AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಲೂರಿನಲ್ಲಿ ಜೆಡಿಎಸ್ ಜನತಾ ಜಲಧಾರೆ: ಮಧ್ಯಾಹ್ನ ಉಚಿತ ಪೆಟ್ರೋಲ್ ಧಾರೆ, ಸಂಜೆಗೆ ವಿತರಣೆಯಾಯ್ತು ಅಕ್ಕಿ-ಸೀರೆ!

JDS: ಜೆಡಿಎಸ್ ಟೀ ಶರ್ಟ್ ಹಾಕಿಕೊಂಡು, ಬೈಕ್ ರ್ಯಾಲಿಗೆ ಬಂದವರಿಗೆ ಫುಲ್ ಟ್ಯಾಂಕ್ ಪೆಟ್ರೋಲ್! ಘೋಷಿಸಲಾಗಿದೆ. ಪೆಟ್ರೋಲ್ ಹಾಕಿಸಿಕೊಂಡ ಬೈಕ್ ಮೇಲೆ RG ಎಂದು ಮಾರ್ಕ್ ಹಾಕಲಾಗಿದೆ. ಮಾಲೂರಿನಲ್ಲಿಂದು ಜೆಡಿಎಸ್ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮಹಿಳೆಯರಿಗೆ ಟೋಕನ್ ವಿತರಣೆಯಾಗಿದೆ.

ಮಾಲೂರಿನಲ್ಲಿ ಜೆಡಿಎಸ್ ಜನತಾ ಜಲಧಾರೆ: ಮಧ್ಯಾಹ್ನ ಉಚಿತ ಪೆಟ್ರೋಲ್ ಧಾರೆ, ಸಂಜೆಗೆ ವಿತರಣೆಯಾಯ್ತು ಅಕ್ಕಿ-ಸೀರೆ!
ಜೆಡಿಎಸ್ ಪಕ್ಷದಿಂದ ಜನತಾ ಜಲಧಾರೆ ಜೊತೆಗೆ ಪೆಟ್ರೋಲ್ ಧಾರೆ! ಮಾಲೂರಿನಲ್ಲಿ ಉಚಿತ ಪೆಟ್ರೋಲ್ ಗಾಗಿ ಮುಗಿಬಿದ್ದ ಬೈಕ್ ಸವಾರರು!
TV9 Web
| Edited By: |

Updated on:Apr 21, 2022 | 7:27 PM

Share

ಕೋಲಾರ: ಇವತ್ತು ಬರದ ನಾಡು ಕೋಲಾರದಲ್ಲಿ ಜೆಡಿಎಸ್ ಪಕ್ಷದ ಮಹತ್ವದ ಕಾರ್ಯಕ್ರಮ ಜನತಾ ಜಲಧಾರೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು, ಅದರೆ ಕಾರ್ಯಕ್ರಮದಲ್ಲಿ ಜಲ ಹರಿದಿದ್ದಕ್ಕಿಂತ ಕಾರ್ಯಕರ್ತರ ಬೈಕ್​ಗಳಿಗೆ ಪೆಟ್ರೋಲ್​ ಹಾಗೂ ಡೀಸೆಲ್​ ಜೋರಾಗಿ ಹರಿದಿತ್ತು ಅದಕ್ಕಾಗಿ ಕಾರ್ಯಕರ್ತರು ನಾಮುಂದು ತಾಮುಂದು ಎಂದು ಪೆಟ್ರೋಲ್​ಗಾಗಿ ಮುಗಿಬಿದ್ದಿದ್ದರು..

ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಹರಿದ ಪೆಟ್ರೋಲ್​..! ಕೋಲಾರ ಜಿಲ್ಲೆ ಮಾಲೂರು ಪಟ್ಟಣದಲ್ಲಿ ಜೆಡಿಎಸ್ ಪಕ್ಷದ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು, ಚಿಕ್ಕತಿರುಪತಿಯಿಂದ ಆರಂಭವಾದ ರಥಯಾತ್ರೆ ಮಾಲೂರು ಮಟ್ಟಣಕ್ಕೆ ಬಂದಿತ್ತು ಇದೇ ವೇಳೆ ರಥಯಾತ್ರೆ ಜೊತೆಗೆ ನೂರಾರು ಜೆಡಿಎಸ್​ ಕಾರ್ಯಕರ್ತರು ಬೈಕ್​ ರ್ಯಾಲಿ ಮೂಲಕ ಸ್ವಾಗತ ಮಾಡಿದರು, ಅದರೆ ಬೈಕ್​ ರ್ಯಾಲಿಗೆ ಹೋಗುವ ಬೈಕ್​ಗಳಿಗೆ ಮಾಲೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ಇ.ರಾಮೇಗೌಡ ತಮ್ಮ ಪೆಟ್ರೋಲ್​ ಬಂಕ್​ನಲ್ಲಿ ಒಂದೊಂದು ಗಾಡಿಗಳಿಗೆ ಇನ್ನೂರು ರೂಪಾಯಿ ಅಂದರೆ ಎರಡು ಲೀಟರ್​ ಪೆಟ್ರೋಲ್​ ಹಾಕಿಸಿದರು, ಈವೇಳೆ ಪೆಟ್ರೋಲ್​ ಬಂಕ್​ನಲ್ಲಿ ಪೆಟ್ರೋಲ್​ ಹಾಕಿಕೊಳ್ಳಲು ಜನರು ಮುಗಿಬಿದ್ದರು ಈವೇಳೆ ಬಂಕ್​ನಲ್ಲಿ ನೂಕು ನುಗ್ಗಲು ಸಂಭವಿಸಿತ್ತು.

ವೇದಿಕೆ ಕಾರ್ಯಕ್ರಮಕ್ಕೆ ಬಂದಿದ್ದ ಮಹಿಳೆಯರಿಗೆ ಅಕ್ಕಿ ಹಾಗೂ ಸೀರೆ ಆಫರ್​..!

JDS Malur

ಜೆಡಿಎಸ್ ಜನತಾ ಜಲಧಾರೆ: ಮಾಲೂರಿನಲ್ಲಿ ಮಧ್ಯಾಹ್ನ ಉಚಿತ ಪೆಟ್ರೋಲ್ ಧಾರೆ! ಸಂಜೆ ವೇಳೆಗೆ ಅಕ್ಕಿ-ಸೀರೆ ವಿತರಣೆ

ಇನ್ನೂ ಮಾಲೂರು ಪಟ್ಟಣದ ವೈಟ್​ ಗಾರ್ಡನ್​ ಬಳಿಯಲ್ಲಿ ಜೆಡಿಎಸ್ ಬೃಹತ್​ ವೇದಿಕೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು ಇನ್ನೂ ಕಾರ್ಯಕ್ರಮಕ್ಕೆ ಜೆಡಿಎಸ್​ ಮುಖಂಡರಾದ, ಮಾಜಿ ಸಿಂಎ ಕುಮಾರಸ್ವಾಮಿ, ಜೆಡಿಎಸ್​ ವರಿಷ್ಠ ದೇವೇಗೌಡ, ಜೆಡಿಎಸ್​ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸೇರಿದಂತೆ ಹಲವು ನಾಯಕರು ಆಗಮಿಸಿದ್ದರು ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಸಾವಿರಾರು ಜನರನ್ನು ಸೇರಿದ್ದ ಜೆಡಿಎಸ್​ ಮುಖಂಡರು ಕಾರ್ಯಕ್ರಮಕ್ಕೆ ಬಂದಿದ್ದ ಮಹಿಳೆಯರಿಗೆ ಟೋಕನ್ ವ್ಯವಸ್ಥೆ ಮಾಡಿದ್ದರು ಕಾರ್ಯಕ್ರಮಕ್ಕೆ ಬರುವ ಪ್ರತಿಯೊಬ್ಬ ಮಹಿಳೆಯರಿಗೆ ಒಂದೊಂದು ಅಕ್ಕಿ ಮೂಟೆ ಹಾಗೂ ಸೀರೆ ನೀಡುವುದಾಗಿ ಹೇಳಿ ಟೋಕನ್​ ವಿತರಣೆ ಮಾಡಿದ್ರು ಈವೇಳೆ ಜೆಡಿಎಸ್​ ಕಚೇರಿ ಬಳಿ ಅಕ್ಕಿ ಹಾಗೂ ಸೀರೆ ಪಡೆಯಲು ಮಹಿಳೆಯರು ಹಾಗೂ ಜೆಡಿಎಸ್​ ಕಾರ್ಯಕರ್ತರು ಮುಗಿಬಿದ್ದಿದ್ದರು.

ಒಟ್ಟಾರೆ ಇಂದು ಜನತಾ ಜಲಧಾರೆ ಕಾರ್ಯಕ್ರಮದ ಮೂಲಕ ಜೆಡಿಎಸ್​ ಚುನಾವಣಾ ತಯಾರಿ ನಡೆಸುತ್ತಿದ್ದು ಇದಕ್ಕಾಗಿ ಈಗಾಗಲೇ ಮಾಲೂರು ಜೆಡಿಎಸ್​ ಅಭ್ಯರ್ಥಿ ಎಂದು ಘೋಷಣೆ ಮಾಡಿರುವ ಜಿ.ಇ.ರಾಮೇಗೌಡ ಮತದಾರರನ್ನು ಒಲಿಸಿಕೊಳ್ಳಲು ಅಕ್ಕಿ,ಸೀರೆ, ಪೆಟ್ರೋಲ್​ ಕೊಡುವ ಮೂಲಕ ತಮ್ಮ ಪ್ರಭಾವ ಶುರುಮಾಡಿಕೊಂಡಿದ್ದಾರೆ, ಈಗಲೇ ಹೀಗಾದ್ರೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತದಾರರಿಗೆ ಇನ್ನೂ ಏನೇನು ಕಾದಿದ್ಯೋ ಅನ್ನೋದೆ ಕುತೂಹಲ.

ಇದೂ ಓದಿ: Karnataka Second PUC Exams: ಇನ್ನೂ ಹಾಲ್​ ಟಿಕೆಟ್​ ಪಡೆಯದ ಉಡುಪಿಯ ಆ 4 ವಿದ್ಯಾರ್ಥಿನಿಯರಿಗೆ ನಾಳೆಯಿಂದ ಅಗ್ನಿಪರೀಕ್ಷೆ

ಇದೂ ಓದಿ: 545 ಪಿಎಸ್​ಐ ಹುದ್ದೆಗಳಿಗೆ ನೇಮಕಾತಿ ಅಕ್ರಮ ವಿಚಾರ; ಶಾಸಕ ಎಮ್. ವೈ. ಪಾಟೀಲ್ ಗನ್​​ಮ್ಯಾನ್​ ಅಯ್ಯಣ್ಣ ದೇಸಾಯಿ ಸಿಐಡಿ ವಶಕ್ಕೆ

Published On - 3:15 pm, Thu, 21 April 22

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ