ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲ ಕುಟುಂಬಗಳಿಗೆ ಮನೆ, ಕುಟುಂಬದಲ್ಲಿ ಒಬ್ಬರಿಗೆ ಉದ್ಯೋಗ ಎಂದರು ಕುಮಾರಸ್ವಾಮಿ

ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲ ಕುಟುಂಬಗಳಿಗೆ ಮನೆ, ಕುಟುಂಬದಲ್ಲಿ ಒಬ್ಬರಿಗೆ ಉದ್ಯೋಗ ಎಂದರು ಕುಮಾರಸ್ವಾಮಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Apr 22, 2022 | 5:24 PM

ನಗರದಲ್ಲಿ ಜನತಾ ಜಲಧಾರೆ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದ ಮಾಜಿ ಮುಖ್ಯಮಂತ್ರಿಗಳು ಕೊವಿಡ್-19 ಪಿಡುಗಿನ ಸಂದರ್ಭದಲ್ಲಿ ಎರಡು ವರ್ಷಗಳ ಕಾಲ ತಾವು ಹೊರಗಡೆ ಬರಲಿಲ್ಲವೆನ್ನುವುದನ್ನು ಒಪ್ಪಿಕೊಂಡು ಸಂಘಟನಾತ್ಮಕ ಸಮಸ್ಯೆಗಳು ಎದುರಾಗಬಹುದು ಅನ್ನುವ ಕಾರಣಕ್ಕೆ ಬರಲಿಲ್ಲವೆಂದರು.

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರು ಶಿವಮೊಗ್ಗನಲ್ಲಿ ಚುನಾವಣಾ ಪ್ರಚಾರ (elctioneering) ಮೋಡ್ನಲ್ಲಿ ಕಂಡರು. ರಾಜ್ಯದ ವಿಧಾನ ಸಭೆ ಚುನಾವಣೆ ಇನ್ನೂ ಒಂದು ವರ್ಷ ದೂರವಿದೆ. ಅದನ್ನು ಕುಮಾರಸ್ವಾಮಿಯವರೇ ಹೇಳುತ್ತಾರೆ. ಒಂದು ವರ್ಷ ಮೊದಲೇ ತಾವು ಜನರಿಗಾಗಿ ಅದರಲ್ಲೂ ವಿಶೇಷವಾಗಿ ರೈತಾಪಿ ಕುಟುಂಬಗಳಿಗೆ (farming community) ರೂಪಿಸಿರುವ ಕಾರ್ಯಕ್ರಮಗಳ ಬಗ್ಗೆ ಘೋಷಣೆ ಮಾಡುತ್ತಿರುವುದಾಗಿ ಮತ್ತು ಚುನಾವಣೆ ಸಂದರ್ಭದಲ್ಲಿ ಯಾವುದೇ ಘೋಷಣೆ ಮಾಡುವುದಿಲ್ಲ ಎಂದು ಹೇಳಿದರು.

ರೈತರಿಗೆ ಮತ್ತು ಕೋವಿಡ್ ಸಂತ್ರಸ್ತರಿಗೆ ಸರ್ಕಾರ ಪರಿಹಾರ ಧನವನ್ನು ನೀಡಲೇ ಬೇಕು, ಯಾಕೆಂದರೆ ಬೊಕ್ಕಸದಲ್ಲಿರುವ ಹಣ ಯಾರಪ್ಪನದೂ ಅಲ್ಲ, ನಿಮ್ಮ (ಜನರು) ಹಣ ಮತ್ತು ನಿಮಗೆ ಮಾತ್ರ ಸೇರಿದ್ದು ಎಂದು ಕುಮಾರಸ್ವಾಮಿ ಹೇಳಿದರು. ಕೋವಿಡ್-19 ಪಿಡುಗು ರಾಜ್ಯದಲ್ಲಿ ತಾಂಡವ ನೃತ್ಯ ನಡೆಸುತ್ತಿದ್ದಾಗ ಕುಮಾರಾಸ್ವಾಮಿ ಎಲ್ಲಿದ್ದರು ಅಂತ ಎದುರಾಳಿಗಳು ಕೇಳಿರುವ ಪ್ರಶ್ನೆಗೆ ಶಿವಮೊಗ್ಗನಲ್ಲಿ ಉತ್ತರಕೊಟ್ಟರು.

ನಗರದಲ್ಲಿ ಜನತಾ ಜಲಧಾರೆ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದ ಮಾಜಿ ಮುಖ್ಯಮಂತ್ರಿಗಳು ಕೊವಿಡ್-19 ಪಿಡುಗಿನ ಸಂದರ್ಭದಲ್ಲಿ ಎರಡು ವರ್ಷಗಳ ಕಾಲ ತಾವು ಹೊರಗಡೆ ಬರಲಿಲ್ಲವೆನ್ನುವುದನ್ನು ಒಪ್ಪಿಕೊಂಡು ಸಂಘಟನಾತ್ಮಕ ಸಮಸ್ಯೆಗಳು ಎದುರಾಗಬಹುದು ಅನ್ನುವ ಕಾರಣಕ್ಕೆ ಬರಲಿಲ್ಲವೆಂದರು. ತಮ್ಮ ಪಕ್ಷಕ್ಕೆ 5 ವರ್ಷಗಳ ಅವಧಿಗೆ ಅಧಿಕಾರ ನೀಡಿದರೆ ತಾವು ಈಗಾಗಲೇ ರೂಪಿಸಿಕೊಂಡಿರುವ ಎಲ್ಲ ಕಾರ್ಯಕ್ರಮಗಳನ್ನು ಜಾರಿಗೆ ತರುವುದಾಗಿ ಅವರು ಹೇಳಿದರು.

ರೈತರ ಸಾಲಮನ್ನಾ, ಅವರ ಬ್ಯಾಂಕ್ ಖಾತೆಗಳಿಗೆ ನೇರ ಹಣ. ಪ್ರತಿ ಕುಟುಂಬದಲ್ಲಿ ಒಬ್ಬರಿಗೆ ಉದ್ಯೋಗ, ರೈತ ಹೆಣ್ಣುಮಕ್ಕಳು ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗುವ ಹಾಗೆ ಯೋಜನೆಗಳನ್ನು ಕಾರ್ಯಗತಗೊಳಿಸುವುದಾಗಿ ಕುಮಾರಸ್ವಾಮಿ ಹೇಳಿದರು. ಪ್ರತಿಯೊಂದು ಕುಟುಂಬಕ್ಕೆ ಒಂದೊಂದು ಮನೆ ನಿರ್ಮಿಸಿಕೊಡುವ ಮಾತನ್ನು ಸಹ ಅವರು ಹೇಳಿದರು.

ಈಗ ಹೇಳಿರುವ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಜಾರಿಗೆ ತರಲು ವಿಫಲನಾದರೆ ಪಕ್ಷವನ್ನು ವಿಸರ್ಜನೆ ಮಾಡಿ ಮುಂದೆ ಯಾವತ್ತೂ ಮತದಾರರ ಎದುರು ವೋಟು ಕೇಳಲು ಬರೋದಿಲ್ಲ ಎಂದು ಕುಮಾರಸ್ವಾಮಿಯವರು ಶಪಥಗೈಯುವ ರೀತಿಯಲ್ಲಿ ಹೇಳಿದರು.

ಇದನ್ನೂ ಓದಿ:   ಮಾಲೂರಿನಲ್ಲಿ ಜೆಡಿಎಸ್ ಜನತಾ ಜಲಧಾರೆ: ಮಧ್ಯಾಹ್ನ ಉಚಿತ ಪೆಟ್ರೋಲ್ ಧಾರೆ, ಸಂಜೆಗೆ ವಿತರಣೆಯಾಯ್ತು ಅಕ್ಕಿ-ಸೀರೆ!  

Published on: Apr 22, 2022 05:22 PM