Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೊಮ್ಮಾಯಿ ನೇಮಕಗೊಂಡಿರುವ ಮುಖ್ಯಮಂತ್ರಿಯೇ ಹೊರತು ಚುನಾಯಿತ ಮುಖ್ಯಮಂತ್ರಿ ಅಲ್ಲ: ಸಿದ್ದರಾಮಯ್ಯ

ಬೊಮ್ಮಾಯಿ ನೇಮಕಗೊಂಡಿರುವ ಮುಖ್ಯಮಂತ್ರಿಯೇ ಹೊರತು ಚುನಾಯಿತ ಮುಖ್ಯಮಂತ್ರಿ ಅಲ್ಲ: ಸಿದ್ದರಾಮಯ್ಯ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:May 05, 2022 | 9:10 PM

ಈಗ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿರುವುದರಿಂದ ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಅಕ್ರಮಗಳು ನಡೆದಿದ್ದರೆ ತನಿಖೆ ಮಾಡಿಸಲಿ, ಅವರನ್ನು ತಡೆದವರು ಯಾರು ಎಂದು ಸಿದ್ದರಾಮಯ್ಯ ಹೇಳಿದರು.

Mysuru:  ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು (Siddaramaiah) ಗುರುವಾರದಂದು ಮೈಸೂರಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಮಾತಾಡುವ ಭರದಲ್ಲಿ ಒಂದು ಆಕ್ಷೇಪಾರ್ಹ ಪದವನ್ನು (Unsolicited Word) ಬಳಸಿಬಿಡುತ್ತಾರೆ ಅದರೆ ಅದಕ್ಕಾಗಿ ಕೂಡಲೇ ಕ್ಷಮೆಯಾಚಿಸಿ ದಯವಿಟ್ಟು ಆ ಪದವನ್ನು ಉಲ್ಲೇಖಿಸಬೇಡಿ ಅಂತ ಹೇಳುತ್ತಾರೆ. ಪಿಎಸ್ಐ ನೇಮಕಾತಿ ಪ್ರಕರಣ (PSI Recruitment Scam) ಸರ್ಕಾರದ ಪಾಲಿಗೆ ಉರುಲಾಗುತ್ತಿರುವುದು ಕನ್ನಡಿಗರಿಗೆ ಗೊತ್ತಾಗುತ್ತಿದೆ. ಹಗರಣದಲ್ಲಿ ಸಚಿವರ ಜೊತೆ ಅಧಿಕಾರಿಗಳು ಸಹ ಶಾಮೀಲಾಗಿದ್ದಾರೆ. ಹಗರಣ ನಿಷ್ಪಕ್ಷಪಾತ ತನಿಖೆ ನಡೆಯುತ್ತಿದೆ ಅಂತ ಸರ್ಕಾರ ಹೇಳುತ್ತಿದೆ, ಆದರೆ ಅದೆಲ್ಲ ಸುಳ್ಳು, ಪ್ರಕರಣದಲ್ಲಿ ಶಾಮೀಲಾಗಿರುವ ಗಣ್ಯರ ಸಂಬಂಧಿಕಕರನ್ನು ಕೇವl ಕಚೇರಿಗೆ ಕರೆಸಿ ಒಂದೆರಡು ಪ್ರಶ್ನೆಗಳನ್ನು ಕೇಳಿ ವಾಪಸ್ಸು ಕಳಿಸಲಾಗುತ್ತಿದೆಯೇ ಹೊರತು ಬಂಧಿಸುವ ಕೆಲಸ ಆಗುತ್ತಿಲ್ಲ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ.

ಮೈಸೂರಲ್ಲಿ ಸಿದ್ದರಾಮಯ್ಯನವರು ಕೋಪಾವಿಷ್ಟರಾಗಲು ಕಾರಣವಿದೆ. ಹಗರಣಗಳ ಪ್ರಸ್ತಾಪವಾದಾಗಲೆಲ್ಲ ಸರ್ಕಾರದ ಪ್ರತಿನಿಧಿಗಳು ಕಾಂಗ್ರೆಸ್ ಅಧಿಕಾರದಲ್ಲಿರುವಾಗ ಆಗಿರಲಿಲ್ಲವೇ? ಅಂತ ಕೇಳುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ಕೋಪ ತರಿಸಿದ ಅಂಶವಿದೇ. ಅವರು ಹೇಳಿದ್ದೇನೆಂದರೆ, ನಮ್ಮ ಅಧಿಕಾರದಲ್ಲಿ ಹಗರಣಗಳ ನಡೆದಾಗ ಬಿಜೆಪಿ ನಾಯಕರು ಏನು ಮಾಡುತ್ತಿದ್ದರು, ಅಷ್ಟಕ್ಕೂ ಅವರ ಸುಮ್ಮನಿದ್ದಿದ್ದು ಯಾಕೆ? ಹಗರಣಗಳನ್ನು ಬಯಲಿಗೆಳೆಯುವುದು ವಿರೋಧ ಪಕ್ಷದಲ್ಲಿರುವವರ ಜವಾಬ್ದಾರಿ ತಾನೆ ಅಂತ ಸಿದ್ದರಾಮಯ್ಯ ಕೇಳುತ್ತಾರೆ.

ಈಗ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿರುವುದರಿಂದ ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಅಕ್ರಮಗಳು ನಡೆದಿದ್ದರೆ ತನಿಖೆ ಮಾಡಿಸಲಿ, ಅವರನ್ನು ತಡೆದವರು ಯಾರು ಎಂದು ಸಿದ್ದರಾಮಯ್ಯ ಹೇಳಿದರು. ಮನಸ್ಸಿಗೆ ಬಂದ ಸಬೂಬುಗಳನ್ನು ಹೇಳುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇನೂ ಚುನಾಯಿತ ಮುಖ್ಯಮಂತ್ರಿ ಅಲ್ಲ, ನೇಮಕಗೊಂಡಿರುವ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ:  ಸಿದ್ದರಾಮಯ್ಯನವರ ಅವಧಿಯಲ್ಲೂ ಸಾಕಷ್ಟು ಹಗರಣಗಳಾಗಿವೆ; ಛಲವಾದಿ ನಾರಾಯಣಸ್ವಾಮಿ ಟೀಕೆ

Published on: May 05, 2022 09:09 PM