ಅಪ್ಪು ಧ್ವನಿ ಮತ್ತೆ ಪಡೆಯಲು ಕಾರಣವಾದ ನಟ ಯಾರು? ಸುದ್ದಿಗೋಷ್ಠಿಯಲ್ಲಿ ವಿವರಿಸಿದ ‘ಜೇಮ್ಸ್​’ ಡೈರೆಕ್ಟರ್ ಚೇತನ್​

James Movie: ‘ಜೇಮ್ಸ್ ಸಿನಿಮಾದಲ್ಲಿ ಪುನೀತ್​ ಧ್ವನಿ ಕೇಳಿದಾಗ ದೇವರ ಧ್ವನಿ ಕೇಳಿದಂತೆ ಆಯ್ತು’ ಎಂದಿದ್ದಾರೆ ನಿರ್ದೇಶಕ ಚೇತನ್​ ಕುಮಾರ್. ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ವಿಡಿಯೋ ಇಲ್ಲಿದೆ..

TV9kannada Web Team

| Edited By: Madan Kumar

Apr 18, 2022 | 1:46 PM

ಪುನೀತ್​ ರಾಜ್​ಕುಮಾರ್​ (Puneeth Rajkumar) ಹೀರೋ ಆಗಿ ನಟಿಸಿದ ಕೊನೇ ಸಿನಿಮಾ ‘ಜೇಮ್ಸ್​’ನಲ್ಲಿ ಅವರ ಧ್ವನಿಯೇ ಇಲ್ಲ ಎಂದು ಬೇಸರ ಮಾಡಿಕೊಂಡಿದ್ದ ಅಭಿಮಾನಿಗಳಿಗೆ ಚಿತ್ರತಂಡದಿಂದ ಗುಡ್​ ನ್ಯೂಸ್​ ನೀಡಲಾಗಿದೆ. ಈಗ ಹೊಸ ತಂತ್ರಜ್ಞಾನ ಬಳಸಿ ಪುನೀತ್​ ರಾಜ್​ಕುಮಾರ್ಅವರ ಧ್ವನಿಯನ್ನೇ ‘ಜೇಮ್ಸ್​’ (James Movie) ಸಿನಿಮಾಗೆ ನೀಡಲಾಗಿದೆ. ಹಾಗಾಗಿ ಏ.22ರಂದು ಈ ಚಿತ್ರ ಮರು ಬಿಡುಗಡೆ ಆಗುತ್ತಿದೆ. ಈ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಚೇತನ್​ ಕುಮಾರ್​ (Chethan Kumar) ಮಾತನಾಡಿದ್ದಾರೆ. ಟಾಲಿವುಡ್​ ನಟ ಶ್ರೀಕಾಂತ್​ ಮೆಕಾ ಅವರು ಅತ್ಯುತ್ತಮ ಸೌಂಡ್​ ಇಂಜಿನಿಯರ್ಸ್​ ತಂಡವನ್ನು ಪರಿಚಯ ಮಾಡಿಸಿಕೊಟ್ಟಿದ್ದರಿಂದಲೇ ಇದೆಲ್ಲ ಸಾಧ್ಯವಾಯ್ತು ಎಂದು ಚೇತನ್​ ವಿವರಿಸಿದ್ದಾರೆ. ಒಟ್ಟಾರೆ ಈ ಪ್ರಕ್ರಿಯೆ ಹೇಗೆ ನಡೆಯಿತು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ. ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳಿಗಾಗಿ ಈ ಚಿತ್ರವನ್ನು ರೀ-ರಿಲೀಸ್​ ಮಾಡಲಾಗುತ್ತಿದೆ.

ಇದನ್ನೂ ಓದಿ:

‘ನಮ್ಮ​ ಕೆಲಸ ನಿಲ್ಲಿಸಿ, ಮೊದಲು ಜೇಮ್ಸ್​ ಚಿತ್ರದ ಕೆಲಸ ಮಾಡಿ’: ತಂತ್ರಜ್ಞರಿಗೆ ಪ್ರಭಾಸ್​ ಹೇಳಿದ ಮಾತಿದು

ಪುನೀತ್​ ರಾಜ್​ಕುಮಾರ್​ ಬ್ಯಾನರ್​ ಸಲುವಾಗಿ ಫ್ಯಾನ್ಸ್​ ಮತ್ತು ಗ್ರಾಮಸ್ಥರ ನಡುವೆ ಮಾರಾಮಾರಿ; ಏನಿದು ಕಿರಿಕ್​?

Follow us on

Click on your DTH Provider to Add TV9 Kannada