James Movie: ಇಂದಿನಿಂದ ಪುನೀತ್ ಧ್ವನಿಯಲ್ಲಿ ‘ಜೇಮ್ಸ್’ ರೀ-ಎಂಟ್ರಿ; ಹಲವೆಡೆ ಫ್ಯಾನ್ಸ್ ಶೋ

Puneeth Rajkumar | James Re-Release: ಪ್ರಸ್ತುತ ರಾಜ್ಯದ 65 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಜೇಮ್ಸ್’ ಪ್ರದರ್ಶನ ಕಾಣುತ್ತಿದೆ. ಈ ಚಿತ್ರಮಂದಿರಗಳಲ್ಲಿ ಇನ್ನುಮುಂದೆ ಪುನೀತ್ ರಾಜ್​ಕುಮಾರ್ ಧ್ವನಿಯಲ್ಲಿಯೇ ಚಿತ್ರವನ್ನು ವೀಕ್ಷಿಸಬಹುದು. ಬೆಂಗಳೂರಿನ ಅನುಪಮಾ ಚಿತ್ರಮಂದಿರದಲ್ಲಿ ಅಪ್ಪು ಧ್ವನಿಯಲ್ಲಿಯೇ ಚಿತ್ರದ ಮೊದಲ ಪ್ರದರ್ಶನ ನಡೆಯಲಿದೆ.

James Movie: ಇಂದಿನಿಂದ ಪುನೀತ್ ಧ್ವನಿಯಲ್ಲಿ ‘ಜೇಮ್ಸ್’ ರೀ-ಎಂಟ್ರಿ; ಹಲವೆಡೆ ಫ್ಯಾನ್ಸ್ ಶೋ
ಪುನೀತ್
Follow us
TV9 Web
| Updated By: shivaprasad.hs

Updated on:Apr 22, 2022 | 10:04 AM

ಪುನೀತ್ ರಾಜ್​ಕುಮಾರ್ (Puneeth Rajkumar) ನಾಯಕರಾಗಿ ಕಾಣಿಸಿಕೊಂಡಿದ್ದ ‘ಜೇಮ್ಸ್’ (James Movie) ಚಿತ್ರ ಮಾರ್ಚ್ 17ರಂದು ಅವರ ಜನ್ಮದಿನಾಚರಣೆಯ ಪ್ರಯುಕ್ತ ವಿಶ್ವಾದ್ಯಂತ ತೆರೆ ಕಂಡಿತ್ತು. ಈ ಚಿತ್ರದೊಂದಿಗೆ ಕರುನಾಡಿನ ಪ್ರೇಕ್ಷಕರು ಭಾವನಾತ್ಮಕವಾಗಿ ಕನೆಕ್ಟ್ ಆಗಿದ್ದರು. ಎಲ್ಲೆಡೆಯಿಂದ ಚಿತ್ರಕ್ಕೆ ಅದ್ಭುತ ಸ್ವಾಗತ ದೊರೆಯಿತು. ‘ಜೇಮ್ಸ್ ಜಾತ್ರೆ’ ಹೆಸರಿನಲ್ಲಿ ಅಭಿಮಾನಿಗಳು ಪುನೀತ್ ಚಿತ್ರವನ್ನು ಸಂಭ್ರಮಿಸಿದರು. ಪುನೀತ್ ಭಾಗದ ಚಿತ್ರೀಕರಣವಾಗಿದ್ದರೂ ಅಪ್ಪು ಡಬ್ಬಿಂಗ್ ಮಾಡಿರಲಿಲ್ಲ. ಹೀಗಾಗಿ ಚಿತ್ರತಂಡ ಶಿವರಾಜ್​ಕುಮಾರ್ (Shivarajkumar) ಧ್ವನಿಯಲ್ಲಿ ಚಿತ್ರವನ್ನು ರಿಲೀಸ್ ಮಾಡಿತ್ತು. ಆದರೆ ಪುನೀತ್ ಧ್ವನಿಯನ್ನು ಚಿತ್ರಕ್ಕೆ ಅಳವಡಿಸಲು ತಂಡ ಪ್ರಯತ್ನ ಮುಂದುವರೆಸಿತ್ತು. ಅಂತಿಮವಾಗಿ ಅದರಲ್ಲಿ ಯಶಸ್ವಿಯೂ ಆಯಿತು. ಪರಿಣಾಮವಾಗಿ ಇಂದಿನಿಂದ (ಏ.22) ‘ಜೇಮ್ಸ್’ ಅಪ್ಪು ಧ್ವನಿಯಲ್ಲೇ ರಾಜ್ಯಾದ್ಯಂತ ಪ್ರದರ್ಶನ ಕಾಣಲಿದೆ.

ಪ್ರಸ್ತುತ ರಾಜ್ಯದ 65 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಜೇಮ್ಸ್’ ಪ್ರದರ್ಶನ ಕಾಣುತ್ತಿದೆ. ಈ ಚಿತ್ರಮಂದಿರಗಳಲ್ಲಿ ಇನ್ನುಮುಂದೆ ಪುನೀತ್ ರಾಜ್​ಕುಮಾರ್ ಧ್ವನಿಯಲ್ಲಿಯೇ ಚಿತ್ರವನ್ನು ವೀಕ್ಷಿಸಬಹುದು. ಬೆಂಗಳೂರಿನ ಅನುಪಮಾ ಚಿತ್ರಮಂದಿರದಲ್ಲಿ ಅಪ್ಪು ಧ್ವನಿಯಲ್ಲಿಯೇ ಚಿತ್ರದ ಮೊದಲ ಪ್ರದರ್ಶನ ನಡೆಯಲಿದೆ. ಇದಲ್ಲದೇ ಹಲವೆಡೆ ಫ್ಯಾನ್ಸ್ ಶೋಗಳನ್ನು ಏರ್ಪಡಿಸಲಾಗಿದೆ.

ಆಧುನಿಕ ತಂತ್ರಜ್ಞಾನದೊಂದಿಗೆ ಜೇಮ್ಸ್ ರೀ-ರಿಲೀಸ್ ಆಗುತ್ತಿರುವ ನಡುವೆಯೇ ಫ್ಯಾನ್ಸ್ ಸಂಭ್ರಮ ಹೆಚ್ಚಲು ಇನ್ನೊಂದು ಕಾರಣವೂ ಇದೆ. ಸದ್ಯದಲ್ಲೇ 50ನೇ ದಿನವನ್ನ ಜೇಮ್ಸ್ ಪೂರೈಸಲಿದೆ. ಹೀಗಾಗಿ ಅಭಿಮಾನಿಗಳು ಖುಷ್ ಆಗಿದ್ದು, ಅದನ್ನು ಭರ್ಜರಿಯಾಗಿ ಆಚರಿಸಲು ಸಿದ್ಧತೆ ನಡೆಸಿದ್ದಾರೆ. ಚಿತ್ರತಂಡ ಎಲ್ಲೆಡೆ ಪುನೀತ್ ಧ್ವನಿಯಲ್ಲಿರುವ ಹೊಸ ಅವತರಣಿಕೆ ಫ್ಯಾನ್ಸ್ ಶೋ ಆಯೋಜಿಸಲು ಚಿಂತನೆ ನಡೆಸಿದೆ.

ಪುನೀತ್ ಧ್ವನಿಯಲ್ಲಿ ‘ಜೇಮ್ಸ್’:

ಹೊಸ ತಂತ್ರಜ್ಞಾನದ ಮೂಲಕ ಪುನೀತ್ ಧ್ವನಿ ಅಳವಡಿಕೆ:

ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಧ್ವನಿ ತಂತ್ರಜ್ಞರು ಪುನೀತ್ ಧ್ವನಿಯನ್ನು ಚಿತ್ರಕ್ಕೆ ಅಳವಡಿಸಿದ ಹಿನ್ನೆಲೆ ವಿವರಿಸಿದ್ದರು. ‘‘ಭಾರತದಲ್ಲಿ ಮಾತ್ರವಲ್ಲ ಪ್ರಪಂಚದಲ್ಲಿಯೇ ಇದು ಮೊದಲ ಪ್ರಯತ್ನವಾಗಿದೆ. ನಾವು ಹಲವು ವರ್ಷಗಳಿಂದ ಈ ಬಗ್ಗೆ ರೀಸರ್ಚ್ ಮಾಡುತ್ತಿದ್ದೆವು. ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಎಲ್ಲಾ ಭಾಷೆಗೆ ಅದೇ ಕಲಾವಿದರ ವಾಯ್ಸ್ ಇದ್ರೆ ಹೇಗಿರುತ್ತೆ ಅಂತ ಟ್ರೈ ಮಾಡುತ್ತಿದ್ದೆವು. ಶ್ರೀಕಾಂತ್ ಸರ್ ಹೇಳಿದ್ರು, ಜೇಮ್ಸ್‌ ಸಿನಿಮಾ ಬಗ್ಗೆ ಪರಿಸ್ಥಿತಿಯ ಬಗ್ಗೆ.. ಆಗ ನಾವು ಈ ಪ್ರಯತ್ನಕ್ಕೆ ಕೈ ಹಾಕಿದೆವು’’

‘‘ಸಿನಿಮಾ ರಿಲೀಸ್​ಗೂ ಮೊದಲೇ ಕೇಳಿದ್ದರು. ಆದರೆ ಆ ಸಮಯದಲ್ಲಿ ಅದನ್ನು ಮಾಡೋಕೆ ಸಾಧ್ಯವಾಗಲಿಲ್ಲ. ಕಾರಣ ನಾವು ಆಗಷ್ಟೇ ಪ್ರಯತ್ನ ನಡೆಸುತ್ತಿದ್ದೆವು. ಹಾಗಾಗಿ ಸಾಧ್ಯವಾಗಲಿಲ್ಲ. ಈ ಬಗ್ಗೆ ಬೇಸರವಿದೆ. ನಟ ಪ್ರಭಾಸ್ ಸರ್ ಜೊತೆ ನಾವು ‘ಆದಿಪುರುಷ್’ ಚಿತ್ರಕ್ಕೆ ಕೆಲಸ ಮಾಡುತ್ತಿದ್ದೆವು. ಈಗ ಪ್ರಭಾಸ್ ಬಳಿ ಅನುಮತಿ ಪಡೆದು, ಆದಿ ಪುರುಷ್ ಕೆಲಸ ನಿಲ್ಲಿಸಿ, ಜೇಮ್ಸ್ ಸಿನಿಮಾ ಕೈಗೆತ್ತಿಕೊಂಡಿದ್ದೇವೆ. ಈಗ ನಮಗೆ ಖುಷಿ ಆಗುತ್ತಿದೆ. ಇಂತಹ ಅವಕಾಶ ಕೊಟ್ಟಿದ್ದಕ್ಕೆ ಜೇಮ್ಸ್ ತಂಡಕ್ಕೆ ಧನ್ಯವಾದ’’ ಎಂದು ವಾಯ್ಸ್ ಮಿಕ್ಸಿಂಗ್ ತಂತ್ರಜ್ಞರು ಹೇಳಿದ್ದರು.

ಅಂದಹಾಗೆ ಧ್ವನಿ ತಂತ್ರಜ್ಞರು ಹಲವು ವರ್ಷಗಳಿಂದ ಈ ಬಗ್ಗೆ ಸಂಶೋಧನೆ ನಡೆಸುತ್ತಿದ್ದು, ಇದು ಅವರಿಗೆ ಸಿಕ್ಕ ಮೊದಲ ಜಯವಾಗಿದೆ. ಈ ಬಗ್ಗೆಯೂ ಚಿತ್ರತಂಡ ಸಂತಸ ಹಂಚಿಕೊಂಡಿತ್ತು.

ಅಪ್ಪು ಧ್ವನಿಯಲ್ಲಿ ‘ಜೇಮ್ಸ್’ ರಿರಿಲೀಸ್; ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಬಹುದು:

ಇದನ್ನೂ ಓದಿ: ಏಪ್ರಿಲ್ 22ಕ್ಕೆ ವಿಶ್ವಾದ್ಯಂತ ‘ಜೇಮ್ಸ್​’ ಫ್ಯಾನ್ಸ್​ ಶೋ ಆಯೋಜಿಸಲು ಚಿಂತನೆ

‘ನಮ್ಮ​ ಕೆಲಸ ನಿಲ್ಲಿಸಿ, ಮೊದಲು ಜೇಮ್ಸ್​ ಚಿತ್ರದ ಕೆಲಸ ಮಾಡಿ’: ತಂತ್ರಜ್ಞರಿಗೆ ಪ್ರಭಾಸ್​ ಹೇಳಿದ ಮಾತಿದು

Published On - 9:56 am, Fri, 22 April 22

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ