ಏಪ್ರಿಲ್ 22ಕ್ಕೆ ವಿಶ್ವಾದ್ಯಂತ ‘ಜೇಮ್ಸ್​’ ಫ್ಯಾನ್ಸ್​ ಶೋ ಆಯೋಜಿಸಲು ಚಿಂತನೆ

ಹೊಸ ತಂತ್ರಜ್ಞಾನ ಬಳಸಿ ಪುನೀತ್ ಧ್ವನಿಯನ್ನು ರೀ-ಕ್ರಿಯೇಟ್ ಮಾಡಲಾಗಿದೆ. ‘ಜೇಮ್ಸ್’ ಸಿನಿಮಾ ಏಪ್ರಿಲ್ 22ರಂದು ತೆರೆಗೆ ಬರುತ್ತಿದೆ. ಆ ದಿನ ವಿಶ್ವಾದ್ಯಂತ ಫ್ಯಾನ್ಸ್ ಶೋ ಮಾಡಲು ಚಿತ್ರತಂಡ ಯೋಚಿಸಿದೆ.

TV9kannada Web Team

| Edited By: Rajesh Duggumane

Apr 18, 2022 | 3:47 PM

‘ಜೇಮ್ಸ್’ ಸಿನಿಮಾ (James Movie) ಥಿಯೇಟರ್​ನಲ್ಲಿ ತೆರೆಕಂಡ ಬಳಿಕ ಒಟಿಟಿಯಲ್ಲೂ ರಿಲೀಸ್ ಆಗಿ ಸದ್ದು ಮಾಡಿತು. ಇದು ಪುನೀತ್ (Puneeth Rajkumar) ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ. ಈ ಕಾರಣಕ್ಕೆ ಫ್ಯಾನ್ಸ್ ಭಾವನಾತ್ಮಕವಾಗಿ ಸಿನಿಮಾ ಜತೆ ಕನೆಕ್ಟ್ ಆಗಿದ್ದಾರೆ. ಈ ಸಿನಿಮಾ ಈಗ ರೀ-ರಿಲೀಸ್ ಆಗುತ್ತಿದೆ. ‘ಜೇಮ್ಸ್’ ಸಿನಿಮಾ ಕೆಲಸಗಳು ಬಾಕಿ ಇರುವಾಗಲೇ ಪುನೀತ್ ನಿಧನ ಹೊಂದಿದ್ದರು. ಹೀಗಾಗಿ, ಪುನೀತ್ ಅವರ ಪಾತ್ರಕ್ಕೆ ಸಹೋದರ ಶಿವರಾಜ್​ಕುಮಾರ್ (Shivarajkumar) ಧ್ವನಿ ನೀಡಿದ್ದರು. ಪುನೀತ್ ಧ್ವನಿ ಇದ್ದಿದ್ದರೆ ಉತ್ತಮವಾಗಿರುತ್ತಿತ್ತು ಎಂದು ಅನೇಕರು ಅಂದುಕೊಂಡಿದ್ದಿದೆ. ಇದು ಈಗ ನಿಜವಾಗುತ್ತಿದೆ. ಹೊಸ ತಂತ್ರಜ್ಞಾನ ಬಳಸಿ ಪುನೀತ್ ಧ್ವನಿಯನ್ನು ರೀ-ಕ್ರಿಯೇಟ್ ಮಾಡಲಾಗಿದೆ. ಈ ಸಿನಿಮಾ ಏಪ್ರಿಲ್ 22ರಂದು ತೆರೆಗೆ ಬರುತ್ತಿದೆ. ಆ ದಿನ ವಿಶ್ವಾದ್ಯಂತ ಫ್ಯಾನ್ಸ್ ಶೋ ಮಾಡಲು ಚಿತ್ರತಂಡ ಯೋಚಿಸಿದೆ.

ಇದನ್ನೂ ಓದಿ: ‘ಜೇಮ್ಸ್​’ ಚಿತ್ರದಲ್ಲಿ ಅಪ್ಪು ವಾಯ್ಸ್ ರೀ-ಕ್ರಿಯೇಟ್​; ಶಾಕ್​ ಆದ ಅಶ್ವಿನಿ ಪುನೀತ್​ ರಾಜ್​ಕುಮಾರ್

Follow us on

Click on your DTH Provider to Add TV9 Kannada