ಹೊಸ ಸಿನಿಮಾ ಒಪ್ಪಿಕೊಂಡ ಸಮಂತಾ; ನಾಗ ಚೈತನ್ಯ ಜತೆಗೆ ನಟಿಸಿದ್ದ ‘ಮಜಿಲಿ’ ನಿರ್ದೇಶಿಸಿದವರೇ ಡೈರೆಕ್ಟರ್! ನಾಯಕ ಯಾರು?

ಹೊಸ ಸಿನಿಮಾ ಒಪ್ಪಿಕೊಂಡ ಸಮಂತಾ; ನಾಗ ಚೈತನ್ಯ ಜತೆಗೆ ನಟಿಸಿದ್ದ ‘ಮಜಿಲಿ’ ನಿರ್ದೇಶಿಸಿದವರೇ ಡೈರೆಕ್ಟರ್! ನಾಯಕ ಯಾರು?
‘ಮಹಾನಟಿ’ ಚಿತ್ರದಲ್ಲಿ ಸಮಂತ, ವಿಜಯ್ ದೇವರಕೊಂಡ

Samantha | Vijay Deverakonda | Shiva Nirvana: 018ರಲ್ಲಿ ತೆರೆಕಂಡಿದ್ದ ನಟಿ ಸಾವಿತ್ರಿ ಜೀವನಾಧಾರಿತ ‘ಮಹಾನಟಿ’ ಚಿತ್ರದಲ್ಲಿ ಸಮಂತಾ ಹಾಗೂ ವಿಜಯ್ ದೇವರಕೊಂಡ ತೆರೆ ಹಂಚಿಕೊಂಡಿದ್ದರು. ಆದರೆ ಆ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕ- ನಾಯಕಿ ಪಾತ್ರದಲ್ಲಿ ಈರ್ವರೂ ಕಾಣಿಸಿಕೊಂಡಿರಲಿಲ್ಲ. ಆದರೆ ಹೊಸ ಚಿತ್ರದ ಮೂಲಕ ಅಭಿಮಾನಿಗಳ ಆಸೆ ನೆರವೇರುತ್ತಿದೆ.

TV9kannada Web Team

| Edited By: shivaprasad.hs

Apr 22, 2022 | 8:43 AM

ಟಾಲಿವುಡ್​ ನಟರಾದ ಸಮಂತಾ (Samantha) ಹಾಗೂ ವಿಜಯ್ ದೇವರಕೊಂಡ (Vijay Deverakonda) ಈಗ ಬಹುಭಾಷಾ ತಾರೆಯರಾಗಿ ಗುರುತಿಸಿಕೊಂಡಿದ್ದಾರೆ. ಸಮಂತಾ ಹಿಂದಿ, ಇಂಗ್ಲೀಷ್ ಸೇರಿದಂತೆ ವಿವಿಧ ಭಾಷೆಗಳ ಚಿತ್ರಗಳನ್ನು, ಸೀರೀಸ್​ಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ವಿಜಯ್ ದೇವರಕೊಂಡ ನಟನೆಯ ಮುಂದಿನ ಎರಡು ಚಿತ್ರಗಳು ಪ್ಯಾನ್ ಇಂಡಿಯಾ ಚಿತ್ರಗಳಾಗಿವೆ. ಹೀಗೆ ದೇಶಾದ್ಯಂತ ಅಪಾರ ಅಭಿಮಾನಿ ಬಳಗ ಹೊಂದಿರುವ ಈ ತಾರೆಯರು ಹೊಸ ಚಿತ್ರವೊಂದರಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಮುನ್ನ ಒಮ್ಮೆ ಈ ತಾರಾ ಜೋಡಿ ಜತೆಯಾಗಿ ಕಾಣಿಸಿಕೊಂಡಿದ್ದರು. 2018ರಲ್ಲಿ ತೆರೆಕಂಡಿದ್ದ ನಟಿ ಸಾವಿತ್ರಿ ಜೀವನಾಧಾರಿತ ‘ಮಹಾನಟಿ’ ಚಿತ್ರದಲ್ಲಿ ಸಮಂತಾ ಹಾಗೂ ವಿಜಯ್ ದೇವರಕೊಂಡ ತೆರೆ ಹಂಚಿಕೊಂಡಿದ್ದರು. ಆದರೆ ಆ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕ- ನಾಯಕಿ ಪಾತ್ರದಲ್ಲಿ ಈರ್ವರೂ ಕಾಣಿಸಿಕೊಂಡಿರಲಿಲ್ಲ. ಆದರೆ ಹೊಸ ಚಿತ್ರದ ಮೂಲಕ ಅಭಿಮಾನಿಗಳ ಆಸೆ ನೆರವೇರುತ್ತಿದೆ. ಈ ಚಿತ್ರಕ್ಕೆ ಶಿವ ನಿರ್ವಾಣ (Shiva Nirvana) ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಹೊಸ ಚಿತ್ರದ ಅನೌನ್ಸ್​ ಆಗಿದ್ದರ ಬಗ್ಗೆ ಸಮಂತಾ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ‘‘ವಿಶೇಷ ತಂಡ ಇದಾಗಿದ್ದು ಚಿತ್ರೀಕರಣ ಆರಂಭಿಸಲು ಎದುರು ನೋಡುತ್ತಿದ್ದೇನೆ’’ ಎಂದು ಹೇಳಿಕೊಂಡಿದ್ದಾರೆ ‘ಊ ಅಂಟಾವಾ’ ಚೆಲುವೆ. ಹೊಸ ಚಿತ್ರದ ಟೈಟಲ್ ಇನ್ನೂ ಅಧಿಕೃತವಾಗಿಲ್ಲ. ಅದರೆ ಇದು ಫ್ಯಾಮಿಲಿ ಎಂಟರ್​ಟೈನರ್ ಮಾದರಿಯ ಚಿತ್ರವಾಗಿರಲಿದೆ.

ನಾಗ ಚೈತನ್ಯ- ಸಮಂತಾ ಚಿತ್ರವನ್ನು ನಿರ್ದೇಶಿಸಿದ್ದ ಶಿವ ನಿರ್ವಾಣ:

ವಿಶೇಷವೆಂದರೆ ಸಮಂತಾ ಹಾಗೂ ನಿರ್ದೇಶಕ ಶಿವ ನಿರ್ವಾಣ ಈ ಚಿತ್ರದೊಂದಿಗೆ ಎರಡನೇ ಬಾರಿ ಜತೆಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ‘ಮಜಿಲಿ’ ಚಿತ್ರಕ್ಕೆ ಶಿವ ಆಕ್ಷನ್ ಕಟ್ ಹೇಳಿದ್ದರು. ಆ ಚಿತ್ರದಲ್ಲಿ ಸಮಂತಾ ಮಾಜಿ ಪತಿ ನಾಗ ಚೈತನ್ಯ ನಾಯಕನಾಗಿ ಕಾಣಿಸಿಕೊಂಡಿದ್ದರು. ಈಗ ಸಮಂತಾ ನಟನೆಯ ಹೊಸ ಚಿತ್ರಕ್ಕೆ ಶಿವ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ವಿಜಯ್ ದೇವರಕೊಂಡ ನಟನೆಯ 11ನೇ ಚಿತ್ರ ಇದಾಗಿದ್ದು, ಸದ್ಯ ಚಿತ್ರವನ್ನು ‘ವಿಡಿ11’ ಎಂದು ಗುರುತಿಸಲಾಗುತ್ತಿದೆ. ಖ್ಯಾತ ನಿರ್ಮಾಣ ಸಂಸ್ಥೆ ‘ಮೈತ್ರಿ ಮೂವಿ ಮೇಕರ್ಸ್’ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಚಿತ್ರದ ಪೂಜಾ ಕಾರ್ಯಕ್ರಮದ ವಿಡಿಯೋವನ್ನು ನಿರ್ಮಾಣ ಸಂಸ್ಥೆ ಹಂಚಿಕೊಂಡಿದೆ.

ಹೊಸ ಚಿತ್ರದ ಅನೌನ್ಸ್ ಬಗ್ಗೆ ಸಮಂತಾ ಹಂಚಿಕೊಂಡ ಟ್ವೀಟ್:

ಸಮಂತಾ ಇತ್ತೀಚೆಗೆ ‘ಪುಷ್ಪ: ದಿ ರೈಸ್’ ಚಿತ್ರದ ‘ಊ ಅಂಟಾವಾ’ ಹಾಡಿನಲ್ಲಿ ಹೆಜ್ಜೆ ಹಾಕಿದ್ದರು. ತಮಿಳಿನ ‘ಕಾಥುವಾಕುಲ ರೆಂಡು ಕಾದಲ್’ ಚಿತ್ರದಲ್ಲಿ ನಯನತಾರಾ ಹಾಗೂ ವಿಜಯ್ ಸೇತುಪತಿ ಜತೆ ಸಮಂತಾ ತೆರೆ ಹಂಚಿಕೊಳ್ಳುತ್ತಿದ್ದಾರೆ. ‘ಶಾಕುಂತಲಂ’ ಚಿತ್ರದಲ್ಲಿ ಸಮಂತಾ ಕಾಣಿಸಿಕೊಂಡಿದ್ದು, ಈ ಚಿತ್ರ ಹಿಂದಿ, ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಕಾಣಲಿದೆ ಎನ್ನಲಾಗಿದೆ. ‘ಅರೇಂಜ್​ಮೆಂಟ್ಸ್ ಆಫ್ ಲವ್’ ಚಿತ್ರದ ಮೂಲಕ ಅಂತಾರಾಷ್ಟ್ರೀಯ ಚಿತ್ರರಂಗಕ್ಕೆ ಸಮಂತಾ ಪದಾರ್ಪಣೆ ಮಾಡುತ್ತಿದ್ದಾರೆ.

ಇತ್ತ ವಿಜಯ್ ದೇವರಕೊಂಡ ‘ಲೈಗರ್’ ಚಿತ್ರದ ಮೂಲಕ ಬಾಲಿವುಡ್​ ಪ್ರವೇಶಕ್ಕೆ ತಯಾರಿ ನಡೆಸಿದ್ದಾರೆ. ಆ ಚಿತ್ರದಲ್ಲಿ ಅನನ್ಯಾ ಪಾಂಡೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ವಿಜಯ್ ನಟನೆಯ ಹೊಸ ಚಿತ್ರ ‘ಜೆಜಿಎಮ್​’ ಅನೌನ್ಸ್ ಆಗಿತ್ತು. ಅದರಲ್ಲಿ ವಿಜಯ್ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ನಾಗಚೈತನ್ಯ 2ನೇ ಮದುವೆ ಗಾಸಿಪ್​: ಸಮಂತಾ ರೀತಿ ಹೆಣ್ಣು ಬೇಡವೇ ಬೇಡ ಅಂತಿದೆಯಾ ಅಕ್ಕಿನೇನಿ ಕುಟುಂಬ?

ಮತ್ತೆ ಚಿಕ್ಕ ಬಟ್ಟೆ ಧರಿಸಿ ಬಂದ ಸಮಂತಾ; ಆದ್ರೆ ಟ್ರೋಲ್​ ಆಗಿದ್ದು ನಯನತಾರಾ ಪ್ರಿಯಕರ: ಕಾರಣ ಏನು?

Follow us on

Related Stories

Most Read Stories

Click on your DTH Provider to Add TV9 Kannada