ಪುನೀತ್ ಧ್ವನಿಯಲ್ಲಿ ‘ಜೇಮ್ಸ್’ ನೋಡಿದ ಫ್ಯಾನ್ಸ್ ಏನು ಹೇಳಿದ್ರು?; ಇಲ್ಲಿದೆ ರಿಯಾಕ್ಷನ್
ಮಾರ್ಚ್ 17ರಂದು ಸಿನಿಮಾ ಮೊದಲ ಬಾರಿಗೆ ರಿಲೀಸ್ ಆದಾಗ ಅಪ್ಪು ಧ್ವನಿ ಇಲ್ಲ ಎನ್ನುವ ಕೊರತೆ ಅಭಿಮಾನಿಗಳನ್ನು ಕಾಡಿತ್ತು. ಈಗ ಈ ಕೊರತೆ ನೀಗಿದೆ. ಪುನೀತ್ ಧ್ವನಿಯಲ್ಲೇ ಚಿತ್ರ ಮೂಡಿ ಬಂದಿದೆ.
ಪುನೀತ್ ರಾಜ್ಕುಮಾರ್ (Puneeth Rajkumar) ಅಭಿಮಾನಿಗಳಿಗೆ (ಏಪ್ರಿಲ್ 22) ವಿಶೇಷ ದಿನ. ಅವರ ನಟನೆಯ ಕೊನೆಯ ಸಿನಿಮಾ ‘ಜೇಮ್ಸ್’ ಚಿತ್ರ (James Movie) ರೀ ರಿಲೀಸ್ ಆಗಿದೆ. ಆಧುನಿಕ ತಂತ್ರಜ್ಞಾನ ಬಳಸಿ ಪುನೀತ್ ಅವರ ಧ್ವನಿಯನ್ನು ಈ ಸಿನಿಮಾಗೆ ನೀಡಲಾಗಿದೆ. ಮಾರ್ಚ್ 17ರಂದು ಸಿನಿಮಾ ಮೊದಲ ಬಾರಿಗೆ ರಿಲೀಸ್ ಆದಾಗ ಅಪ್ಪು ಧ್ವನಿ ಇಲ್ಲ ಎನ್ನುವ ಕೊರತೆ ಅಭಿಮಾನಿಗಳನ್ನು ಕಾಡಿತ್ತು. ಈಗ ಈ ಕೊರತೆ ನೀಗಿದೆ. ಪುನೀತ್ ಧ್ವನಿಯಲ್ಲೇ ಚಿತ್ರ ಮೂಡಿ ಬಂದಿದೆ. ಇಂದು ಹಲವು ಕಡೆಗಳಲ್ಲಿ ಫ್ಯಾನ್ಸ್ ಶೋ ಅರೇಂಜ್ ಮಾಡಲಾಗಿತ್ತು. ಸಿನಿಮಾ ನೋಡಿದ ಅನೇಕರು ಭಾವುಕರಾಗಿದ್ದಾರೆ. ‘ಪುನೀತ್ ಅವರೇ ಸಿನಿಮಾಗೆ ಡಬ್ ಮಾಡಿದ್ದಾರೆ ಅನಿಸುತ್ತದೆ. ಅವರು ನಮ್ಮ ಜತೆಯೇ ಇದ್ದಾರೆ ಎನ್ನುವ ಫಿಲ್ ಮೂಡಿದೆ’ ಎಂದಿದ್ದಾರೆ ಫ್ಯಾನ್ಸ್.
ಇದನ್ನೂ ಓದಿ: ‘ಭೀಮ’ ಸಿನಿಮಾ ಮುಹೂರ್ತದಲ್ಲಿ ಪುನೀತ್ರನ್ನು ನೆನೆದ ದುನಿಯಾ ವಿಜಯ್
James Movie: ಇಂದಿನಿಂದ ಪುನೀತ್ ಧ್ವನಿಯಲ್ಲಿ ‘ಜೇಮ್ಸ್’ ರೀ-ಎಂಟ್ರಿ; ಹಲವೆಡೆ ಫ್ಯಾನ್ಸ್ ಶೋ