ಕಂಠಮಟ್ಟ ಕುಡಿದ ವ್ಯಕ್ತಿಯೊಬ್ಬ ಬೆಳಗಾವಿಯ ರಸ್ತೆಯೊಂದಲ್ಲಿ ಟ್ರಾಫಿಕ್ ಕಂಟ್ರೋಲರ್ ಆಗಿದ್ದು!

ಕಂಠಮಟ್ಟ ಕುಡಿದ ವ್ಯಕ್ತಿಯೊಬ್ಬ ಬೆಳಗಾವಿಯ ರಸ್ತೆಯೊಂದಲ್ಲಿ ಟ್ರಾಫಿಕ್ ಕಂಟ್ರೋಲರ್ ಆಗಿದ್ದು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 22, 2022 | 1:14 AM

ಈ ಮಹಾಶಯನ ಹೆಸರು ವಿಳಾಸ ನಮಗೆ ಗೊತ್ತಿಲ್ಲ. ಬೆಂಗಳೂರಲ್ಲಿ ಹೇಳುವ ಹಾಗೆ ಕಂಠಮಟ್ಟ ಎಣ್ಣೆ ಹೊಡೆದು, ಫುಲ್ ಟೈಟ್ ಆಗಿದ್ದಾನೆ. ನಡು ರಸ್ತೆಯಲ್ಲಿ ಪುಷ್ ಅಪ್ಸ್ ಮಾಡುತ್ತಾ ವಾಹನಗಳಲ್ಲಿ ಸಂಚರಿಸುತ್ತಿರುವವರಿಗೆ ಅಡ್ಡಿ ಉಂಟು ಮಾಡುತ್ತಿದ್ದಾನೆ.

ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು… ಏನು ಮಜ ಏನು ಮಜ ಕುಡುಕರ ಸಾಮ್ರಾಜ್ಯ… ಬಿಸಿಯಾಗಿದೆ ನಶೆಯೇರಿದೆ ಮಿತಿ ಮೀರಿದೆ ಜೋಪಾನ… ಅಂತ ಬಹಳ ವರ್ಷಗಳ ಮಾಲಾಶ್ರೀ (Malashree) ಅವರು ‘ನಂಜುಂಡಿ ಕಲ್ಯಾಣ’ ಚಿತ್ರದಲ್ಲಿ ಕುಣಿಯುತ್ತಾ ಹಾಡಿದ್ದರು. ಅವರು ಹೇಳಿದ ಹಾಗೆ ಕುಡುಕರ ಸಾಮ್ರಾಜ್ಯದ ಅಧಿಪತಿಯೊಬ್ಬ (emperor) ಇಲ್ಲಿ ನಡುರಸ್ತೆಯಲ್ಲಿ ನಿಂತು ಇದು ರಸ್ತೆಯಲ್ಲ ನನ್ನ ಸಾಮ್ರಾಜ್ಯ (empire) ಎನ್ನುತ್ತಿದ್ದಾನೆ. ಅವನ ಸಾಮ್ರಾಜ್ಯದಲ್ಲಿ ಓಡಾಡುತ್ತಿರುವ ಜನಗಳು ನಡುರಸ್ತೆಯಲ್ಲಿ ತನ್ನ ಯೋಗಕ್ಷೇಮ ಮರೆತು ಪ್ರಜೆಗಳ ಯೋಗಕ್ಷೇಮ ವಿಚಾರಿಸಲು ನಿಂತಿರುವುದನ್ನು ಕಂಡು ಪಕ್ಕಕ್ಕೆ ಸರಿದು ಹೋಗುತ್ತಿದ್ದಾರೆ! ಸಾಮ್ರಾಟನಿಗೆ ತನ್ನ ಪ್ರಜೆಗಳ ಮೇಲೆ ಅದೆಷ್ಟು ಪ್ರೀತಿ ಗೌರವಗಳೆಂದರೆ ತನ್ನ ಅಸ್ತಿತ್ವವನ್ನು ಮರೆತು ಅವರಿಗೆ ದೀರ್ಘ ದಂಡ ನಮಸ್ಕಾರ ಮಾಡುತ್ತಾನೆ!!

ಓಕೆ, ತಮಾಷೆ ಒತ್ತಟ್ಟಿಗಿರಲಿ. ವಿಡಿಯೋನಲ್ಲಿ ಕಾಣುತ್ತಿರುವ ದೃಶ್ಯ ಕುಂದಾನಗರಿ ಬೆಳಗಾವಿಯದ್ದು. ಈ ಮಹಾಶಯನ ಹೆಸರು ವಿಳಾಸ ನಮಗೆ ಗೊತ್ತಿಲ್ಲ ಮಾರಾಯ್ರೇ. ಬೆಂಗಳೂರಲ್ಲಿ ಹೇಳುವ ಹಾಗೆ ಕಂಠಮಟ್ಟ ಎಣ್ಣೆ ಹೊಡೆದು, ಫುಲ್ ಟೈಟ್ ಆಗಿದ್ದಾನೆ. ನಡು ರಸ್ತೆಯಲ್ಲಿ ಪುಷ್ ಆಪ್ಸ್ ಮಾಡುತ್ತಾ ವಾಹನಗಳಲ್ಲಿ ಸಂಚರಿಸುತ್ತಿರುವವರಿಗೆ ಅಡ್ಡಿ ಉಂಟು ಮಾಡುತ್ತಿದ್ದಾನೆ.

ದ್ವಿಚಕ್ರ ವಾಹನಗಳೇನೋ ಪಕ್ಕದಿಂದ ಹೋಗುತ್ತಿವೆ. ಆದರೆ ಟ್ರಕ್ ಗಳಂಥ ಭಾರಿ ವಾಹನಗಳು? ಅವನೆದರು ಒಂದು ಲಾರಿ ಬಂದು ನಿಂತುಬಿಟ್ಟಿದೆ. ಪಕ್ಕದಿಂದ ಹೋಗುವಷ್ಟು ಸ್ಥಳ ಇಲ್ಲ. ಆದರೆ ಕುಡುಕ ಹೇಳೋದನ್ನು ನೋಡಿ. ನಾನು ಸರಿಯುವುದಿಲ್ಲ, ಅಷ್ಟರಲ್ಲೇ ಹೋಗು!!

ಸ್ವಲ್ಪ ಸಮಯದ ನಂತರ ಜನ ಅವನನ್ನು ಪಕ್ಕಕ್ಕೆ ಸರಿಸಿ ವಾಹನಗಳ ಓಡಾಟಕ್ಕೆ ದಾರಿ ಮಾಡಿದರು.

ಇದನ್ನೂ ಓದಿ:   ಬೆಳಗಾವಿ: ಲೈಂಗಿಕ ಕಿರುಕುಳ ನೀಡಿದ ಉಪನ್ಯಾಸಕನಿಗೆ ಚಪ್ಪಲಿ ಏಟು ನೀಡಿ ಬುದ್ದಿ ಕಲಿಸಿದ ಅತಿಥಿ ಉಪನ್ಯಾಸಕಿಯರು, ವಿಡಿಯೋ ವೈರಲ್