ದಿ ನಂಜುಂಡಸ್ವಾಮಿ ಚಿಂತನೆಯ ‘ಬಾರುಕೋಲು’ ಪುಸ್ತಕ ಬಿಡುಗಡೆ ಮಾಡಿದ ಸಿದ್ದರಾಮಯ್ಯ ತನ್ನ ರಾಜಕೀಯ ಗುರು ಅವರೇ ಎಂದರು
ಸರ್ಕಾರಗಳ ವಿರುದ್ಧ ಚಳುವಳಿಗಳನ್ನು ನಡೆಸುವಾಗ ನಂಜುಂಡಸ್ವಾಮಿಯವರು ಬಾರುಕೋಲು ಚಳುವಳಿ ಅನ್ನುತ್ತಿದ್ದರು ಎಂದು ಸಿದ್ದರಾಮಯ್ಯ ನೆನಪಿಸಿಕೊಂಡರು. 80 ರ ದಶಕದಲ್ಲಿ ಅವರ ಸಮಾಜವಾದಿ ಸಿದ್ಧಾಂತಗಳಿಂದಾಗಿ ತಮ್ಮಂತೆ ಅನೇಕರು ಅವರೆಡೆ ಆಕರ್ಷಿತರಾಗಿದ್ದರು, ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.
Bengakuru: ಖ್ಯಾತ ಸಾಹಿತಿ ಮತ್ತು ಪತ್ರಕರ್ತ ನಟರಾಜ್ ಹುಳಿಯಾರು (Nataraj Huliyaru) ಅವರು ಬರೆದಿರುವ ‘ಬಾರುಕೋಲು’ (Barukolu) ಪುಸ್ತಕವನ್ನು ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು (Siddaramaiah) ಗಾಂಧಿನಗರದಲ್ಲಿ ಗುರುವಾರ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಲೇಖಕ ಹುಳಿಯಾರು, ರೈತ ಸಂಘದ ಸಂಸ್ಥಾಪಕ ದಿವಂಗತ ಪ್ರೊ. ನಂಜುಂಡಸ್ವಾಮಿಯವ ಪುತ್ರಿ ವಚನ ಚುಕ್ಕಿ ಮತ್ತು ಹಲವಾರು ಸಾಹಿತ್ಯಾಸಕ್ತರು ಹಾಜರಿದ್ದರು. ಖುದ್ದು ಒಬ್ಬ ಸಾಹಿತ್ಯ ಪ್ರೇಮಿಯಾಗಿರುವ ಸಿದ್ದರಾಮಯ್ಯನವರು ಚುಕ್ಕಿ ಅವರೊಂದಿಗೆ ಆತ್ಮೀಯವಾಗಿ ಹರಟಿದರು. ಮಾಜಿ ಮುಖ್ಯಮಂತ್ರಿಗಳು ಮತ್ತು ನಂಜುಂಡಸ್ವಾಮಿಯವ ನಡುವೆ ಗಾಢ ಸ್ನೇಹವಿತ್ತು. ಅವರು ನಡೆಸುತ್ತಿದ್ದ ಚಳುವಳಿಗಳಿಗೆ ಸಿದ್ದರಾಮಯ್ಯ ಬೆಂಬಲ ಸೂಚಿಸುತ್ತಿದ್ದರು.
ದಿವಂಗತರ ಕುಟುಂಬದ ಸದಸ್ಯರ ಬಗ್ಗೆಯೂ ಸಿದ್ದರಾಮಯ್ಯನವರಿಗೆ ಪೂರ್ತಿಯಾಗಿ ಗೊತ್ತಿದೆ. ನಿಮ್ಮ ಸಹೋದರ ಈಗ ಏನು ಮಾಡುತ್ತಿದ್ದಾರೆ ಅಂತ ಚುಕ್ಕಿ ಅವರನ್ನು ಸಿದ್ದರಾಮಯ್ಯ ಪ್ರಶ್ನಿಸುತ್ತಿರುವುದು ವಿಡಿಯೋನಲ್ಲಿ ಕೇಳಿಸುತ್ತದೆ.
ನಂಜುಂಡಸ್ವಾಮಿಯವರ ಚಿಂತನೆಗಳನ್ನೇ ‘ಬಾರುಕೋಲು’ ಪುಸ್ತಕದಲ್ಲಿ ಚರ್ಚಿಸಲಾಗಿದೆ. ಪುಸ್ತಕ ಬಿಡುಗಡೆ ಮಾಡಿದ ಬಳಿಕ ಸಿದ್ದರಾಮಯ್ಯನವರು ಬಾರುಕೋಲೊಂದನ್ನು ತಮ್ಮ ಹೆಗಲ ಮೇಲೆ ಹಾಕಿಕೊಂಡು ಮಾಧ್ಯಮದ ಕೆಮೆರಾಗಳಿಗೆ ಪೋಸು ನೀಡಿದರು. ಅಮೇಲೆ ಬಾರುಕೋಲನ್ನು ತೋರಿಸಿ ಇದನ್ನು ಸರ್ಕಾರದ ವಿರುದ್ಧ ಬೀಸುತ್ತೇನೆ ಎಂದರು. ನಂತರ ಮಾತಾಡಿದ ಸಿದ್ದರಾಮಯ್ಯನವರು, ತಾವು ರಾಜಕೀಯಕ್ಕೆ ಬರಲು ನಂಜುಂಡಸ್ವಾಮಿಯವರೇ ಕಾರಣ, ಅವರೇ ತಮ್ಮ ಆದರ್ಶ ಎಂದು ಹೇಳಿದರು.
ಸರ್ಕಾರಗಳ ವಿರುದ್ಧ ಚಳುವಳಿಗಳನ್ನು ನಡೆಸುವಾಗ ನಂಜುಂಡಸ್ವಾಮಿಯವರು ಬಾರುಕೋಲು ಚಳುವಳಿ ಅನ್ನುತ್ತಿದ್ದರು ಎಂದು ಸಿದ್ದರಾಮಯ್ಯ ನೆನಪಿಸಿಕೊಂಡರು. 80 ರ ದಶಕದಲ್ಲಿ ಅವರ ಸಮಾಜವಾದಿ ಸಿದ್ಧಾಂತಗಳಿಂದಾಗಿ ತಮ್ಮಂತೆ ಅನೇಕರು ಅವರೆಡೆ ಆಕರ್ಷಿತರಾಗಿದ್ದರು, ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.
ಇದನ್ನೂ ಓದಿ: ಸರ್ಕಾರದ ವಿರುದ್ಧ ಗುಡುಗುವ ಸಿದ್ದರಾಮಯ್ಯ ಕೋಡುಬಳೆ ತಿನ್ನುವಾಗ ನೆತ್ತಿಗೇರಿಸಿಕೊಂಡು ವೇದಿಕೆ ಮೇಲೆ ಕೆಮ್ಮಿದ ಪ್ರಸಂಗ!