‘ಭೀಮ’ ಸಿನಿಮಾ ಮುಹೂರ್ತದಲ್ಲಿ ಪುನೀತ್ರನ್ನು ನೆನೆದ ದುನಿಯಾ ವಿಜಯ್
ಬೆಂಗಳೂರಿನ ಬಂಡಿ ಮಾಕಾಳಮ್ಮ ದೇವಸ್ಥಾನದಲ್ಲಿ ಮಹೂರ್ತ ನೆರವೇರಿದೆ. ಈ ವೇಳೆ ಅಪ್ಪು ಅವರನ್ನು ನೆನೆದರು ವಿಜಯ್. ಈ ಸಿನಿಮಾಗೆ ಸೋಮವಾರದಿಂದ (ಏಪ್ರಿಲ್ 18) ಶೂಟಿಂಗ್ ಆರಂಭವಾಗಿದೆ.
ಪುನೀತ್ ರಾಜ್ಕುಮಾರ್ (Puneeth Rajkumar) ಜತೆ ವಿಜಯ್ಗೆ ವಿಶೇಷ ನಂಟಿತ್ತು. ‘ಸಲಗ’ ಸಿನಿಮಾದ ‘ಟಿಣಿಂಗ ಮಿಣಿಂಗ ಟಿಶ್ಯಾ..’ ಹಾಡನ್ನು ಅಪ್ಪು ತುಂಬಾನೇ ಇಷ್ಟಪಟ್ಟಿದ್ದರು. ಆದರೆ, ಈಗ ಅವರು ನಮ್ಮೊಂದಿಗೆ ಇಲ್ಲ. ಇದೇ ನೋವಿನಲ್ಲಿ ಜೀವನ ಸಾಗುವುದು ಅನಿವಾರ್ಯ ಆಗಿದೆ. ‘ಸಲಗ’ ಯಶಸ್ಸಿನ ನಂತರದಲ್ಲಿ ದುನಿಯಾ ವಿಜಯ್ (Duniya Vijay) ‘ಭೀಮ’ ಚಿತ್ರವನ್ನು (Bheema Movie) ಕೈಗೆತ್ತಿಕೊಂಡಿದ್ದಾರೆ. ನಟನೆ ಜತೆಗೆ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಅವರ ನಿರ್ದೇಶನದ ಎರಡನೇ ಸಿನಿಮಾ. ಈ ಚಿತ್ರಕ್ಕೆ ಬೆಂಗಳೂರಿನ ಬಂಡಿ ಮಾಕಾಳಮ್ಮ ದೇವಸ್ಥಾನದಲ್ಲಿ ಮಹೂರ್ತ ನೆರವೇರಿದೆ. ಈ ವೇಳೆ ಅಪ್ಪು ಅವರನ್ನು ನೆನೆದರು ವಿಜಯ್. ಈ ಸಿನಿಮಾಗೆ ಸೋಮವಾರದಿಂದ (ಏಪ್ರಿಲ್ 18) ಶೂಟಿಂಗ್ ಆರಂಭವಾಗಿದೆ.
ಇದನ್ನೂ ಓದಿ: ದುನಿಯಾ ವಿಜಯ್ ನಿರ್ದೇಶನದ ‘ಭೀಮ’ ಚಿತ್ರಕ್ಕೆ ಸಿಕ್ತು ಚಾಲನೆ; ಸೆಲೆಬ್ರಿಟಿಗಳ ಸಾಥ್
ಪುನೀತ್ ರಾಜ್ಕುಮಾರ್ ಫೋಟೋಗೆ ನಮಿಸಿದ ರಾಹುಲ್ ಗಾಂಧಿ; ಇಲ್ಲಿವೆ ಫೋಟೋಗಳು