‘ನಮ್ಮ​ ಕೆಲಸ ನಿಲ್ಲಿಸಿ, ಮೊದಲು ಜೇಮ್ಸ್​ ಚಿತ್ರದ ಕೆಲಸ ಮಾಡಿ’: ತಂತ್ರಜ್ಞರಿಗೆ ಪ್ರಭಾಸ್​ ಹೇಳಿದ ಮಾತಿದು

ಪುನೀತ್​ ರಾಜ್​ಕುಮಾರ್ ಬಗ್ಗೆ ಎಲ್ಲ ಭಾಷೆಯ ಚಿತ್ರರಂಗದ ಕಲಾವಿದರಿಗೂ ಗೌರವ ಇದೆ. ಅದಕ್ಕೆ ಹೊಸ ಉದಾಹರಣೆ ಇಲ್ಲಿದೆ.

TV9kannada Web Team

| Edited By: Madan Kumar

Apr 18, 2022 | 9:39 AM

ಚೇತನ್​ ಕುಮಾರ್​ ನಿರ್ದೇಶನದ ‘ಜೇಮ್ಸ್​’ ಸಿನಿಮಾ (James Movie) ಈಗ ಮರು ಬಿಡುಗಡೆ ಆಗುತ್ತಿದೆ. ಈ ಹಿಂದೆ ಮಾ.17ರಂದು ಈ ಚಿತ್ರ ತೆರೆಕಂಡಾಗ ಅದಲ್ಲಿ ಪುನೀತ್​ ರಾಜ್​ಕುಮಾರ್​ (Puneeth Rajkumar) ವಾಯ್ಸ್​ ಇರಲಿಲ್ಲ. ಆದರೆ ಈಗ ವಿಶೇಷ ತಂತ್ರಜ್ಞಾನವನ್ನು ಬಳಸಿ ಪುನೀತ್​ ರಾಜ್​ಕುಮಾರ್​ ಅವರ ಧ್ವನಿಯಲ್ಲೇ ಸಿನಿಮಾ ಸಿದ್ಧಪಡಿಸಲಾಗಿದೆ. ಈ ಹೊಸ ರೂಪದಲ್ಲಿ ಮೂಡಿಬಂದಿರುವ ಜೇಮ್ಸ್​’ ಚಿತ್ರ ಏ.22ರಂದು ರೀ-ರಿಲೀಸ್​ ಆಗುತ್ತಿದೆ. ಈ ಸಿನಿಮಾಗೆ ಪುನೀತ್​ ಧ್ವನಿಯನ್ನು ಜೋಡಣೆ ಮಾಡಿದ ತಂತ್ರಜ್ಞರು ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಪ್ರಭಾಸ್​ (Prabhas) ನಟನೆಯ ‘ಆದಿಪುರುಷ್​’ ಚಿತ್ರಕ್ಕೆ ಕೆಲಸ ಮಾಡುತ್ತಿದ್ದ ವಾಯ್ಸ್​ ಮಿಕ್ಸಿಂಗ್​ ಪರಿಣಿತರೇ ಈ ಕೆಲಸ ಮಾಡಿದ್ದಾರೆ. ಈ ರೀತಿಯ ಆಫರ್​ ಬಂದಿದೆ ಎಂದಾಗ ಪ್ರಭಾಸ್​ ಅವರು, ‘ನಮ್ ಸಿನಿಮಾ ಕೆಲಸ ನಿಲ್ಲಿಸಿ, ಮೊದಲು ಜೇಮ್ಸ್​ ಕೆಲಸ ಮಾಡಿ’ ಎಂದಿದ್ದರು ಎಂಬುದನ್ನು ತಂತ್ರಜ್ಞರು ಹೇಳಿದ್ದಾರೆ.

ಇದನ್ನೂ ಓದಿ:

ಪುನೀತ್​ ರಾಜ್​ಕುಮಾರ್​ ಬ್ಯಾನರ್​ ಸಲುವಾಗಿ ಫ್ಯಾನ್ಸ್​ ಮತ್ತು ಗ್ರಾಮಸ್ಥರ ನಡುವೆ ಮಾರಾಮಾರಿ; ಏನಿದು ಕಿರಿಕ್​?

ಪುನೀತ್​, ಡಾ. ರಾಜ್​ ಬಗ್ಗೆ ಶ್ರುತಿಗೆ ಇದ್ದ 2 ಆಸೆ ಈಡೇರಲೇ ಇಲ್ಲ; ‘ದ್ವಿತ್ವ’ ಬಗ್ಗೆ ಮಾತಾಡಿದ ನಟಿ

Follow us on

Click on your DTH Provider to Add TV9 Kannada