ಹಿರಿಯ ಬಿಜೆಪಿ ನಾಯಕ ಎಸ್ ಎಂ ಕೃಷ್ಣರಿಗೆ ತಡವಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದರು ಮುಖ್ಯಮಂತ್ರಿ ಬೊಮ್ಮಾಯಿ

ಹಿರಿಯ ಬಿಜೆಪಿ ನಾಯಕ ಎಸ್ ಎಂ ಕೃಷ್ಣರಿಗೆ ತಡವಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದರು ಮುಖ್ಯಮಂತ್ರಿ ಬೊಮ್ಮಾಯಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:May 06, 2022 | 4:33 PM

ರಾಜ್ಯ ಸಚಿವ ಸಂಪುಟದಲ್ಲಿ ಕಂದಾಯ ಸಚಿವರಾಗಿರುವ ಆರ್ ಅಶೋಕ್ ಸಹ ಸ್ವಲ್ಪ ಸಮಯದ ನಂತರ ಮುಖ್ಯಮಂತ್ರಿಗಳನ್ನು ಜೊತೆಗೂಡಿದರು. ಮುಖ್ಯಮಂತ್ರಿಗಳು, ಕೃಷ್ಣ ಅವರ ಧರ್ಮಪತ್ನಿ ಪ್ರೇಮಾ ಅವರೊಂದಿಗೆ ಆತ್ಮೀಯವಾಗಿ ಹರಟುವುದನ್ನು ವಿಡಿಯೋನಲ್ಲಿ ನೋಡಬಹುದು.

Bengaluru: ಹಿರಿಯ ಮುತ್ಸದ್ದಿ ಮತ್ತು ನಮ್ಮ ರಾಜ್ಯ ಕಂಡಿರುವ ಧೀಮಂತ ನಾಯಕರಲ್ಲಿ ಒಬ್ಬರಾಗಿರುವ ಎಸ್ ಎಮ್ ಕೃಷ್ಣ (SM Krishna) ಅವರು ಕಾರ್ಮಿಕರ ದಿನದಂದು ಅಂದರೆ ಮೇ 1ರಂದು ತಮ್ಮ 90 ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಅಂದು ಕೃಷ್ಣ ಅವರಿಗೆ ಭೇಟಿ ಮಾಡುವುದು ಸಾಧ್ಯವಾಗಿರಲಿಲ್ಲ. ಹಾಗಾಗೇ, ಮುಖ್ಯಮಂತ್ರಿಗಳು ಶುಕ್ರವಾರ ಕೃಷ್ಣ ಅವರ ಮನೆಗೆ ಭೇಟಿ ನೀಡಿ ಹುಟ್ಟು ಹಬ್ಬದ ಶುಭಾಶಯ (birthday wishes) ಕೋರಿದರು. ಕೃಷ್ಣ ಅವರಿಗೆ ವಯಸ್ಸು 90 ಅದರೂ ಮುಖದಲ್ಲಿ ಲವಲವಿಕೆ ಮಾಸಿಲ್ಲ. ಖುದ್ದು ತಾವೇ ಬಾಗಿಲಲ್ಲಿ ನಿಂತು ಬೊಮ್ಮಾಯಿ ಅವರಿಗೆ ಹೂವಿನ ಹಾರ ಹಾಕಿ ಬರಮಾಡಿಕೊಂಡರು. ಬೊಮ್ಮಾಯಿ ಅವರು ಶಾಲು ಹೊದಿಸಿ, ಬೋಕೆ ಮತ್ತು ಕಾಣಿಕೆ ನೀಡಿ ಕೃಷ್ಣ ಅವರಿಗೆ ಶುಭ ಕೋರಿದರು.

ರಾಜ್ಯ ಸಚಿವ ಸಂಪುಟದಲ್ಲಿ ಕಂದಾಯ ಸಚಿವರಾಗಿರುವ ಆರ್ ಅಶೋಕ್ ಸಹ ಸ್ವಲ್ಪ ಸಮಯದ ನಂತರ ಮುಖ್ಯಮಂತ್ರಿಗಳನ್ನು ಜೊತೆಗೂಡಿದರು. ಮುಖ್ಯಮಂತ್ರಿಗಳು, ಕೃಷ್ಣ ಅವರ ಧರ್ಮಪತ್ನಿ ಪ್ರೇಮಾ ಅವರೊಂದಿಗೆ ಆತ್ಮೀಯವಾಗಿ ಹರಟುವುದನ್ನು ವಿಡಿಯೋನಲ್ಲಿ ನೋಡಬಹುದು.

1962 ರಲ್ಲಿ ತಮ್ಮ ರಾಜಕೀಯ ಬದುಕು ಆರಂಭಿಸಿದ ಕೃಷ್ಣ ಅವರು ಮದ್ದೂರು ಕ್ಷೇತ್ರದಿಂದ ಒಬ್ಬ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆ ಕಾಲದ ಪ್ರಮುಖ ಕಾಂಗ್ರೆಸ್ ನಾಯಕರಲ್ಲಿ ಒಬ್ಬರೆನಿಸಿಕೊಂಡಿದ್ದ ಕೆವಿ ಶಂಕರ್ ಗೌಡ ಅವರನ್ನು ಸೋಲಿಸುವ ಮೂಲಕ ವಿಧಾನ ಸಭೆಯನ್ನು ಪ್ರವೇಶಿಸಿದ್ದರು. ಆ ಗೆಲುವು ಯಾಕೆ ಪ್ರಾಮುಖ್ಯತೆ ಪಡೆದಿದೆಯೆಂದರೆ, ಶಂಕರ್ ಅವರ ಪರ ಆಗಿನ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ ನೆಹರೂ ಅವರು ಪ್ರಚಾರ ಮಾಡಿದ್ದರು. ಅದಾದ ಮೇಲೆ ಅವರ ರಾಜಕೀಯ ಬದುಕು ಏರಿಳಿತಗಳನ್ನು ಕಂಡಿದ್ದು ನಿಜ. ಕಾಂಗ್ರೆಸ್ ಪಕ್ಷ ಸೇರಿದ ಬಳಿಕ ರಾಜ್ಯ ರಾಜಕೀಯದಲ್ಲಿ ಅವರ ವರ್ಚಸ್ಸು ಹೆಚ್ಚಿತು ಅಂತ ಹೇಳಲಾಗುತ್ತದೆ.

ಮುಂದೆ ಅವರು 1999 ರಿಂದ 2004 ರವರೆಗೆ ರಾಜ್ಯದ 16 ನೇ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದರು. ಅವರ ಕಾಲದಲ್ಲೇ ಬೆಂಗಳೂರು ಅಗಾಧ ಪ್ರಗತಿ ಕಂಡು ಸಿಲಿಕಾನ್ ಸಿಟಿ ಅನಿಸಿಕೊಂಡಿತು. ಮನ್ ಮೋಹನ್ ಸಿಂಗ್ ಅವರು ಎರಡನೇ ಬಾರಿ ಪ್ರಧಾನಿಯಾಗಿದ್ದಾಗ ಕೃಷ್ಣ ಅವರು ವಿದೇಶಾಂಗ ಖಾತೆ ಸಚಿವರಾಗಿ ಕೆಲಸ ಮಾಡಿದರು.

ದಶಕಗಳ ಕಾಲ ಕಾಂಗ್ರೆಸ್ ನಲ್ಲಿದ್ದ ಕೃಷ್ಣ ಅವರು 2017 ರಲ್ಲಿ ಬಿಜೆಪಿ ಸೇರಿದರು.

ಇದನ್ನೂ ಓದಿ:  ಅನಂತ ಪ್ರೇರಣಾ ಕೇಂದ್ರ ಉದ್ಘಾಟನೆ; ದಿ. ಅನಂತ್ ಕುಮಾರ್ರ ಜೊತೆಗಿನ ಕಾಲೇಜ್ ಡೇಸ್ಗಳನ್ನು ಮೆಲುಕು ಹಾಕಿದ ಸಿಎಂ ಬೊಮ್ಮಾಯಿ

Published on: May 06, 2022 04:32 PM