ಮುಖ್ಯಮಂತ್ರಿಯವರಲ್ಲಿ ಕಷ್ಟ ಹೇಳಿಕೊಳ್ಳಲು ಬಂದು ಕುಸಿದುಬಿದ್ದ ಆಸ್ಪತ್ರೆ ಸೇರಿದ ಮಹಿಳೆಯ ಉದ್ದೇಶ ಈಡೇರಿತೇ?
ಯೋಚಿಸಬೇಕಿರುವ ವಿಷಯವೇನೆಂದರೆ, ಸದರಿ ಮಹಿಳೆಯ ಉದ್ದೇಶ ಈಡೇರುವುದೇ ಇಲ್ಲ. ಆಸ್ಪತ್ರೆಗೆ ಸಾಗಿಸುವಾಗ ಮಹಿಳೆ ಪ್ರಜ್ಞಾಹೀನರಾಗಿದ್ದರು. ಪ್ರಜ್ಞೆ ಬಂದಾಗ ತಾನು ಅಸ್ಪತ್ರೆಯಲ್ಲಿರುವುದನ್ನು ಅರಿತು ಮತ್ತಷ್ಟು ಗಾಬರಿಯಾಗುತ್ತಾರೆ. ಅಲ್ಲಿಂದ ಹೊರಬಿದ್ದು ಯಾವಾಗ ಊರು ತಲುಪಿಯೇನು ಅನ್ನುವ ಆತಂಕ ಕಾಡಲಾರಂಭಿಸುತ್ತದೆ
ಬೆಂಗಳೂರು: ಮುಖ್ಯಮಂತ್ರಿಗಳು ಯಾರೇ ಅಗಿರಲಿ, ಅವರ ನಿವಾಸ ಮುಂದೆ ಪ್ರತಿದಿನ ಜನ ನೆರೆದಿರುತ್ತಾರೆ. ಪಾಪ ಅವರನ್ನು ದೂರಲಾಗದು. ಹಿಂದೆ ರಾಜಮಹಾರಾಜರ ಕಾಲದಲ್ಲೂ ಸಂಕಷ್ಟಪೀಡಿತ ಪ್ರಜೆಗಳು ತಮ್ಮನ್ನಾಳುತ್ತಿದ್ದ ಅರಸನನ್ನು (kings) ಅರಸಿಕೊಂಡು ಅರಮನೆಗೆ ಬರುತ್ತಿದ್ದರು. ಅರಸ ದಯಾಳುವಾಗಿದ್ದರೆ ಪ್ರಜೆಗಳಿಗೆ (people) ಅವನ ದರ್ಶನ ಭಾಗ್ಯ ಸಿಗುತಿತ್ತು. ಅವನು ಕಠೋರ ಮನಸ್ಸಿನವನಾಗಿದ್ದರೆ, ಅರಮನೆಯ ದ್ವಾರಪಾಲಕರು ಪ್ರಜೆಗಳು ಅವರನ್ನು ಮುಖ್ಯದ್ವಾರದ (main gate) ಬಳಿಯೇ ತಡೆದುಬಿಡುತ್ತಿದ್ದರು. ನಮ್ಮ ಮುಖ್ಯಮಂತ್ರಿಗಳೆಲ್ಲ ಒಂದರ್ಥದಲ್ಲಿ ಅರಸರೇ. ಎಲ್ಲ ಅವರ ಅಣತಿಯ ಮೇರೆಗೆ ನಡೆಯುತ್ತದೆ. ಇದನ್ನೆಲ್ಲ ಯಾಕೆ ಹೇಳಬೇಕಾಗಿದೆ ಅಂದರೆ ತುಮಕೂರಿನ ಗುಬ್ಬಿ ಪಟ್ಟಣದ ನಿವಾಸಿಯಾಗಿರುವ ಒಬ್ಬ ಮಹಿಳೆ ಗುರುವಾರದಂದು ಮುಖ್ಯಮಂತ್ರಿಗಳಿಗೆ ತಮ್ಮ ಕಷ್ಟ ಹೇಳಿಕೊಳ್ಳಲು ಬಂದಿದ್ದಾರೆ. ಆದರೆ ಅವರಿಗೆ ಸಿಎಮ್ ರೊಂದಿಗೆ ಮಾತಾಡಲು ಅವಕಾಶ ಸಿಕ್ಕಿಲ್ಲ.
ಬೆಳಗ್ಗೆಯಿಂದ ಕಾಯುತ್ತಿದ್ದ ಮಹಿಳೆ ಬಿಸಿಲೇರಿದಂತೆ ನಿತ್ರಾಣರಾಗತೊಡಗಿದ್ದಾರೆ. ಅವರು ಹಸಿದಿದ್ದರೋ, ನೀರಡಿಸಿದ್ದರೋ ನಮಗೆ ಗೊತ್ತಾಗಿಲ್ಲ.
ಮಧ್ಯಾಹ್ನದ ಸಮಯದಲ್ಲಿ ಮಹಿಳೆ ಕುಸಿದು ಬಿದ್ದ್ದಿದ್ದಾರೆ, ಪ್ರಾಯಶಃ ನಿತ್ರಾಣದಿಂದಲೇ ಇರಬೇಕು. ವಿಷಯ ಮುಖ್ಯಮಂತ್ರಿಗಳಿಗೆ ಗೊತ್ತಾದ ಕೂಡಲೇ ಅವರು ಅಂಬ್ಯುಲೆನ್ಸ್ ಮೂಲಕ ಅವರನ್ನು ಆಸ್ಪತ್ರೆಗೆ ಕಳಿಸುವ ವ್ಯವಸ್ಥೆ ಮಾಡಿದ್ದಾರೆ.
ಆಸ್ಪತ್ರೆಯ ಮಹಿಳಾ ಸಿಬ್ಬಂದಿ ಅವರನ್ನು ಅಂಬ್ಯುಲೆನ್ಸ್ ನಲ್ಲಿ ಕರೆದೊಯ್ಯುತ್ತಿರುವುದು ನಿಮಗೆ ವಿಡಿಯೋನಲ್ಲಿ ಕಾಣುತ್ತದೆ. ಅಲ್ಲಿ ಅವರಿಗೆ ಚಿಕಿತ್ಸೆ ಸಿಕ್ಕಿರುತ್ತದೆ ಮತ್ತು ಗುಣಮುಖರಾಗಿರುತ್ತಾರೆ, ಆ ಪ್ರಶ್ನೆ ಬೇರೆ.
ಆದರೆ ಯೋಚಿಸಬೇಕಿರುವ ವಿಷಯವೇನೆಂದರೆ, ಸದರಿ ಮಹಿಳೆಯ ಉದ್ದೇಶ ಈಡೇರುವುದೇ ಇಲ್ಲ. ಆಸ್ಪತ್ರೆಗೆ ಸಾಗಿಸುವಾಗ ಮಹಿಳೆ ಪ್ರಜ್ಞಾಹೀನರಾಗಿದ್ದರು. ಪ್ರಜ್ಞೆ ಬಂದಾಗ ತಾನು ಅಸ್ಪತ್ರೆಯಲ್ಲಿರುವುದನ್ನು ಅರಿತು ಮತ್ತಷ್ಟು ಗಾಬರಿಯಾಗುತ್ತಾರೆ. ಅಲ್ಲಿಂದ ಹೊರಬಿದ್ದು ಯಾವಾಗ ಊರು ತಲುಪಿಯೇನು ಅನ್ನುವ ಆತಂಕ ಕಾಡಲಾರಂಭಿಸುತ್ತದೆ. ಮುಖ್ಯಮಂತ್ರಿಗಳನ್ನು ಕಂಡು ಅವರಿಗೆ ತನ್ನ ಕಷ್ಟ ಹೇಳಿಕೊಳ್ಳವುದು ಒಂದು ದುಸ್ವಪ್ನದಂತೆ ಅವರನ್ನು ಕಾಡಲಾಂಭಿಸುತ್ತದೆ.
ಮುಖ್ಯಮಂತ್ರಿಗಳೇ ಆಸಕ್ತಿವಹಿಸಿ ಆಸ್ಥೆಯಿಂದ ಮಹಿಳೆಯ ಯೋಗಕ್ಷೇಮ ಮತ್ತು ಅವರ ಸಮಸ್ಯೆಯ ಬಗ್ಗೆ ವಿಚಾರಿಸಿದರೆ ಮಹಿಳೆಗೆ ಬಹಳ ನೆರವಾಗುತ್ತದೆ. ಆದರೆ, ಒಂದಾದ ನಂತರ ಒಂದು ಹಗರಣಗಳು, ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಬಹುದಾದ ಆತಂಕದ ನಡುವೆ ಬಸವಾರಾಜ ಬೊಮ್ಮಾಯಿ ಅವರಿಗೆ ಯಾವುದೋ ಊರಿನಿಂದ ಬಂದ ಒಬ್ಬ ಮಹಿಳೆಯ ಬಗ್ಗೆ ಅಷ್ಟೆಲ್ಲ ಯೋಚಿಸುವ ವ್ಯವಧಾನವಿದ್ದೀತೆ?
ಇದನ್ನೂ ಓದಿ: ಅಮಿತ್ ಶಾ ದೆಹಲಿ ಹೋದ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತಾಡುತ್ತೇವೆ ಎಂದಿದ್ದಾರೆ -ಸಿಎಂ ಬಸವರಾಜ ಬೊಮ್ಮಾಯಿ