AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅವನು ವಿಗ್ ಮತ್ತು ಉಲ್ಲೇಖಿಸಲಾದ ಜಾಗದಲ್ಲಿ ಚಿನ್ನವನ್ನಿಟ್ಟುಕೊಂಡು ಕಸ್ಟಮ್ಸ್ ಅಧಿಕಾರಿಗಳಿಂದ ತಪ್ಪಿಸಿಕೊಳ್ಳುವ ಹವಣಿಕೆಯಲ್ಲಿದ್ದ!

ಅವನು ವಿಗ್ ಮತ್ತು ಉಲ್ಲೇಖಿಸಲಾದ ಜಾಗದಲ್ಲಿ ಚಿನ್ನವನ್ನಿಟ್ಟುಕೊಂಡು ಕಸ್ಟಮ್ಸ್ ಅಧಿಕಾರಿಗಳಿಂದ ತಪ್ಪಿಸಿಕೊಳ್ಳುವ ಹವಣಿಕೆಯಲ್ಲಿದ್ದ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Apr 21, 2022 | 8:49 PM

Share

ಅಂದಹಾಗೆ, ಇವನ ದೇಹದಲ್ಲಿ ಸಿಕ್ಕಿದ್ದು ಕೇವಲ ಒಂದು ಪೊಟ್ಟಣ ಮಾತ್ರ ಅಲ್ಲ ಮಾರಾಯ್ರೇ. ಇನ್ನೂ ಎರಡು ಪೌಚ್​ಗಳನ್ನು ಅವನು ದೇಹದಲ್ಲಿ ಅಡಗಿಸಿಕೊಂಡಿದ್ದ. ಎಲ್ಲಿ ಅಡಗಿಸಿಕೊಂಡಿದ್ದ ಅನ್ನೋದನ್ನು ಖಂಡಿತ ನಿಮಗೆ ತೋರಿಸಲಾಗದು

Delhi: ನೀನು ಚಾಪೆ ಕೆಳಗೆ ತೂರಿದರೆ ನಾನು ರಂಗೋಲಿ ಕೆಳಗೆ ತೂರ್ತೀನಿ ಅನ್ನುವಂತಿದೆ ಒಬ್ಬ ಚಿನ್ನದ ಸ್ಮಗ್ಲರ್ ಮತ್ತು ದೆಹಲಿ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳ (customs officials) ಕತೆ. ಈ ವಿಡಿಯೋನಲ್ಲಿ ಕಾಣುತ್ತಿರುವ ವ್ಯಕ್ತಿಯ ಕ್ಷೌರವೇನೂ ನಡೆಯುತ್ತಿಲ್ಲ ಮಾರಾಯ್ರೇ. ಅಧಿಕಾರಿಗಳು ಅವನು ತಲೆ ಮೇಲೆ ಧರಿಸಿರುವ ವಿಗ್ ಅನ್ನು (wig) ತೆಗೆಯುತ್ತಿದ್ದಾರೆ. ವಿಗ್ ಕೆಳಗೆ ಒಂದು ಹಳದಿ ಪೌಚ್ ಕಾಣುತ್ತಿದೆಯಲ್ಲ, ಅದರಲ್ಲೇ ಇವನು ಕಸ್ಟಮ್ಸ್ ನವರ ಕಣ್ಣು ತಪ್ಪಿಸಿ ಚಿನ್ನದ ಕಳ್ಳಸಾಗಣೆ (gold smuggling) ಮಾಡಿದ್ದು. ಆದರೆ, ಇವನು ಸೇರಾದರೆ ಅಧಿಕಾರಿಗಳು ಸವ್ವಾಸೇರು! ದೆಹಲಿ ಕಸ್ಟಮ್ಸ್ ಕಾರ್ಯಾಲಯ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯ ಪ್ರಕಾರ ಈ ವ್ಯಕ್ತಿ ಅಬು ಧಾಬಿಯಿಂದ ಚಿನ್ನ ಸ್ಮಗಲ್ ಮಾಡಿಕೊಂಡು ದೆಹಲಿಗೆ ಬಂದಿದ್ದ.

ಅಂದಹಾಗೆ, ಇವನ ದೇಹದಲ್ಲಿ ಸಿಕ್ಕಿದ್ದು ಕೇವಲ ಒಂದು ಪೊಟ್ಟಣ ಮಾತ್ರ ಅಲ್ಲ ಮಾರಾಯ್ರೇ. ಇನ್ನೂ ಎರಡು ಪೌಚ್​ಗಳನ್ನು ಅವನು ದೇಹದಲ್ಲಿ ಅಡಗಿಸಿಕೊಂಡಿದ್ದ. ಎಲ್ಲಿ ಅಡಗಿಸಿಕೊಂಡಿದ್ದ ಅನ್ನೋದನ್ನು ಖಂಡಿತ ನಿಮಗೆ ತೋರಿಸಲಾಗದು ಮಾರಾಯ್ರೇ. ಕಷ್ಟಪಟ್ಟು ಹೇಳಬಹುದೆನೋ.

ನೀವು ಅರ್ಥಮಾಡಿಕೊಂಡಿರಬಹುದೆಂಬ ನಂಬಿಕೆ ನಮ್ಮದು. ಓಕೆ ಗೊತ್ತಾಗಿರಲಿಲ್ಲ ಅಂತಾದ್ರೆ ಹೇಳೇಬಿಡ್ತೀವಿ ಮಾರಾಯ್ರೇ.

ಅವನ ಗುದದ್ವಾರದಲ್ಲಿ ಕ್ಯಾಪ್ಸೂಲ್ ಆಕಾರದ ಎರಡು ಪೊಟ್ಟಣಗಳು ಸಿಕ್ಕಿವೆ! ಒಟ್ಟು 686 ಗ್ರಾಮ್ ಚಿನ್ನವನ್ನು ಅವನಿಂದ ಬರಾಮತ್ತು ಮಾಡಲಾಗಿದೆ. ಅಧಿಕಾರಿಗಳ ಪ್ರಕಾರ ಸುಮಾರು ರೂ. 30 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ದೆಹಲಿ ವಿಮಾನ ನಿಲ್ದಾಣದಲ್ಲಿ ಅವನು ಅಮಾಯಕನಂತೆ ನಡೆದು ಹೋಗುತ್ತಿದ್ದಾಗ ಕಸ್ಟಮ್ಸ್ ಅಧಿಕಾರಿಗಳಿಗೂ ಸಂಶಯ ಬಂದಿಲ್ಲ. ಆದರೆ ಅವನ ನಡಿಗೆ ಅಸಹಜ ಅನಿಸಿದ್ದರಿಂದ ತಡೆದು ತಪಾಸಣೆ ನಡೆಸಿದ್ದಾರೆ.

ಇದನ್ನೂ ಓದಿ:  Viral: ಮೂರ್ಛೆ ಹೋಗಿ ಚಲಿಸುತ್ತಿರುವ ರೈಲಿನ ಕೆಳಗೆ ಬಿದ್ದ ಮಹಿಳೆ; ಪವಾಡಸದೃಶ ಪಾರು- ಸಿಸಿಟಿವಿ ವಿಡಿಯೋ ವೈರಲ್