AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಲಗ’ ಯಶಸ್ಸಿನ ಬಳಿಕ ಮತ್ತೆ ನಿರ್ದೇಶನಕ್ಕೆ ಇಳಿದ ದುನಿಯಾ ವಿಜಯ್

‘ಸಲಗ’ ಸಿನಿಮಾದಲ್ಲಿ ದುನಿಯಾ ವಿಜಯ್​ ಅವರು ರೌಡಿಸಂನ ಕಥೆ ಹೇಳಿದ್ದರು. ಈ ಯಶಸ್ಸಿನಿಂದ ವಿಜಯ್​ ಅವರ ಕಾನ್ಫಿಡೆನ್ಸ್​ ಹೆಚ್ಚಿದೆ. ಹೀಗಾಗಿ, ಹೊಸ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದಾರೆ.

‘ಸಲಗ’ ಯಶಸ್ಸಿನ ಬಳಿಕ ಮತ್ತೆ ನಿರ್ದೇಶನಕ್ಕೆ ಇಳಿದ ದುನಿಯಾ ವಿಜಯ್
TV9 Web
| Edited By: |

Updated on:Mar 01, 2022 | 6:30 PM

Share

ಕಳೆದ ವರ್ಷ ತೆರೆಗೆ ಬಂದ ದುನಿಯಾ ವಿಜಯ್ (Duniya Vijay)​ ನಟನೆಯ ‘ಸಲಗ’ ಸಿನಿಮಾ (Salaga Movie) ಮಾಡಿದ ಹವಾ ಅಷ್ಟಿಷ್ಟಲ್ಲ. ಈ ಚಿತ್ರದಲ್ಲಿ ದುನಿಯಾ ವಿಜಯ್​ ನಟಿಸೋದು ಮಾತ್ರವಲ್ಲ, ಆ್ಯಕ್ಷನ್​ ಕಟ್​ ಕೂಡ ಹೇಳಿದ್ದರು. ಮೊದಲ ನಿರ್ದೇಶನದಲ್ಲೇ ಅವರು ಗೆದ್ದು ಬೀಗಿದ್ದರು. ಇತ್ತೀಚೆಗೆ ಚಿತ್ರತಂಡ ಈ ಸಿನಿಮಾ ಯಶಸ್ಸನ್ನು ಸಂಭ್ರಮಿಸಿತ್ತು. ಸ್ಯಾಂಡಲ್​ವುಡ್​ ಹಿರಿಯ ನಟ ಶಿವರಾಜ್​ಕುಮಾರ್ ಅವರು ಸಕ್ಸಸ್​ ಮೀಟ್​ಗೆ ಆಗಮಿಸಿ ಈ ತಂಡಕ್ಕೆ ಶುಭಕೋರಿದ್ದರು. ಈಗ ‘ಸಲಗ’ ಬಳಿಕ ಮತ್ತೆ ನಿರ್ದೇಶನಕ್ಕೆ ಇಳಿಯೋಕೆ ದುನಿಯಾ ವಿಜಯ್​ ರೆಡಿ ಆಗಿದ್ದಾರೆ . ಶಿವರಾತ್ರಿಯಂದು ಹೊಸ ಸಿನಿಮಾದ ಟೈಟಲ್​ ಘೋಷಣೆ ಆಗುವ ಸಾಧ್ಯತೆ ಇದೆ.

‘ಸಲಗ’ ಸಿನಿಮಾದಲ್ಲಿ ದುನಿಯಾ ವಿಜಯ್​ ಅವರು ರೌಡಿಸಂನ ಕಥೆ ಹೇಳಿದ್ದರು. ಈ ಚಿತ್ರವನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದರು. ಈ ಸಿನಿಮಾ ಬಗ್ಗೆ ಎಲ್ಲ ಕಡೆಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು. ಅನೇಕ ಸ್ಟಾರ್​ ನಟರು ಈ ಚಿತ್ರವನ್ನು ಹೊಗಳಿದ್ದರು. ಈ ಯಶಸ್ಸಿನಿಂದ ವಿಜಯ್​ ಅವರ ಕಾನ್ಫಿಡೆನ್ಸ್​ ಹೆಚ್ಚಿದೆ. ಹೀಗಾಗಿ, ಹೊಸ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದಾರೆ.

ವಿಜಯ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಒಂದನ್ನು ಹಾಕಿದ್ದಾರೆ. ಅವರ ನಟನೆಯ 28ನೇ ಸಿನಿಮಾ ಇದಾಗಿದ್ದು, ಕೃಷ್ಣ ಸಾರ್ಥಕ್​ ಹಾಗೂ ಜಗದೀಶ್​ ಗೌಡ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಹೊಸ ಪೋಸ್ಟರ್​ನಲ್ಲಿ ಕೈ ಹಾಗೂ ಯಮಹಾ ಆರ್​ಎಕ್ಸ್​ 100 ಬೈಕ್​ ತೋರಿಸಲಾಗಿದೆ. ಪೋಸ್ಟರ್​ನಲ್ಲಿರುವ ಕೈ ರಕ್ತಸಿಕ್ತವಾಗಿದೆ. ಇದರಿಂದ ಇದು ಕೂಡ ರೌಡಿಸಂ ಕಥೆ ಎಂಬುದು ಸ್ಪಷ್ಟವಾಗಿದೆ.

ತೆಲುಗಿನ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಅವರು ಅಭಿನಯಿಸಲಿರುವ ಹೊಸ ಸಿನಿಮಾದಲ್ಲಿ ದುನಿಯಾ ವಿಜಯ್​ ನಟಿಸಲಿದ್ದಾರೆ.  ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಗೋಪಿಚಂದ್​ ಮಲಿನೇನಿ ಆ್ಯಕ್ಷನ್​-ಕಟ್​ ಹೇಳಲಿದ್ದಾರೆ. ಇದು ನಂದಮೂರಿ ಬಾಲಕೃಷ್ಣ ನಟಿಸಲಿರುವ 107ನೇ ಸಿನಿಮಾವಾಗಿದ್ದು, ಅವರಿಗೆ ನಾಯಕಿಯಾಗಿ ಶ್ರುತಿ ಹಾಸನ್​ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕಿನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ರಾಯಲಸೀಮಾ ಹಿನ್ನೆಲೆಯಲ್ಲಿ ಸಿನಿಮಾ ಮೂಡಿಬರಲಿದೆ. ನೈಜ ಘಟನೆಗಳನ್ನು ಆಧರಿಸಿ ನಿರ್ದೇಶಕರು ಈ ಚಿತ್ರ ಮಾಡುತ್ತಿದ್ದಾರೆ. ಸದ್ಯ ಪಾತ್ರವರ್ಗದ ಆಯ್ಕೆ ನಡೆಯುತ್ತಿದೆ. ಖ್ಯಾತ ನಿರ್ಮಾಣ ಸಂಸ್ಥೆ ‘ಮೈತ್ರಿ ಮೂವೀ ಮೇಕರ್ಸ್​’ ಈ ಚಿತ್ರವನ್ನು ನಿರ್ಮಿಸುತ್ತಿದೆ.

ಇದನ್ನೂ ಓದಿ: ‘ಸಲಗ’ ಗೆಲುವಿನ ವೇದಿಕೆಯಲ್ಲಿ ದುನಿಯಾ ವಿಜಯ್​ ಅಳು; ‘ಕರಿಚಿರತೆ’ ಕಣ್ಣೀರಿಗೆ ಕಾರಣ ಏನು?

ಶಿವಣ್ಣನ ಕಾಲಿಗೆ ನಮಸ್ಕರಿಸಿದ ದುನಿಯಾ ವಿಜಯ್​, ಕೀರ್ತಿ; ‘ಸಲಗ’ ಸಕ್ಸಸ್​ ವೇದಿಕೆಯಲ್ಲಿ ‘ಹ್ಯಾಟ್ರಿಕ್​ ಹೀರೋ’

Published On - 8:31 pm, Thu, 24 February 22

Follow Us
TV9 Web
TV9 Web

TV9 Kannada

Read More
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಕಾಂಗ್ರೆಸ್​​​ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ
ಕಾಂಗ್ರೆಸ್​​​ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್
ಬೃಹತ್ ಪ್ರತಿಭಟನೆ ಬಳಿಕ ಸುಪ್ರೀಂ ಕೋರ್ಟ್ ತಲುಪಿದ ರಾಹುಲ್ ಗಾಂಧಿ, ಖರ್ಗೆ
ಬೃಹತ್ ಪ್ರತಿಭಟನೆ ಬಳಿಕ ಸುಪ್ರೀಂ ಕೋರ್ಟ್ ತಲುಪಿದ ರಾಹುಲ್ ಗಾಂಧಿ, ಖರ್ಗೆ
ಸಿಎಂ ಡಿಕೆಶಿ​​ ಕುರ್ತಾ ಹಿಡಿದು ತಳ್ಳಿದ ರಾಹುಲ್ ಗಾಂಧಿ! ಕನ್ನಡಿಗರ ಆಕ್ರೋಶ
ಸಿಎಂ ಡಿಕೆಶಿ​​ ಕುರ್ತಾ ಹಿಡಿದು ತಳ್ಳಿದ ರಾಹುಲ್ ಗಾಂಧಿ! ಕನ್ನಡಿಗರ ಆಕ್ರೋಶ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ
ವಿ. ಸೋಮಣ್ಣ ಕಾರು ಮುತ್ತಿಗೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಯತ್ನ
ವಿ. ಸೋಮಣ್ಣ ಕಾರು ಮುತ್ತಿಗೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಯತ್ನ