ನಿಮ್ಮ ಟೈಮ್​ಲೈನ್: ನಿರ್ಲಕ್ಷ್ಯಕ್ಕೊಳಗಾಗಿರುವ ಏಷಿಯಾದ ಪ್ರಥಮ ಜಲವಿದ್ಯುತ್ ಕೇಂದ್ರ ಶಿವನಸಮುದ್ರ

Shivanasamudra : ‘ಈ ಊರಿನ ಮೂಲಸ್ವರೂಪ ಉಳಿಸಿಕೊಂಡೇ ಇದರ ಗರಿಮೆಯನ್ನು ಕಾಪಾಡಿಕೊಳ್ಳಬಹುದು. ಸ್ಥಳೀಯ ಪಂಚಾಯಿತಿ, ಕೆಪಿಸಿಎಲ್, ಪ್ರವಾಸೋದ್ಯಮ ಇಲಾಖೆ ಜಂಟಿಕ್ರಮ ಕೈಗೊಂಡರೆ ಪ್ರವಾಸಿಗರಿಗೂ ಸಂತೋಷ, ಸ್ಥಳೀಯರಿಗೂ ಉದ್ಯೋಗಾವಕಾಶ.

ನಿಮ್ಮ ಟೈಮ್​ಲೈನ್: ನಿರ್ಲಕ್ಷ್ಯಕ್ಕೊಳಗಾಗಿರುವ ಏಷಿಯಾದ ಪ್ರಥಮ ಜಲವಿದ್ಯುತ್ ಕೇಂದ್ರ ಶಿವನಸಮುದ್ರ
ಡಾ. ಆರ್. ಸಂತೋಷ್ ನಾಯಕ್ | ಚಿತ್ರಸೌಜನ್ಯ : ಅಂತರ್ಜಾಲ
Follow us
ಶ್ರೀದೇವಿ ಕಳಸದ
|

Updated on:Apr 20, 2022 | 11:00 AM

ನಿಮ್ಮ ಟೈಮ್​ಲೈನ್ : 1902 ರಲ್ಲಿ ನಮ್ಮೂರು ಶಿವನಸಮುದ್ರ (ಬ್ಲಫ್) ದಲ್ಲಿ ಏಷಿಯಾದ ಪ್ರಥಮ ಜಲವಿದ್ಯುತ್ ಕೇಂದ್ರ ಸ್ಥಾಪನೆ ಆಗಿ, ಅಲ್ಲಿಂದ ಮೈಸೂರು, ಬೆಂಗಳೂರು ಮತ್ತು ಕೋಲಾರದ ಚಿನ್ನದ ಗಣಿಗಳಿಗೆ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ ನೀಡಲಾಯಿತು. ಹಾಗೆಯೇ ಬೆಂಗಳೂರಿಗೆ ಕುಡಿವ ನೀರಿನ ಮೊದಲ ಯೋಜನೆಯು ಸಹ ಇಲ್ಲಿಯದೆ. ಇಲ್ಲಿನ ಗಗನಚುಕ್ಕಿ ಜಲಪಾತವಂತೂ ಜಗತ್ಪ್ರಸಿದ್ದ. ಪ್ರವಾಸಿಗರು ವರ್ಷವಿಡೀ ಬರುತ್ತಾರೆ. ಇಷ್ಟೆಲ್ಲಾ ಇದ್ದರೂ ಪ್ರವಾಸೋದ್ಯಮದ ದೃಷ್ಟಿಯಿಂದ ಹಿಂದುಳಿದ, ಕೆಪಿಸಿಎಲ್​ನಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಊರು ನನ್ನದು; ಮೊದಲು ಟ್ರಾಲಿ ಮೂಲಕ ವಿದ್ಯುತ್ ಕೇಂದ್ರ ನೋಡಲು ಪ್ರವಾಸಿಗರಿಗೆ ಅವಕಾಶವಿತ್ತು. ಭದ್ರತೆ ಕಾರಣಕ್ಕೆ ಅದನ್ನು ನಿಲ್ಲಿಸಲಾಯಿತು. ಈಗ ಕೆಪಿಸಿಎಲ್ ಸುಪರ್ದಿಯಲ್ಲಿ ಇರುವ ಊರು ಹಿಂದೆ ಕೆಇಬಿ ನಿಯಂತ್ರಣದಲ್ಲಿರುವಾಗ ಬಹಳ ಸೊಗಸಾಗಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಈಗಲೂ ಕಾಲ ಮಿಂಚಿಲ್ಲ, ಇರುವ ಊರನ್ನು ಸ್ಥಳೀಯ ಪಂಚಾಯಿತಿ, ಕೆಪಿಸಿಎಲ್ ಹಾಗೂ ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಈ ಕೆಲವು ಕ್ರಮಗಳನ್ನು ಕೈಗೊಂಡು ಅಭಿವೃದ್ಧಿ ಪಡಿಸಿದರೆ, ಏಷಿಯಾದ ಮೊದಲ ಜಲ ವಿದ್ಯುತ್ ಕೇಂದ್ರದ ಗರಿಮೆಯನ್ನು ಕಾಪಾಡಿಕೊಳ್ಳಬಹುದು. ಪ್ರವಾಸಿಗರು ಸಂತೋಷ ಪಡಬಹುದು ಹಾಗೂ ಸ್ಥಳೀಯರಿಗೆ ಉದ್ಯೋಗವೂ ಹೆಚ್ಚಬಹುದು. ಡಾ. ಆರ್. ಸಂತೋಷ್ ನಾಯಕ್, ಪ್ರಾಧ್ಯಾಪಕ, ಮೈಸೂರು ವಿಶ್ವವಿದ್ಯಾಲಯ.

1. ಮೈಸೂರು ಸಂಸ್ಥಾನವು ಬ್ರಿಟಿಷರ ವಿನ್ಯಾಸದೊಂದಿಗೆ ನಿರ್ಮಿಸಿದ ಈ ಊರನ್ನು ಮೊದಲಿನಂತೆ ಉತ್ತಮ ರಸ್ತೆ, ಬೀದಿ ದೀಪಗಳು, ಉದ್ಯಾನ, ರಂಗಮಂದಿರ, ಆಟದ ಮೈದಾನ, ಶಾಲೆ, ಈಜುಕೊಳ ಮೊದಲಾದವನ್ನು ದುರಸ್ತಿ ಮಾಡುವುದು ಅಥವಾ ಪುನರ್ ನಿರ್ಮಿಸುವುದು.

2. ಟ್ರಾಲಿಯ ಹಳೆಯ ಟ್ರ್ಯಾಕ್ ಮೇಲೆ ಪ್ರವಾಸಿಗರಿಗೆ ಕಣಿವೆ ನೋಡಿ ಬರಲು ಪ್ರತ್ಯೇಕ ಮಾರ್ಗ ರೂಪಿಸಿ ಪ್ರವಾಸೋದ್ಯಮಕ್ಕೆ ದಾರಿ ಮಾಡಬಹುದು. ಇದರಿಂದ ಆರ್ಥಿಕವಾಗಿ ಕೆಪಿಸಿಎಲ್​ಗೆ ಲಾಭವಿದೆ.

3. ವಿದ್ಯುತ್ ಕೇಂದ್ರದ ವೀಕ್ಷಣೆಗೆ ಸಾಧ್ಯವಿಲ್ಲದೆ ಹೋದರು, ಅದರ ಮ್ಯೂಸಿಯಮ್ ಸ್ಥಾಪಿಸಿ, ವಿದ್ಯುತ್ ಉತ್ಪಾದನೆಯ ಸಂಪೂರ್ಣ ತಿಳಿವಳಿಕೆ ನೀಡುವುದು.

4. ಜಲಪಾತದ ಬಳಿ ಸುಸಜ್ಜಿತ, ಅತ್ಯಾಧುನಿಕ ಅಕ್ವೇರಿಯಂ ನಿರ್ಮಿಸುವುದು.

5. ವಾಟರ್ ಥೀಮ್ ಪಾರ್ಕ್ ಮಾಡುವುದು.

6. ಜಲಪಾತ ದ ಬಳಿ ಸುಸಜ್ಜಿತ ಪಾರ್ಕಿಂಗ್, ಶೌಚಾಲಯ, ಉದ್ಯಾನ ನಿರ್ಮಾಣ ಮಾಡುವುದು.

7. ಪ್ಲಾಸ್ಟಿಕ್ ಹಾಗೂ ಕಸಮುಕ್ತ ಪ್ರದೇಶವನ್ನಾಗಿ ಘೋಷಿಸುವುದು.

8. ನದಿ ಮತ್ತು ಕೆರೆ ಬೋಟಿಂಗ್, ಸಾಹಸ ಕ್ರೀಡೆಗಳು

9. ಕಣಿವೆ ಚಾರಣ

10. ಬ್ಲಫ್ ಪರಿಚಯಾತ್ಮಕ ಪ್ರವಾಸ, ಹಿಂದೆ ಊರನ್ನು ಹೇಗೆ ವಿನ್ಯಾಸ ಮಾಡಿದ್ದರು ಎಂಬುದರ ಪರಿಚಯ, ಟೌನ್ ಪ್ಲ್ಯಾನಿಂಗ್, ಸಾಮಾಜಿಕ ಪ್ರಾಮುಖ್ಯ ಹೀಗೆ ಅನೇಕ ಕಾರಣಗಳಿಗೆ ಮುಖ್ಯವಾಗುತ್ತದೆ.

ಹೀಗೆ ಇವೆಲ್ಲದರ ಮೂಲಕ ಊರನ್ನು ಆಕರ್ಷಕವನ್ನಾಗಿಸುವುದರ ಜೊತೆಗೆ ಈಗಾಗಲೇ ಲಕ್ಷಾಂತರ ಜನ ಪ್ರವಾಸಿಗರು ಬರುವ ಪ್ರದೇಶವನ್ನು ಮತ್ತಷ್ಟು ಪ್ರೇಕ್ಷಣೀಯವನ್ನಾಗಿಸುವುದರ ಜೊತೆಗೆ ಇತಿಹಾಸದಲ್ಲಿ ಪ್ರಥಮ ಎನ್ನುವ ಹೆಗ್ಗಳಿಕೆ ಇರುವ ಊರನ್ನು ಅದರ ಮೂಲ ಸ್ವರೂಪದಲ್ಲಿ ಕಾಪಾಡಿಕೊಂಡು, ಅನೇಕರಿಗೆ ಹೊಸ ಉದ್ಯೋಗಗಳ ಅವಕಾಶವನ್ನು ನೀಡುವಂತಾಗಬೇಕು. ಪ್ರವಾಸಿ ತಾಣಗಳ, ಐತಿಹಾಸಿಕ ಮಹತ್ವದ ಸ್ಥಳಗಳ ಅಭಿವೃದ್ಧಿಯಲ್ಲಿ ಸದಾ ಹಿಂದೆ ಇರುವ ನಮ್ಮ ರಾಜ್ಯ ಸರ್ಕಾರ, ಮಂಡ್ಯ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಎಲ್ಲರೂ ಗಮನ ಹರಿಸಿದರೆ ಒಳ್ಳೆಯದು.

ನಮ್ಮೂರ ಕುರಿತು ಕವಿ ಡಿವಿಜಿ  ‘ಶಿವನಸಮುದ್ರ’ ಎಂಬ ಕವಿತೆ ಬರೆದಿದ್ದಾರೆ. ಆ ಕವಿತೆಯ ಕೊನೆಯ ಸಾಲುಗಳು ಹೀಗಿವೆ:

ಕನ್ನಡ ನಾಡಿನ ಕುತುಕಂ ಕನ್ನಡಿಗರ ಸಾಹಸಕ್ಕೆ ಕನ್ನಡಿ ಮೇಣೀ ಕನ್ನಡಿಗರ ಭಾಗ್ಯದ ನಿಧಿ ಯುನ್ನತಿಯಂ ಪಡೆದು ಬಾಳ್ಗೆ ಶಿವನಸಮುದ್ರಂ

*

ಇದನ್ನೂ ಓದಿ : ನಿಮ್ಮ ಟೈಮ್​ಲೈನ್ : ಅದ್ವೈತದಲ್ಲಿರುವುದು ಬರೀ ಚೈತನ್ಯ! ಇನ್ನು ಹಿಂದೂಮುಸ್ಲಿಂ, ಗಂಡುಹೆಣ್ಣು ಎಲ್ಲಿ ನುಸಳಬೇಕು ಮಣ್ಣು?

ಪ್ರತಿಕ್ರಿಯೆಗಾಗಿ : tv9kannadadigital@gmail.com

ಗಮನಿಸಿ: ನಿಮ್ಮ ಟೈಮ್​ಲೈನ್ ಆಗಾಗ ಪ್ರಕಟವಾಗುವ ಈ ಅಂಕಣದಲ್ಲಿ ನಿಮ್ಮ ಫೇಸ್​ಬುಕ್​ ಬರಹಗಳು ಪ್ರಕಟವಾಗುತ್ತವೆ; ಯಾವುದೇ ವಿಚಾರ, ವಿಷಯ, ಆಶಯ, ಅಭಿಪ್ರಾಯ, ಪ್ರಸಂಗ, ಘಟನೆ, ಮಾಹಿತಿ, ನೆನಪು ಹೀಗೆ ಯಾವುದೂ, ಏನೂ. ನಿಮ್ಮ ಹೆಸರು, ವೃತ್ತಿ, ಊರು, ಮೊಬೈಲ್ ನಂಬರ್, ನಿಮ್ಮ ಫೋಟೋ ಸಮೇತ ಮೇಲ್ ಮಾಡಿ. ಜೊತೆಗೆ ‘ನಿಮ್ಮ ಟೈಮ್​ಲೈನ್’ ಅಂಕಣಕ್ಕೆ ಎನ್ನುವುದನ್ನು ಬರೆಯಲು ಮರೆಯದಿರಿ. ಆಯ್ಕೆಯಾದ ಬರಹಗಳನ್ನು ಪ್ರಕಟಿಸಲಾಗುವುದು. tv9kannadadigital@gmail.com

Published On - 10:48 am, Wed, 20 April 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ