ಎ.ಆರ್​. ರೆಹಮಾನ್​ ಪುತ್ರಿ ಖತಿಜಾ ಮದುವೆ; ಅಳಿಯ ರಿಯಾಸ್ದೀನ್​ ಶೇಖ್​ ಮೊಹಮ್ಮದ್​ ಹಿನ್ನೆಲೆ ಏನು?

A R Rahman Daughter Marriage: ಎ.ಆರ್​. ರೆಹಮಾನ್​ ಮಗಳು ಖತಿಜಾ ರೆಹಮಾನ್​ ಮದುವೆ ನೆರವೇರಿದೆ. ಕುಟುಂಬದವರು ಮತ್ತು ಆಪ್ತರು ಮಾತ್ರ ಈ ಸಮಾರಂಭದಲ್ಲಿ ಭಾಗಿ ಆಗಿದ್ದರು.

ಎ.ಆರ್​. ರೆಹಮಾನ್​ ಪುತ್ರಿ ಖತಿಜಾ ಮದುವೆ; ಅಳಿಯ ರಿಯಾಸ್ದೀನ್​ ಶೇಖ್​ ಮೊಹಮ್ಮದ್​ ಹಿನ್ನೆಲೆ ಏನು?
ಎ.ಆರ್. ರೆಹಮಾನ್ ಕುಟುಂಬ
Follow us
TV9 Web
| Updated By: ಮದನ್​ ಕುಮಾರ್​

Updated on: May 06, 2022 | 9:00 AM

ಖ್ಯಾತ ಸಂಗೀತ ನಿರ್ದೇಶಕ ಎ.ಆರ್​. ರೆಹಮಾನ್ (A R Rahman)​ ಅವರು ತಮ್ಮ ಕುಟುಂಬದ ವಿಚಾರವನ್ನು ಸಾಧ್ಯವಾದಷ್ಟು ಖಾಸಗಿಯಾಗಿ ಇರುವಂತೆ ನೋಡಿಕೊಳ್ಳುತ್ತಾರೆ. ಈಗ ಅವರ ಮಗಳ ಮದುವೆ ಕೂಡ ಸದ್ದಿಲ್ಲದೇ ನಡೆದಿದೆ. ಎ.ಆರ್​. ರೆಹಮಾನ್ ಪುತ್ರಿ ಖತಿಜಾ ರೆಹಮಾನ್​ (Khatija Rahman) ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಗಳ ಮದುವೆಯ ನಂತರ ಕ್ಲಿಕ್ಕಿಸಿದ ಫೋಟೋವನ್ನು ಎ.ಆರ್​. ರೆಹಮಾನ್ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರ ಅಭಿಮಾನಿಗಳ ವಲಯದಲ್ಲಿ ಈ ಫೋಟೋ ವೈರಲ್​ ಆಗಿದೆ. ರಿಯಾಸ್ದೀನ್​ ಶೇಖ್​ ಮೊಹಮ್ಮದ್ (Riyasdeen Shaik Mohamed) ಜೊತೆ ಖತಿಜಾ ರೆಹಮಾನ್​ ಅವರು ಜೀವನದ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಕುಟುಂಬದವರು ಮತ್ತು ಆಪ್ತರು ಮಾತ್ರ ಈ ವಿವಾಹ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ. 2021ರ ಡಿಸೆಂಬರ್​ 29ರಂದು ರಿಯಾಸ್ದೀನ್​ ಶೇಖ್​ ಮೊಹಮ್ಮದ್ ಮತ್ತು ಖತಿಜಾ ರೆಹಮಾನ್​ ನಿಶ್ಚಿತಾರ್ಥ ನೆರವೇರಿತ್ತು. ಈಗ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನವದಂಪತಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಎ.ಆರ್​. ರೆಹಮಾನ್​ ಪುತ್ರಿಯ ಕೈ ಹಿಡಿದಿರುವ ರಿಯಾಸ್ದೀನ್​ ಶೇಖ್​ ಮೊಹಮ್ಮದ್ ಅವರ ಹಿನ್ನೆಲೆ ತಿಳಿಯಲು ಫ್ಯಾನ್ಸ್​ ಹಂಬಲಿಸಿದ್ದಾರೆ. ಆ ಕುರಿತು ಇಲ್ಲಿದೆ ಮಾಹಿತಿ..

ಎ.ಆರ್. ರೆಹಮಾನ್​ ಅವರದ್ದು ಸಂಗೀತದ ಹಿನ್ನೆಲೆಯ ಕುಟುಂಬ. ಅವರ ಅಳಿಯ ರಿಯಾಸ್ದೀನ್​ ಶೇಖ್​ ಮೊಹಮ್ಮದ್ ಕೂಡ ಸಂಗೀತವನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ. ಅವರು ಸೌಂಡ್​ ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದಾರೆ. ತಮ್ಮದೇ ಸ್ಟುಡಿಯೋ ಹೊಂದಿರುವ ಅವರು ಬ್ಯುಸಿ ಆಗಿದ್ದಾರೆ. ಎ.ಆರ್​. ರೆಹಮಾನ್​ ಅವರ ಅನೇಕ ಲೈವ್​ ಸಂಗೀತ ಸಮಾರಂಭಗಳಲ್ಲಿ ರಿಯಾಸ್ದೀನ್​ ಶೇಖ್​ ಮೊಹಮ್ಮದ್ ಅವರು ಸೌಂಡ್​ ಇಂಜಿನಿಯರ್​ ಆಗಿ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ
Image
‘ವಿಲ್ ಸ್ಮಿತ್​ ಒಳ್ಳೆಯ ವ್ಯಕ್ತಿ’; ಸಂಗೀತ ನಿರ್ದೇಶಕ ಎ.ಆರ್​​. ರೆಹಮಾನ್ ಮೆಚ್ಚುಗೆಯ ಮಾತು
Image
ಮನೆಯಲ್ಲಿದ್ದ ಆಸ್ಕರ್​ ಟ್ರೋಫಿ ಕಳೆದುಹಾಕಿದ್ದ ಎ.ಆರ್​. ರೆಹಮಾನ್​; ಸಂಗೀತ ನಿರ್ದೇಶಕನ ಸಿನಿ ಪಯಣಕ್ಕೆ 29 ವರ್ಷ
Image
ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್​ಗೆ 54ನೇ ಹುಟ್ಟುಹಬ್ಬದ ಸಂಭ್ರಮ
Image
ಸಂಗೀತ ಸಂಯೋಜಕ, ಗಾಯಕ ಎ.ಆರ್. ರೆಹಮಾನ್​ಗೆ ಮಾತೃ ವಿಯೋಗ

ಖತಿಜಾ ರೆಹಮಾನ್ ಅವರು ಕೂಡ ಸಂಗೀತದಲ್ಲಿ ಪಳಗಿದ್ದಾರೆ. ಅನೇಕ ಸಿನಿಮಾ ಗೀತೆಗಳನ್ನು ಅವರು ಹಾಡಿದ್ದಾರೆ. ಮಗಳ ಮದುವೆಯ ಖುಷಿಯ ಕ್ಷಣಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿರುವ ಎ.ಆರ್​. ರೆಹಮಾನ್​ ಅವರು ಎಲ್ಲರ ಶುಭ ಹಾರೈಕೆ ಬೇಡಿದ್ದಾರೆ. ‘ಈ ದಂಪತಿ ಮೇಲೆ ದೇವರ ಕೃಪೆ ಇರಲಿ. ನಿಮ್ಮೆಲ್ಲರ ಪ್ರೀತಿ ಮತ್ತು ಶುಭ ಹಾರೈಕೆಗಳಿಗಾಗಿ ಮುಂಚಿತವಾಗಿಯೇ ಧನ್ಯವಾದಗಳು’ ಎಂದು ಎ.ಆರ್​. ರೆಹಮಾನ್​ ಬರೆದುಕೊಂಡಿದ್ದಾರೆ. ಅವರು ಹಂಚಿಕೊಂಡಿರುವ ಈ ಫೋಟೋದ ಹಿನ್ನೆಲೆಯಲ್ಲಿ ಅವರ ತಾಯಿ ಕರೀಮಾ ಬೇಗಂ ಅವರ ಭಾವಚಿತ್ರ ಕೂಡ ಹೈಲೈಟ್​ ಆಗಿದೆ. 2020ರಲ್ಲಿ ಕರೀಮಾ ಬೇಗಂ ನಿಧನ ಹೊಂದಿದ್ದು ರೆಹಮಾನ್​ ಕುಟುಂಬಕ್ಕೆ ತೀವ್ರ ನೋವು ಉಂಟು ಮಾಡಿತ್ತು. ಈಗ ಅವರ ಭಾವಚಿತ್ರದ ಎದುರು ಆಶೀರ್ವಾದ ಪಡೆದು ಖತಿಜಾ ಹಾಗೂ ರಿಯಾಸ್ದೀನ್​ ಶೇಖ್​ ಮೊಹಮ್ಮದ್​​ ಅವರು ದಾಂಪತ್ಯ ಜೀವನ ಆರಂಭಿಸಿದ್ದಾರೆ.

ಮದುವೆ ನಂತರದ ಫೋಟೋ ಹಂಚಿಕೊಂಡಿರುವ ಖತಿಜಾ ರೆಹಮಾನ್ ಅವರು, ‘ಇದು ನನ್ನ ಜೀವನದ ಬಹುನಿರೀಕ್ಷಿತ ದಿನ’ ಎಂದು ಬರೆದುಕೊಂಡಿದ್ದಾರೆ. ಖತಿಜಾ ಮತ್ತು ರಿಯಾಸ್ದೀನ್​ ಶೇಖ್​ ಮೊಹಮ್ಮದ್​ ಅವರಿಗೆ ಅನೇಕರು ಅಭಿನಂದನೆ ತಿಳಿಸಿದ್ದಾರೆ. ಗಾಯಕರಾದ ನೀತಿ ಮೋಹನ್​, ಚಿನ್ಮಯಿ ಶ್ರೀಪಾದ​, ಹರ್ಷದೀಪ್​ ಖೌರ್​, ಶ್ರೇಯಾ ಘೋಷಾಲ್​ ಸೇರಿದಂತೆ ಸಂಗೀತ ಲೋಕದ ಹಲವರು ಶುಭ ಹಾರೈಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು