ಉಳಿದೆಲ್ಲ ಪ್ರಕರಣಗಳಂತೆ ಪಿ ಎಸ್ ಐ ನೇಮಕಾತಿ ಹಗರಣದ ತನಿಖೆಯೂ ಹಳ್ಳ ಹಿಡಿಯಲಿದೆ: ಹೆಚ್ ಡಿ ಕುಮಾರಸ್ವಾಮಿ
ಪಿಎಸ್ ಐ ನೇಮಕಾತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕಿಂಗ್ ಪಿನ್ ಗಳು ಮುಂದಿನ 15 ದಿನಗಳ ನಂತರ ಜೈಲಿನಿಂದ ಹೊರನಡೆಯುತ್ತಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಪ್ರಕರಣ ಮಾಡುವಲ್ಲಿ ಕಿಂಗ್ ಪಿನ್ ಅನಿಸಿಕೊಂಡಿದ್ದ ಅದ್ಯಾವನೋ ಶಿವಕುಮಾರ ಎನ್ನುವವನ ಕತೆ ಏನಾಯಿತು? ಎಂದು ಕುಮಾರಸ್ವಾಮಿ ಕೇಳಿದರು.
Bengaluru: ಪಿ ಎಸ್ ಐ ನೇಮಕಾತಿ ಹಗರಣದ (PSI Recruitment Scam) ಭವಿಷ್ಯ ಏನಾಗುತ್ತದೆ ಅಂತ ಮಾಜಿ ಮುಖ್ಯಾಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಷರಾ ಬರೆದಿದ್ದಾರೆ. ಬೆಂಗಳೂರಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತಾಡಿದ ಕುಮಾರಸ್ವಾಮಿ ಅವರು ಇನ್ನೆರಡು ವಾರಗಳಲ್ಲಿ ಪ್ರಕರಣ ಮುಚ್ಚಿಹೋಗುತ್ತದೆ ಈಗ ಬಂಧನಕ್ಕೊಳಗಾದವರೆಲ್ಲ ಹೊರಬರುತ್ತಾರೆ, ಅಲ್ಲಿಗೆ ಪ್ರಕರಣದ ಇತಿಶ್ರೀ (closure) ಎಂದು ವ್ಯಂಗ್ಯವಾಗಿ ಹೇಳಿದರು. ಹಿಂದೆ ನಡೆದ ಘಟನೆಗಳನ್ನು ಉಲ್ಲೇಖಿಸಿದ ಕುಮಾರಸ್ವಾಮಿ ಅವರು ಅವುಗಳಲ್ಲಿ ಯಾವುದೇ ಪ್ರಕರಣದ ತನಿಖೆ ತಾತ್ವಿಕ ಅಂತ್ಯ ಕಾಣದೆ ಹಳ್ಳ ಹಿಡಿದವು ಎಂದರು. ಡ್ರಗ್ ಪ್ರಕರಣ ಉತ್ತುಂಗದಲ್ಲಿದ್ದಾಗ, ಒಬ್ಬ ಮಾಜಿ ಮುಖ್ಯಮಂತ್ರಿಯ ಹೆಸರು ಕೇಳಿಬಂದಿತ್ತು. ಅದರೆ ಆ ಮಾಜಿ ಮುಖ್ಯಮಂತ್ರಿ ಯಾರು ಅಂತ ಬಹಿರಂಗಗೊಳ್ಳಲೇ ಇಲ್ಲ ಎಂದು ಅವರು ಹೇಳಿದರು. ನಾನೇ ಹಲವಾರು ಬಾರಿ ಕೇಳಿದೆ, ಯಾರಪ್ಪಾ ಆ ಮಾಜಿ ಮುಖ್ಯಮಂತ್ರಿ ಅಂತ, ಯಾರೂ ಹೇಳಲಿಲ್ಲ ಎಂದು ಅವರು ಹೇಳಿದರು.
ಕ್ರಿಕೆಟ್ ಬೆಟ್ಟಿಂಗ್ ಮತ್ತು ಲಾಟರಿ ದಂಧೆಗಳಲ್ಲಿ ಸಿಕ್ಕಿ ಹಾಕಿಕೊಂಡವರ ಕತೆ ಕೂಡ ಅದೇ ಆಯಿತು. ಬಿಜೆಪಿ ಪಕ್ಷದಲ್ಲಿ ಅವರೇ ಕ್ಯಾಂಡಿಡೇಟ್ ಗಳು, ಹಿಂದೆ ಸಿಕ್ಕಿ ಹಾಕಿಕೊಂಡವರ ಜಾತಕಗಳನ್ನು ತಡಕಾಡಿದರೆ ಎಲ್ಲ ಹೊರಬರುತ್ತದೆ. ಪಿಎಸ್ ಐ ನೇಮಕಾತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕಿಂಗ್ ಪಿನ್ ಗಳು ಮುಂದಿನ 15 ದಿನಗಳ ನಂತರ ಜೈಲಿನಿಂದ ಹೊರನಡೆಯುತ್ತಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಪ್ರಕರಣ ಮಾಡುವಲ್ಲಿ ಕಿಂಗ್ ಪಿನ್ ಅನಿಸಿಕೊಂಡಿದ್ದ ಅದ್ಯಾವನೋ ಶಿವಕುಮಾರ ಎನ್ನುವವನ ಕತೆ ಏನಾಯಿತು? ಅವನೀಗ ಬದುಕಿದ್ದಾನೋ ಇಲ್ಲವೋ ಗೊತ್ತಿಲ್ಲ. ಅದರೆ ಅರೆಸ್ಟ್ ಆದ ಬಳಿಕ ಅವನು ಹೆಚ್ಚು ದಿನ ಜೈಲಿನಲ್ಲಿರಲಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಪಿ ಎಸ್ ಐ ನೇಮಕಾತಿ ಹಗರಣದ ತನಿಖೆ ಕೂಡ ಭಿನ್ನವಾಗೇನೂ ಇರಲಾರದು. ಸ್ವಲ್ಪ ದಿನಗಳ ನಂತರ ಇದನ್ನೂ ಹಳ್ಳಹಿಡಿಸಲಾಗುತ್ತದೆ ಎಂದು ಕುಮಾಸ್ವಾಮಿ ಹೇಳಿದರು. ಅವರು ಹೇಳುತ್ತಿರುವ ಕೆಲ ಅಂಶಗಳು ಸರಿ ಇರಬಹುದು ಮಾರಾಯ್ರೇ.
ಆದರೆ ಕನ್ನಡಿಗರಿಗೆ ಚೆನ್ನಾಗಿ ನೆನಪಿದೆ. ಡ್ರಗ್ಸ್ ಪ್ರಕರಣದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರ ಹೆಸರು ತಳುಕು ಹಾಕಿಕೊಂಡಿತ್ತು. ಕುಮಾರಸ್ವಾಮಿಯವರು ಕೇವಲ ಮುಖ್ಯಮಂತ್ರಿಯಾಗಿದ್ದವರ ಹೆಸರು ಅಂತ ಹೇಳುತ್ತಾರೆ.
ಇದನ್ನೂ ಓದಿ: ಪೊಲೀಸ್ ಕಮಿಷನರ್ ಕಮಲ್ ಪಂತ್ ವಿರುದ್ಧ ಬಿಜೆಪಿಯವರು ಮಾತಾಡಿದ್ದರಿಂದ ಪಿಎಸ್ಐ ಅಕ್ರಮ ಹೊರಬಂದಿದೆ -ಹೆಚ್ಡಿ ಕುಮಾರಸ್ವಾಮಿ