ಆ ಮಾತನ್ನು ನಾವು ಹೇಳಿದ್ರೆ ಟ್ರೋಲ್ ಆಗ್ತೀವಿ ಎಂದ ಕಿಚ್ಚ ಸುದೀಪ್
ಸುದೀಪ್ ಅವರು ಬಿಡುವು ಮಾಡಿಕೊಂಡು ‘ತೋತಾಪುರಿ’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಅವರು ಕೆಲವು ಮಾತುಗಳನ್ನು ಹೇಳಿದ್ದಾರೆ. ಈ ಚಿತ್ರದ ಟ್ರೇಲರ್ನಲ್ಲಿ ಡಬಲ್ ಮೀನಿಂಗ್ ಬರುವ ಹಲವು ಡೈಲಾಗ್ಗಳಿವೆ. ಈ ಡೈಲಾಗ್ಗೆ ಜನರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ
ಕಿಚ್ಚ ಸುದೀಪ್ ಅವರು (Kichcha Sudeep) ಚಿತ್ರರಂಗದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಸದ್ಯ ಅವರ ಸಂಪೂರ್ಣ ಗಮನ ‘ವಿಕ್ರಾಂತ್ ರೋಣ’ ಚಿತ್ರದ (Vikrant Rona) ಮೇಲಿದೆ. ಜುಲೈ ತಿಂಗಳಲ್ಲಿ ಈ ಸಿನಿಮಾ ತೆರೆಗೆ ಬರುತ್ತಿದ್ದು, ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಲು ಸಿದ್ಧತೆ ನಡೆದಿದೆ. ಈ ಕೆಲಸಗಳ ಮಧ್ಯೆ ಸುದೀಪ್ ಅವರು ಬಿಡುವು ಮಾಡಿಕೊಂಡು ‘ತೋತಾಪುರಿ’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಅವರು ಕೆಲವು ಮಾತುಗಳನ್ನು ಹೇಳಿದ್ದಾರೆ. ಈ ಚಿತ್ರದ ಟ್ರೇಲರ್ನಲ್ಲಿ ಡಬಲ್ ಮೀನಿಂಗ್ ಬರುವ ಹಲವು ಡೈಲಾಗ್ಗಳಿವೆ. ಈ ಡೈಲಾಗ್ಗೆ ಜನರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ‘ಈ ರೀತಿಯ ಡೈಲಾಗ್ಗಳನ್ನು ಜಗ್ಗೇಶ್ (Jaggesh) ಹೇಳಿದರೆ ಜನರು ನಗುತ್ತಾರೆ. ಆದರೆ, ನಾವು ಈ ಡೈಲಾಗ್ ಹೇಳಿದರೆ ಜನರು ಟ್ರೋಲ್ ಮಾಡುತ್ತಾರೆ. ಇದು ಏಕೆ ಎಂಬುದು ಇನ್ನೂ ಗೊತ್ತಾಗಿಲ್ಲ’ ಎಂದರು ಸುದೀಪ್.
ಇದನ್ನೂ ಓದಿ: ‘ನವರಸ ನಾಯಕ ಆಗಿದ್ರೆ ಮಾತ್ರ ಹೀಗೆ ನಟಿಸೋಕೆ ಸಾಧ್ಯ’; ಸುದೀಪ್ ನಟನೆ ಬಗ್ಗೆ ಜಗ್ಗೇಶ್ ಹೊಗಳಿಕೆ
‘ನಾನು ಸಿನಿಮಾಗೆ ಬೆಂಬಲ ನೀಡಿಲ್ಲ ಅಂದ್ರೂ ಸುದ್ದಿಯಲ್ಲಿ ಇರ್ತೀನಿ’; ಸುದೀಪ್ ಹೀಗೆ ಹೇಳಿದ್ದು ಏಕೆ?