‘ನನ್ನ ಸಿನಿಮಾಗಳನ್ನು ಗಿಮಿಕ್ ಮಾಡಿ ಪ್ರಚಾರ ಮಾಡುವ ಅವಶ್ಯಕತೆ ಇಲ್ಲ’: ಧನಂಜಯ

‘ಹೆಡ್​ ಬುಷ್​’ ಸಿನಿಮಾಗೆ ಈಗ ಜಯರಾಜ್​ ಪುತ್ರ ಅಜಿತ್​ ಜಯರಾಜ್​ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೆಲ್ಲವೂ ಪ್ರಚಾರದ ಗಿಮಿಕ್ ಎಂದು ಕೆಲವರು ಆರೋಪ ಮಾಡಿದ್ದಾರೆ. ಧನಂಜಯ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘

TV9kannada Web Team

| Edited By: Rajesh Duggumane

May 05, 2022 | 10:01 PM

​ಬೆಂಗಳೂರಿನ ಮಾಜಿ ಡಾನ್​ ಜಯರಾಜ್ (Jayaraj)​ ಜೀವನ ಆಧರಿಸಿ ‘ಹೆಡ್​ ಬುಷ್​’ ಸಿನಿಮಾ (Headbush Movie) ತಯಾರಾಗುತ್ತಿದೆ. ಈ ಚಿತ್ರಕ್ಕೆ ಶೂನ್ಯ ನಿರ್ದೇಶನ ಮಾಡುತ್ತಿದ್ದು, ಅಗ್ನಿ ಶ್ರೀಧರ್​ ಅವರ ‘ದಾದಾಗಿರಿಯ ದಿನಗಳು’ ಕೃತಿಯನ್ನು ಆಧರಿಸಿ ಈ ಚಿತ್ರ ಮೂಡಿಬರುತ್ತಿದೆ. ‘ಹೆಡ್​ ಬುಷ್​’ ಸಿನಿಮಾಗೆ ಈಗ ಜಯರಾಜ್​ ಪುತ್ರ ಅಜಿತ್​ ಜಯರಾಜ್​ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೆಲ್ಲವೂ ಪ್ರಚಾರದ ಗಿಮಿಕ್ ಎಂದು ಕೆಲವರು ಆರೋಪ ಮಾಡಿದ್ದಾರೆ. ಈ ಸಿನಿಮಾದಲ್ಲಿ ಜಯರಾಜ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಧನಂಜಯ (Dhananjay) ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ನನ್ನ ಸಿನಿಮಾಗಳನ್ನು ಗಿಮಿಕ್ ಮಾಡಿ ಪ್ರಚಾರ ಮಾಡುವ ಯಾವುದೇ ಅವಶ್ಯಕತೆ ಇಲ್ಲ’ ಎಂದಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಕುರಿತು ಅಗ್ನಿ ಶ್ರೀಧರ್​ ಅವರು ಪ್ರತಿಕ್ರಿಯೆ ನೀಡಿದ್ದರು. ತಾವು ಈ ಸಿನಿಮಾದಲ್ಲಿ ತೋರಿಸುತ್ತಿರುವ ವಿಷಯ ಏನು ಎಂಬುದುನ್ನು ಅವರು ವಿವರಿಸಿದ್ದರು. ಇದನ್ನು ಪ್ರಶ್ನಿಸಲು ಅಜಿತ್​ ಜಯರಾಜ್​ಗೆ ಹಕ್ಕು ಇಲ್ಲ ಎಂದು ಅಗ್ನಿ ಶ್ರೀಧರ್​ ಹೇಳಿದ್ದರು.

 

Follow us on

Click on your DTH Provider to Add TV9 Kannada