ಜೋರು ಮಳೆ ಮತ್ತು ರಭಸವಾಗಿ ಬೀಸಿದ ಗಾಳಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿದ್ದ ಸಿಬ್ಬಂದಿ, ರೋಗಿಗಳು ಕಂಗಾಲು
ಈ ಮಳೆಯೇನೂ ಕೂಡಲೇ ನಿಲ್ಲುವ ಲಕ್ಷಣಗಳಿಲ್ಲ ಮಾರಾಯ್ರೇ. ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ ಮುಂದಿನ ನಾಲ್ಕು ದಿನಗಳ ಕಾಲ ಮಳೆ ಸುರಿಯಲಿದೆ.
Hubballi: ಕರ್ನಾಟಕದಲ್ಲಿ ಅಕಾಲಿಕ ಮಳೆ ಪ್ರತಿದಿನ ಅವಾಂತರಗಳನ್ನು ಸೃಷ್ಟಿಸುತ್ತಿದೆ ಮಾರಾಯ್ರೇ. ಕಲ್ಯಾಣ ಕರ್ನಾಟಕದಲ್ಲೂ (Kalyana Karnataka) ಹಲವಾರು ಕಡೆ ಭಾರಿ ಮಳೆಯಾಗುತ್ತಿದೆ. ಹುಬ್ಬಳ್ಳಿಯಲ್ಲಿ ಮಳೆ ಸೃಷ್ಟಿಸಿರುವ ಸನ್ನಿವೇಶವನ್ನು ಈ ವಿಡಿಯೋನಲ್ಲಿ ನೋಡಿ. ನಿಮಗೆ ಕಾಣುಸುತ್ತಿರೋದು ಕಿಮ್ಸ್ ಆಸ್ಪತ್ರೆ (KIMS Hospital). ನಮ್ಮ ಕೆಮೆರಾಮನ್ ಅಸ್ಪತ್ರೆಯೊಳಗಡೆ ಇದ್ದಾರೆ. ಹೊರಗಡೆ ಧೋ ಅಂತ ಸುರಿಯುವ ಮಳೆ ಜೊತೆ ಜೋರಾಗಿ ಗಾಳಿಯೂ ಬೀಸುತ್ತಿದೆ. ಗಾಳಿಯ ರಭಸ ಹೇಗಿದೆಯೆಂದರೆ, ಆಸ್ಪತ್ರೆ ಒಳಗಡೆ ಮೇಲ್ಛಾವಣಿಗೆ ಹೊಂದಿಸಲಾಗಿರುವ ಥರ್ಮೊಕೋಲ್ ಶೀಟ್ (thermocol sheets) ಹೊಯ್ದಾಡುತ್ತಿವೆ. ಕೆಲವು ಭಾಗಗಳಲ್ಲಿ ಕಿತ್ತು ಬಂದಿರುವ ವರದಿಯೂ ಇದೆ. ಕಿಟಕಿಯ ಗಾಜಗಳು ಒಡೆದಿವೆ. ಆಸ್ಪತ್ರೆಯ ಸಿಬ್ಬಂದಿ, ಒಳರೋಗಿಗಳು ಮತ್ತು ಹೊರರೋಗಿಗಳು ಭೀತಿಗೊಳಗಾಗುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಈ ಮಳೆಯೇನೂ ಕೂಡಲೇ ನಿಲ್ಲುವ ಲಕ್ಷಣಗಳಿಲ್ಲ ಮಾರಾಯ್ರೇ. ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ ಮುಂದಿನ ನಾಲ್ಕು ದಿನಗಳ ಕಾಲ ಮಳೆ ಸುರಿಯಲಿದೆ. ಗುರುವಾರದಂದು ಹುಬ್ಬಳ್ಳಿ ನಗರದಲ್ಲಿ ಕಾಲೇಜಿನಿಂದ ಮನೆಗೆ ಸ್ಕೂಟರ್ ನಲ್ಲಿ ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರು ಮಳೆಯಲ್ಲಿ ಸಿಕ್ಕು ಕೆಳಗೆ ಬಿದ್ದು ಪರದಾಡಿದ ಘಟನೆ ವೈರಲ್ ಆಗಿದೆ.
ಅಕಾಲಿಕ ಮಳೆ, ನೈಸರ್ಗಿಕ ವಿಕೋಪಗಳಿಗೆ ಯಾರನ್ನೂ ದೂರಲಾಗದು ಮಾರಾಯ್ರೇ. ಅವುಗಳೊಂದಿಗೆ ನಾವು ಏಗಬೇಕು ಅಷ್ಟೇ. ಗಾಳಿಯ ರಭಸಕ್ಕೆ ಗಿಡಮರಗಳು ಉರುಳುತ್ತವೆ, ಶಿಥಿಲಗೊಂಡಿರುವ ಮನೆಗಳು ಕುಸಿದು ಬೀಳುತ್ತವೆ. ಈ ಮಳೆಯಿಂದ ಬಿಸಿಲಿನ ಧಗೆಯಾಗಿ ಕಡಿಮೆಯಾಗಿ ವಾತಾವರಣ ತಂಪಾಗುತ್ತದೆ ಅನ್ನೋದನ್ನು ಬಿಟ್ಟರೆ ಆಗುವ ಪ್ರಯೋಜನಗಳು ಏನೂ ಇಲ್ಲ.
ಇದನ್ನೂ ಓದಿ: Bengaluru Rains: ಕಾಮಾಕ್ಯ ಬಡಾವಣೆಯಲ್ಲಿ 50ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ರಾಜಕಾಲುವೆ ನೀರು, ಕೊಚ್ಚಿ ಹೋದ ವಾಹನಗಳು