ಆ್ಯಕ್ಷನ್ ಅವತಾರದಲ್ಲಿ ಡಾರ್ಲಿಂಗ್ ಕೃಷ್ಣ: ಇಲ್ಲಿದೆ ‘ದಿಲ್ ಪಸಂದ್’ ಸಿನಿಮಾದ ಮೇಕಿಂಗ್ ವಿಡಿಯೋ
ನಟ ಡಾರ್ಲಿಂಗ್ ಕೃಷ್ಣ ಅವರು ಲವರ್ ಬಾಯ್ ಮಾತ್ರವಲ್ಲ. ಅವರು ಆ್ಯಕ್ಷನ್ ಹೀರೋ ಕೂಡ ಹೌದು. ‘ದಿಲ್ ಪಸಂದ್’ ಚಿತ್ರದ ಫೈಟಿಂಗ್ ದೃಶ್ಯದ ಶೂಟಿಂಗ್ನಲ್ಲಿ ಅವರು ಭಾಗಿ ಆಗಿದ್ದಾರೆ.
‘ಲವ್ ಮಾಕ್ಟೇಲ್’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ನಟ ಡಾರ್ಲಿಂಗ್ ಕೃಷ್ಣ (Darling Krishna) ಅವರ ಲೈಫ್ ಬದಲಾಯಿತು. ಈ ವರ್ಷ ತೆರೆಕಂಡ ‘ಲವ್ ಮಾಕ್ಟೇಲ್ 2’ ಚಿತ್ರದಿಂದಲೂ ಅವರು ಭರ್ಜರಿ ಗೆಲುವು ಪಡೆದುಕೊಂಡರು. ಈಗ ಅನೇಕ ಸಿನಿಮಾಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟರಲ್ಲಿ ಒಬ್ಬರಾಗಿ ಡಾರ್ಲಿಂಗ್ ಕೃಷ್ಣ ಮಿಂಚುತ್ತಿದ್ದಾರೆ. ಅವರು ನಟಿಸುತ್ತಿರುವ ‘ದಿಲ್ ಪಸಂದ್’ (Dil Pasand Kannada Movie) ಸಿನಿಮಾದ ಶೂಟಿಂಗ್ ಭರದಿಂದ ಸಾಗಿದೆ. ಇತ್ತೀಚೆಗೆ ಈ ಚಿತ್ರಕ್ಕೆ ಸಾಹಸ ಸನ್ನಿವೇಶದ ಶೂಟಿಂಗ್ ಮಾಡಲಾಯಿತು. ಆ್ಯಕ್ಷನ್ ಅವತಾರದಲ್ಲಿ ಡಾರ್ಲಿಂಗ್ ಕೃಷ್ಣ ಅವರು ಕ್ಯಾಮೆರಾ ಎದುರಿಸಿದ್ದಾರೆ. ಈ ಸಿನಿಮಾದಲ್ಲಿ ನಿಶ್ವಿಕಾ ನಾಯ್ಡು (Nishvika Naidu), ಮೇಘಾ ಶೆಟ್ಟಿ ಕೂಡ ನಟಿಸುತ್ತಿದ್ದಾರೆ. ಶಿವ ತೇಜಸ್ ನಿರ್ದೇಶನದ ಈ ಚಿತ್ರವನ್ನು ಸುಮಂತ್ ಕ್ರಾಂತಿ ನಿರ್ಮಾಣ ಮಾಡುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.