರೀದಿಸಿದ ಆರ್​ಸಿಬಿ

Published On - 12:58 pm, Sat, 12 February 22