ಈಶ್ವರಪ್ಪ ಮೊಮ್ಮಗನ ಮದುವೆ ಆರತಕ್ಷತೆಗೆ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಇತರ ಗಣ್ಯರು ಅಗಮಿಸಿದರು

ಗಣ್ಯರೊಂದಿಗೆ ಗ್ರೂಪ್ ಫೋಟೋಗಾಗಿ ನೂಕುನುಗ್ಗಲು ಇನ್ನಷ್ಟು ಹೆಚ್ಚಾಯಿತು. ಸ್ಟೇಜ್ ಹಿಂಭಾಗದಲ್ಲಿದ್ದ ಮಹಿಳೆಯರು, ಯುವತಿಯರು ಮತ್ತು ಮಕ್ಕಳು ಮುಂದೆ ಬಂದು ಪೋಟೋಗಾಗಿ ಪೋಸ್ ನೀಡಿದರು. ಜಾಗ ಸಾಕಾಗದ ಕಾರಣ ಕೆಲ ಮಹಿಳೆಯರು ಮತ್ತು ಮಕ್ಕಳು ಕೆಳಗೆ ಕೂತರು.

TV9kannada Web Team

| Edited By: Arun Belly

Apr 21, 2022 | 7:47 PM

ಶಿವಮೊಗ್ಗ: ಇತ್ತೀಚಿನ ರಾಜಕೀಯ ವಿದ್ಯಮಾನಗಳಿಂದ ಕಂಗೆಟ್ಟಿದ್ದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ (KS Eshwarppa) ಅವರ ಮುಖ ಗುರುವಾರ ಕಳೆಯೇರಿತ್ತು. ಅವರ ಮೊಮ್ಮಗನ ಮದುವೆ ಶಿವಮೊಗ್ಗದ ಶುಭಶ್ರೀ ಕಲ್ಯಾಣ ಮಂಟಪದಲ್ಲಿ ಬಹು ವಿಜೃಂಭಣೆಯಿಂದ ಜರುಗಿತು. ಆರಕ್ಷತೆಗೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra), ಸಚಿವ ಭೈರತಿ ಬಸವರಾಜ, ಶಾಸಕ ಹರತಾಳು ಹಾಲಪ್ಪ ಸೇರಿದಂತೆ ಇತರ ಗಣ್ಯರು ಆಗಮಿಸಿದ್ದರು. ಮುಖ್ಯಮಂತ್ರಿಗಳು ವೇದಿಕೆ ಮೇಲೆ ಹೋದಾಗ ನೂಕು ನುಗ್ಗಲು ಜಾಸ್ತಿಯಾಯಿತು. ಬೊಮ್ಮಾಯಿ ಹಾಗೂ ಇತರ ಗಣ್ಯರು ವಧುವರರಿಗೆ ಶುಭ ಹಾರೈಸಿದ ಬಳಿಕ ಈಶ್ವರಪ್ಪನವರು ಮುಖ್ಯಮಂತ್ರಿಗಳು, ಭೈರತಿ ಬಸವರಾಜ ಮತ್ತು ಹಾಲಪ್ಪನವರಿಗೆ ಶಾಲು ಹೊದೆಸಿ ಸನ್ಮಾನಿಸಿದರು.

ಗಣ್ಯರೊಂದಿಗೆ ಗ್ರೂಪ್ ಫೋಟೋಗಾಗಿ ನೂಕುನುಗ್ಗಲು ಇನ್ನಷ್ಟು ಹೆಚ್ಚಾಯಿತು. ಸ್ಟೇಜ್ ಹಿಂಭಾಗದಲ್ಲಿದ್ದ ಮಹಿಳೆಯರು, ಯುವತಿಯರು ಮತ್ತು ಮಕ್ಕಳು ಮುಂದೆ ಬಂದು ಪೋಟೋಗಾಗಿ ಪೋಸ್ ನೀಡಿದರು. ಜಾಗ ಸಾಕಾಗದ ಕಾರಣ ಕೆಲ ಮಹಿಳೆಯರು ಮತ್ತು ಮಕ್ಕಳು ಕೆಳಗೆ ಕೂತರು.

ಅಸಲಿಗೆ ಗೃಹ ಸಚಿವ ಜ್ಞಾನೇಂದ್ರ ಕೊಂಚ ತಡವಾಗಿ ಆರತಕ್ಷತೆಗೆ ಆಗಮಿಸಿದರು. ಈಶ್ವರಪ್ಪ ಅವರನ್ನೂ ಬಹಳ ಆದರ ಮತ್ತು ಸಡಗರದಿಂದ ಬರಮಾಡಿಕೊಂಡರು. ಸಚಿವರು ಮತ್ತು ಶಾಸಕರೊಂದಿಗೆ ಹಲವಾರು ಇಲಾಖೆಗಳ ಅಧಿಕಾರಿಗಳನ್ನು ಸಹ ಸ್ಟೇಜ್ ಮೇಲೆ ನೋಡಬಹುದಿತ್ತು.

ಈಶ್ವರಪ್ಪ ಕಡುನೀಲಿ ಬಣ್ಣದ ಸೂಟ್ ನಲ್ಲಿ ಮಿಂಚುತಿದ್ದರು. ಅವರ ಬೆಂಬಲಿಗರು, ಯುವ ಕಾರ್ಯಕರ್ತರು ಮತ್ತು ಶಾಸಕ ಹಾಲಪ್ಪ ಮೊದಲಾದವರು ಸ್ಟೇಜ್ ಮೇಲೆ ಈಶ್ವರಪ್ಪನವರ ಪಾದಮುಟ್ಟಿ ನಮಸ್ಕಾರ ಮಾಡಿದರು.

ಇದನ್ನೂ ಓದಿ:    Viral Video: ಸಬರಮತಿ ಆಶ್ರಮದಲ್ಲಿ ಚರಕ ತಿರುಗಿಸಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್; ವಿಡಿಯೋ ವೈರಲ್

Follow us on

Click on your DTH Provider to Add TV9 Kannada