KGF2: ನಿಮ್ಮ ಟೈಮ್​ಲೈನ್; ಯೂಟ್ಯೂಬ್​ನ ಮಿಲಿಯಗಟ್ಟಲೆ ವ್ಯೂವ್ಸ್, ಕಮೆಂಟ್ಸ್ ಸ್ವಯಂಪ್ರೇರಿತವೆ?

Social Media : ಕೆಜಿಎಫ್ 2 ಚಿತ್ರದ ಯಶಸ್ಸು 2014, 2019ರ ಆಡಳಿತ ಪಕ್ಷದ ರಾಜಕೀಯ ಗೆಲುವನ್ನು ಕ್ಷಣ ನೆನಪಿಸಿತು. ಬೇರೆ ಪಕ್ಷಗಳ ಸೋಶಿಯಲ್ ಮೀಡಿಯಾ ಪ್ರೆಸೆನ್ಸ್, ಆಡಳಿತ ಪಕ್ಷದ ಸೋಶಿಯಲ್ ಮೀಡಿಯಾ ಪ್ರೆಸೆನ್ಸ್ ಹೇಗಿದೆ ಅನ್ನೋದನ್ನು ಈ ಚಿತ್ರದ ಒಂದು ದೃಶ್ಯದ ಮೂಲಕ ಜ್ಞಾಪಿಸುತ್ತೇನೆ.

KGF2: ನಿಮ್ಮ ಟೈಮ್​ಲೈನ್; ಯೂಟ್ಯೂಬ್​ನ ಮಿಲಿಯಗಟ್ಟಲೆ ವ್ಯೂವ್ಸ್, ಕಮೆಂಟ್ಸ್ ಸ್ವಯಂಪ್ರೇರಿತವೆ?
Follow us
TV9 Web
| Updated By: ಶ್ರೀದೇವಿ ಕಳಸದ

Updated on:Apr 22, 2022 | 12:39 PM

ನಿಮ್ಮ ಟೈಮ್​ಲೈನ್ | Nimma Timeline : ಕೆಜಿಎಫ್ ಅಭೂತಪೂರ್ವ ಯಶಸ್ಸು ಕಂಡಿದೆ. ನಮ್ಮ ಅನಿಸಿಕೆಗಳು… it hardly matters. ಜನ ಚಿತ್ರಮಂದಿರದ ಕಡೆನುಗ್ಗುತ್ತಲೇ ಇದ್ದಾರೆ. ಇದೊಂದು ಪ್ಯಾನ್ ಇಂಡಿಯನ್ ಹಿಟ್ ಅನ್ನೋದ್ರಲ್ಲಿ ಯಾವುದೇ ಅನುಮಾನಗಳು ಉಳಿದಿಲ್ಲ. ನನ್ನ ಗೆಳೆಯರು ಚಿತ್ರದ ದಿನ ದಿನದ ಗಳಿಕೆಯನ್ನ update ಮಾಡುತ್ತಲೇ ಇದ್ದಾರೆ. They take lot of pride in it and that’s fine. ಎಲ್ಲರ ಗಮನ ಗಳಿಕೆಯ ಮೇಲಿರುವಾಗ ನನಗೆ ಕುತೂಹಲ ಹುಟ್ಟಿಸಿರುವ ವಿಷಯ ನಿರ್ಮಾಪಕ ಚಿತ್ರದ ಪ್ರಮೋಷನ್​ಗೆ ಖರ್ಚು ಮಾಡಿರುವ ಮೊತ್ತವೆಷ್ಟು ಎಂಬುದು. ಮೊದಲೆಲ್ಲ ಒಂದು ಚಲನಚಿತ್ರ ಗೆಲ್ಲಬೇಕಾದರೆ ಬಾಯಿಂದ ಬಾಯಿಗೆ ಸುದ್ದಿ ಹರಡಬೇಕಿತ್ತು. ಕೆಲವು ಚಿತ್ರಗಳು ಒಂದು ವಾರವಾದ ಮೇಲೆ ಸುಧಾರಿಸಿಕೊಂಡು ಹಣ ಮಾಡುತ್ತಿದ್ದವು. ನಾನು ಸುಪ್ರಭಾತ, ಅಮೃತವರ್ಷಿಣಿ, ನಿಷ್ಕರ್ಷ, ಬೆಳದಿಂಗಳ ಬಾಲೆ, ಓಂ ಚಿತ್ರಗಳನ್ನ ನೋಡಿದ್ದು ನನ್ನ ಗೆಳೆಯರು, ಅಕ್ಕಪಕ್ಕದ ಮನೆಯವರು ಈ ಚಿತ್ರಗಳ ಕುರಿತು ಪ್ರಶಂಸೆಯ ಮಾತುಗಳನ್ನಾಡಿದ ಮೇಲೆಯೇ. ಚಿತ್ರಮಂದಿರಕ್ಕೆ ಹೋಗಿ, ಕಂಟೆಂಟ್ ನೋಡಿದ ಜನರ “ವರ್ಡ್ ಆಫ್ ಮೌತ್” ನಿಂದ ಚಿತ್ರ ಗೆಲ್ಲುತ್ತಿದ್ದವು. ಎಚ್​ ಜಿ

ಸಿನೆಮಾ ಬರಿಯ ಮನೋರಂಜನೆಗೆ ಮಾತ್ರವೇ? ಹಾಗಾದರೆ ಮನೋರಂಜನೆ ಎಂದರೇನು? It is a cliché. Merely a way to legitimize a particular form of laziness and ethical irresponsibility – ಸುಂದರ್ ಸರುಕ್ಕೈ.

ನನಗೆ ಚನ್ನಾಗಿ ನೆನಪಿದೆ ಮಂಡ್ಯದಲ್ಲಿ ನಾನು ಹೈಸ್ಕೂಲ್ ಓದುವಾಗ “ಮಂಡ್ಯದ ಗಂಡು” ಅಂತ ಚಿತ್ರವೊಂದು ಬಂದಿತ್ತು, ಅಂಬರೀಶ್ ನಾಯಕ, ಕಂಟೆಂಟ್, ಮೇಕಿಂಗ್ ಎರಡು ಕಳಪೆ ಇದ್ದಿದ್ದರಿಂದ ಚಿತ್ರ ಎಷ್ಟೇ ಪ್ರಮೋಟ್ ಮಾಡಿದರು ತೋಪಾಯಿತು. ಆ ಕಾಲಕ್ಕೆ ಅದ್ದೂರಿ ಮೇಕಿಂಗ್ ಇದ್ದ ಬಹು ಭಾಷಾ ಚಿತ್ರ “ಶಾಂತಿ ಕ್ರಾಂತಿ” ಕೂಡ ತನ್ನ ಸವಕಲು ಕತೆ ಮತ್ತು ಪೂರ್ ಕಂಟೆಂಟ್ನಿಂದ ನೆಲಕಚ್ಚಿತು. ರಜನಿಕಾಂತ್ ಕೂಡ ಆ ಚಿತ್ರವನ್ನ ಉಳಿಸಲಾಗಿರಲಿಲ್ಲ. (ಅದು ಬರಿಯ ಪ್ರಿಂಟ್ ಮೀಡಿಯಾ ಜಮಾನ) ಫಾಸ್ಟ್ ಫಾರ್ವರ್ಡ್ 30 years, ಕೆಜಿಎಫ್ 2 ಥೀಯೇಟರ್ಗೆ ಬರುವ ಮುನ್ನವೇ ಗೆದ್ದುಬಿಟ್ಟಿತ್ತು ಅನ್ನೋದು ನನ್ನ ಅನಿಸಿಕೆ! Everybody knew KGF-2 would be a phenomenal hit. ಚಿತ್ರದ ಪ್ರೊಮೋಷನ್ ಆ ಮಟ್ಟಕಿತ್ತು. Youtube, ಸೋಶಿಯಲ್ ಮೀಡಿಯಾಗಳಲ್ಲಿ ಅದರದೇ ಹವಾ. ಯಶ್ ಮತ್ತು ಚಿತ್ರದ ತಂಡ ಬಹುತೇಕ ಪ್ರಾಂತೀಯ ಹಾಗೂ ರಾಷ್ಟ್ರೀಯ ಚಾನೆಲ್​ಗಳಲ್ಲಿ ಸಂದರ್ಶನ ನೀಡಿದ್ದರು. ಥೀಯೇಟರ್​ಗೆ ಬರುವ ಮುನ್ನವೇ ಚಿತ್ರ ಜನರ ತಲೆಯನ್ನ ಆವರಿಸಿಬಿಟ್ಟಿತ್ತು. There was so much of buzz around the movie. ಈ buzz ಸೃಷ್ಟಿ ಮಾಡಲಿಕ್ಕೆ ತಂಡ ಮೀಸಲಿಟ್ಟ ಹಣವೆಷ್ಟು, ಫಾರ್ favorable ಅಲ್ಗಾರಿಥಂಸ್ youtube ಮತ್ತು ಸೋಶಿಯಲ್ ಮೀಡಿಯಾಗಳಿಗೆ ಎಷ್ಟು ಹಣ ಸುರಿಯಲಾಯಿತು? ಈ ಪ್ರಶ್ನೆಗಳಲ್ಲದೆ ನನ್ನಲ್ಲಿ ಮೂಡಿರುವ ಪ್ರಶ್ನೆಗಳು ಹಲವಾರು…

1. ಮೊದಲಿಗೆ youtube trailer ಅನ್ನ ಕೋಟ್ಯಂತರ ಜನ ಸ್ವಯಂಪ್ರೇರಿತರಾಗಿಯೇ ನೋಡಿದ್ರ ಅಥವಾ 10M views ಅಂತ ತೋರಿಸುವ youtube ಚಾನೆಲ್ manipulation ನಿಂದ ಇನ್ನಷ್ಟು ಜನ ನೋಡಿದ್ರ?

2. ಯೂಟ್ಯೂಬ್ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಬಂದಿದ್ದ ಕಾಮೆಂಟ್​ಗಳು ಜನರೇ volunteer ಆಗಿ ಬರೆದಿದ್ದ ಅಥವಾ youtube ನವರಿಗೆ ಇಂತಿಷ್ಟು ಅಂತ ದುಡ್ಡು ಕೊಟ್ಟರೆ ಅವರೇ ಕಾಮೆಂಟ್ಸ್ ಬರೆಯುತ್ತಾರ?

3. ಲೋ ಬಜೆಟ್ ಚಿತ್ರಗಳನ್ನ ತುಂಬ ಅಳೆದು, ತೂಕ ಹಾಕಿ ವಿಮರ್ಶೆ ಮಾಡುವ ಭಾರದ್ವಜ್ ರಂಗನ್, ಅನುಪಮ ಚೋಪ್ರ, ತರಣ್ ಆದರ್ಶ ನಂತಹ ಫಿಲಂ ಕ್ರಿಟಿಕ್ಸ್ ಕೆಜಿಎಫ್ ಚಿತ್ರದ ವಸ್ತುನಿಷ್ಠ ವಿಮರ್ಶೆ ಮಾಡಿದ್ದಾರೆಯೇ? ಮಾಡದಿರುವುದಕ್ಕೆ ಅವರಿಗೆ ಸಿಕ್ಕ ಹಣವೇಷ್ಟು? ಅದು ಹೋಗ್ಲಿ ಭಾರದ್ವಾಜ್ ರಂಗನ್ ಮಾಡಿದ ನಟೇಶ್ ಹೆಗಡೆಯವರ “ಪೆದ್ರೋ” ಚಿತ್ರದ ವಿಮರ್ಶೆಯನ್ನ ನಾವೆಷ್ಟು ಜನ ನೋಡಿದ್ದೇವೆ? ಹಲವಾರು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲಿ ಭಾರಿ ಸುದ್ದು ಮಾಡಿದ, ಎಲ್ಲರ ಪ್ರಶಂಸೆಗೆ ಪಾತ್ರವಾದ “ಪೆದ್ರೋ”ದಂತಹ ಚಿತ್ರಗಳಿಗೆ ಕೆಜಿಎಫ್ 2ಗೆ ಸಿಗುವ ಉತ್ತೇಜನ, ಸೋಶಿಯಲ್ ಮೀಡಿಯಾ ಪ್ರೆಸೆನ್ಸ್ ಸಿಗುವುದಿಲ್ಲವೇಕೆ?

ಇದನ್ನೂ ಓದಿ : ನಿಮ್ಮ ಟೈಮ್​ಲೈನ್: ನಿರ್ಲಕ್ಷ್ಯಕ್ಕೊಳಗಾಗಿರುವ ಏಷಿಯಾದ ಪ್ರಥಮ ಜಲವಿದ್ಯುತ್ ಕೇಂದ್ರ ಶಿವನಸಮುದ್ರ

4. ಟಿಕೆಟ್ ಒಂದಕ್ಕೆ ಸಾವಿರ ರೂ ಕೊಟ್ಟು ಚಿತ್ರ ನೋಡುತ್ತಿರುವ ಜನರಿಗೆ ಅವರನ್ನ manipulate ಮಾಡಲಾಗುತ್ತಿದೆ ಎಂಬ ಅರಿವಿದೆಯೇ?

5. ಅಷ್ಟೊಂದು ಸೀರಿಯಸ್ ಆಗಿ ಸಿನಿಮಾವನ್ನ ಪರಿಗಣಿಸಬೇಡ ಮಗ ಅಂತ ಹೇಳುವ, ಚಿತ್ರ ಮನೋರಂಜನೆಗೆ ಮಾತ್ರವೆಂದು ಸಮಜಾಯಿಸಿ ಕೊಡುವ ಜನರೇ ಕೆಲವು ಕಹಿಸತ್ಯಗಳಿರುವ ಚಿತ್ರಗಳನ್ನ ಬ್ಯಾನ್ ಮಾಡಿ, ಸೆನ್ಸಾರ್ ಮಾಡಿ ಅಂತಾರಲ್ಲ ಯಾಕೆ? ಪೆದ್ರೊ ಬೆಂಗಳೂರು ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಲಿಲ್ಲವೇಕೆ?

6. ಮೊದಲಿಗೆ ಮನೋರಂಜನೆ ಎಂದರೇನು? ತಲೆಗೆ ಕೆಲಸ ಕೊಡದೆ, ಯೋಚನೆ ಮಾಡದಂತೆಯೇ ಸುಲಭವಾಗಿ ಅರ್ಥವಾಗಿಬಿಡುವುದು ಮನೋರಂಜನೆಯೇ?

7. ಚಿತ್ರದಲ್ಲಿ ಬರುವ ಕೊಲೆ, ಬರ್ಬರ ಹತ್ಯೆ, ಐಟಮ್ ಸಾಂಗ್, ಅತ್ಯಾಚಾರ ಮನೋರಂಜನೆಯೆಂದರೆ, ಸಮಾಜದಲ್ಲಿ ದಿನ ನಿತ್ಯ ನಡೆಯುವ ನಿಜ ಘಟನೆಗಳನ್ನ ನಾವೇಕೆ ಖಂಡಿಸುತ್ತೇವೆ? ಪೋರ್ನೋಗ್ರಫಿಯನ್ನ ಮನೋರಂಜನೆ categoryಗೆ ಸೇರಿಸಿಬಿಡಬಹುದೇ?

8. ಸಿನಿಮಾವನ್ನ ಒಂದು ಸೃಜನಶೀಲ, ಪ್ರಖರವಾದ ಕಲಾ ಮತ್ತು ದೃಶ್ಯ ಮಾಧ್ಯಮವಾಗಿ ಮಾಡಲು

ಶೋಚನೀಯವಾಗಿ ಸೋತ ನಮ್ಮ ಚಿತ್ರರಂಗ ಹುಟ್ಟಿಹಾಕಿದ ಕಟ್ಟುಕತೆಗಳಲ್ಲವೇ ಸಿನಿಮಾ entertainmentಗಾಗಿ, ಪೈಸ ವಸೂಲ್ ಎಂಬ ಪುಕಾರುಗಳು?

9. ಚಲನ ಚಿತ್ರಕ್ಕೆ ಕಲಾ ಬದ್ಧತೆ, ಸಾಮಾಜಿಕ ಬದ್ಧತೆ ಬೇಡವೇ? ಮನೋರಂಜನೆಯೊಂದೆ ಚಿತ್ರದ ಏಕ ಮಾತ್ರ ಗುರಿಯೇ? ಈ ಮನೋರಂಜನೆ myth ಅನ್ನು ನಮ್ಮ ದೇಶದ ಜನರ ತಲೆಯಲ್ಲಿ ಬಿತ್ತಿದವರು ಯಾರು? ಈ ಎಲ್ಲಾ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ಸಿಗುತ್ತದೆ ಎಂಬ ನಿರೀಕ್ಷೆಗಳು ನನಗಿಲ್ಲ. ಆದರೆ ಒಂದು ವಿಚಾರವಂತೂ ನನಗೆ ನಿಖರವಾಗಿ ತಿಳಿದು ಹೋಗಿದೆ- paid ಮೀಡಿಯಾ, ಸೋಶಿಯಲ್ ಮೀಡಿಯಾಗಳು ಇಡಿ ದೇಶದ ಜನರ ಮೈಂಡ್ ಅನ್ನು manipulate ಮಾಡಿಬಿಡಬಹುದು. ಆ ಸಾಮರ್ಥ್ಯ ಸೋಶಿಯಲ್ ಮೀಡಿಯಾಕ್ಕಿದೆ. ಚಲನ ಚಿತ್ರದ ಯಶಸ್ಸು ಮೇಕಿಂಗ್, ಸ್ಕ್ರೀನ್ ಪ್ಲೇ, ಕಂಟೆಂಟ್ ಗಳನ್ನ ಮೀರಿ ಪ್ರೊಮೋಷನ್ ಹಾಗು ಸೋಶಿಯಲ್ ಮೀಡಿಯಾ ಪ್ರೆಸೆನ್ಸ ಮೇಲೆ ಹೆಚ್ಚು ಅವಲಂಬಿತವಾಗಿದೆ.

ಕೆಜಿಎಫ್ 2 ಚಿತ್ರದ stupendous success ನನಗೆ 2014, 2019ರ ಆಡಳಿತ ಪಕ್ಷದ ರಾಜಕೀಯ ಗೆಲುವನ್ನ ಒಂದು ಕ್ಷಣ ನೆನಪಿಸಿತು. ಬೇರೆ ಪಕ್ಷಗಳ ಸೋಶಿಯಲ್ ಮೀಡಿಯಾ ಪ್ರೆಸೆನ್ಸ್ ಮತ್ತು ಆಡಳಿತ ಪಕ್ಷದ ಸೋಶಿಯಲ್ ಮೀಡಿಯಾ ಪ್ರೆಸೆನ್ಸ್ ಹೇಗಿದೆ ಅನ್ನೋದನ್ನ ಕೆಜಿಎಫ್ ಚಿತ್ರದ ಒಂದು ದೃಶ್ಯದ ಮೂಲಕ ಜ್ಞಾಪಿಸುತ್ತೇನೆ.

“ಅದೊಂದು ಗಣಿಗಾರಿಕೆಯಿಂದ ಸೃಷ್ಟಿಯಾದ ಬಹು ದೊಡ್ಡ ಕಂದಕ. ಆ ಕಂದಕದ ತಳದಲ್ಲಿ (Strategically Vulnerable position) ಅಧೀರ ಮತ್ತವನ ಗ್ಯಾಂಗ್ ಇದೆ. ಗ್ಯಾಂಗ್ ಹಳೆ ಕಾಲದ ಸಶ್ತ್ರಾಸ್ತ್ರಗಳನ್ನು ಹಿಡಿದು ರಾಕಿ ಬಾಯ್ ಗ್ಯಾಂಗ್​ಗಾಗಿ ಕಾಯುತ್ತಿದ್ದಾರೆ. ಇದ್ದಕ್ಕಿದ್ದ ಹಾಗೆ ಸಾಲು ಸಾಲು ಟ್ರಕ್​ಗಳು ಕಂದಕದ ಮೇಲ್ ರಸ್ತೆಯಲ್ಲಿ ಒಂದರ ಹಿಂದೆ ಒಂದು ಚಲಿಸುತ್ತವೆ. ಒಂದು ಟ್ರಕ್ ನಿಂದ ರಾಕಿ ಕೆಳಗಿಳಿಯುತ್ತಾನೆ. ಅಧೀರನಿಗೆ ತನ್ನ ಶಾಶ್ತ್ರಸ್ತಗಳ ಮೇಲೆ ಅಪಾರ ನಂಬಿಕೆ. ರಾಕಿಯನ್ನ ಇಂದು ಕೊಂದೇ ಬಿಡುವೆ ಎಂದು ಬೀಗುತ್ತಾನೆ. ಅಷ್ಟರಲ್ಲಿ ರಾಕಿ ಬಾಯ್ ಆದೇಶಕ್ಕೆ ಸ್ಪಂದಿಸುವ ಎಲ್ಲ ಟ್ರಕ್ಕುಗಳ ಒಳಗಿಂದ ನೂರಾರು Ak 47 ಬಂದೂಕುಗಳು ಗುಂಡು ಸಿಡಿಸಲು ಶುರುವಚ್ಚಿಕೊಳ್ಳುತ್ತವೆ. ರಾಕೆಟ್ ಲಾಂಚರ್ ಗಳಿಂದ ಸಿಡಿದ ರಾಕೆಟ್ ಗಳು ಅಧೀರನ ಸಂಪೂರ್ಣ ಗ್ಯಾಂಗನ್ನೇ ನಿರ್ನಾಮ ಮಾಡಿಬಿಡುತ್ತದೆ.”

ಈ ದೃಶ್ಯ ನಾನು FBಲಿ ನೋಡಿದ್ದು. ನಾನಿನ್ನು ಕೆಜಿಎಫ್ 1 ಕೂಡ ನೋಡಿಲ್ಲ. ನೋಡುವೆ ಎಂಬ ಆಶ್ವಾಸನೆಯನ್ನ ಗೆಳೆಯರಿಗೆ ನೀಡಿದ್ದೇನೆ. ಕೆಜಿಎಫ್ ಚಿತ್ರ ತಂಡದಂತೆ ಒಂದು ಪಕ್ಷ ತನ್ನ ಸೋಶಿಯಲ್ ಮೀಡಿಯಾ ಪ್ರೆಸೆನ್ಸ್, paid ಮೀಡಿಯಾ ಬಳಸಿಕೊಂಡು ಜನರ ಮೈಂಡ್ manipulate ಮಾಡಿ, ಅಧಿಕಾರದ ಚುಕ್ಕಾಣಿ ಹಿಡಿದರೆ, ಇದಾವುದು ಅರ್ಥವಾಗದೆ ಇನ್ನು ಹಳೆಯ ಬಂದೂಕುಗಳನ್ನೇ ಬಳಸಿಕೊಂಡು ಯುದ್ದಕ್ಕೆ ಹೋಗಿ ಸತತವಾಗಿ ಸೋಲುತ್ತಿರುವ ಬೇರೆಯ ಪಕ್ಷಗಳು ಅಧೀರರ ಗುಂಪಾಗಿದೆ.

ನಿಮ್ಮ ಪ್ರತಿಕ್ರಿಯೆಗಾಗಿ : tv9kannadadigital@gmail.com

ಗಮನಿಸಿ: ‘ನಿಮ್ಮ ಟೈಮ್​ಲೈನ್’ ಈ ಅಂಕಣದಲ್ಲಿ ನಿಮ್ಮ ಫೇಸ್​ಬುಕ್​ ಬರಹಗಳು ಪ್ರಕಟವಾಗುತ್ತವೆ; ಯಾವುದೇ ವಿಚಾರ, ವಿಷಯ, ಆಶಯ, ಅಭಿಪ್ರಾಯ, ಪ್ರಸಂಗ, ಘಟನೆ, ಮಾಹಿತಿ, ನೆನಪು ಹೀಗೆ ಯಾವುದೂ, ಏನೂ. ನಿಮ್ಮ ಹೆಸರು, ವೃತ್ತಿ, ಊರು, ಮೊಬೈಲ್ ನಂಬರ್, ನಿಮ್ಮ ಫೋಟೋ ಸಮೇತ ಮೇಲ್ ಮಾಡಿ. ಜೊತೆಗೆ ‘ನಿಮ್ಮ ಟೈಮ್​ಲೈನ್’ ಅಂಕಣಕ್ಕೆ ಎನ್ನುವುದನ್ನು ಬರೆಯಲು ಮರೆಯದಿರಿ. ಆಯ್ಕೆಯಾದ ಬರಹಗಳನ್ನು ಪ್ರಕಟಿಸಲಾಗುವುದು. tv9kannadadigital@gmail.com

ಇದನ್ನೂ ಓದಿ : ನಿಮ್ಮ ಟೈಮ್​ಲೈನ್: ಯಾರಿಗೆ ಬೇಕು ರಾಮರಾಜ್ಯ? ಓ ಕಲ್ಕಿಯೇ ಬೇಗ ಬಾ, ಹೆಣ್ಣುಗಳೆಲ್ಲರ ಅಂಕೆ ತಪ್ಪಿಸು ಬಾ

Published On - 12:38 pm, Fri, 22 April 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ