AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯನವರ ಅವಧಿಯಲ್ಲೂ ಸಾಕಷ್ಟು ಹಗರಣಗಳಾಗಿವೆ; ಛಲವಾದಿ ನಾರಾಯಣಸ್ವಾಮಿ ಟೀಕೆ

ಬಿಡಿಎ ಹಗರಣ ನಡೆದಾಗ ಜಸ್ಟೀಸ್ ಕೆಂಪಣ್ಣ ಆಯೋಗ ವರದಿ ಏನಾಯ್ತು? ಸ್ಟೀಲ್ ಬ್ರಿಡ್ಜ್ ಯಾಕೆ ವಾಪಾಸ್ ಪಡೆದಿರಿ? ಸಿದ್ದರಾಮಯ್ಯನವರ ಅವಧಿಯಲ್ಲಿ ಲೋಕೋಪಯೋಗಿ ಅಧಿಕಾರಿಗಳ ಮನೆ ಮೇಲೆ ದಾಳಿ ಆಗಿತ್ತು ಎಂದು ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.

ಸಿದ್ದರಾಮಯ್ಯನವರ ಅವಧಿಯಲ್ಲೂ ಸಾಕಷ್ಟು ಹಗರಣಗಳಾಗಿವೆ; ಛಲವಾದಿ ನಾರಾಯಣಸ್ವಾಮಿ ಟೀಕೆ
ಸಿದ್ದರಾಮಯ್ಯ
TV9 Web
| Edited By: |

Updated on:May 04, 2022 | 6:46 PM

Share

ಬೆಂಗಳೂರು: ಪಿಎಸ್​ಐ (PSI), ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಕ್ರಮ ವಿಚಾರವಾಗಿ ಸಿದ್ದರಾಮಯ್ಯನವರಿಗೆ ಮಾಹಿತಿ ಕೊರತೆ ಇದೆ ಅನ್ನಿಸುತ್ತದೆ. ಸಿದ್ದರಾಮಯ್ಯನವರು ಕೂಡ ಭ್ರಷ್ಟಾಚಾರದಲ್ಲಿ ಕಡಿಮೆಯೇನಿಲ್ಲ. ಸಿದ್ದರಾಮಯ್ಯ (Siddaramaiah) ಅವರು ಕೈಯಿಂದ ಏನೂ ಮುಟ್ಟಲ್ಲ. ಆದರೆ, ಹವಾಲ ಹಣವನ್ನು ನನ್ನ ಕೈಯಲ್ಲಿ ಮುಟ್ಟಿಸಿದರು. ನನ್ನನ್ನು ಜೈಲಿಗೆ ಹಾಕಿಸಿದರು, ಆರೋಗ್ಯ ಹದಗೆಟ್ಟಿತು. ಇಷ್ಟೆಲ್ಲ ಹಗರಣದಲ್ಲಿ ಭಾಗಿಯಾದ ಸಿದ್ದರಾಮಯ್ಯನವರು ಈಗ ಸತ್ಯ ಹರಿಶ್ಚಂದ್ರನ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಅಂಥದ್ದರಲ್ಲಿ ಬೇರೆಯವರನ್ನು ಭ್ರಷ್ಟರು ಅಂತ ಹೇಳ್ತೀರಾ ಸಿದ್ದರಾಮಯ್ಯ ಅವರೇ? ಎಂದು ಬೆಂಗಳೂರಿನಲ್ಲಿ ಬಿಜೆಪಿ ಎಸ್.ಸಿ. ಮೋರ್ಛಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.

ಸಿದ್ದರಾಮಯ್ಯನವರ ಸುದ್ದಿಗೋಷ್ಟಿಯಲ್ಲಿ ಮಾಹಿತಿಯ ಕೊರತೆಯನ್ನು ನೋಡಿದೆ. ಮೊದಲು ಹಾರಿಕೆ ಉತ್ತರ ಕೊಡುತ್ತಿದ್ದರು, ಆದರೆ, ಈಗ ಹಾಗೆ ಆಗುವುದಿಲ್ಲ. ಅನೇಕ ಸುಳ್ಳುಗಳನ್ನು ಹೇಳುತ್ತಾ ಹೋಗುತ್ತಿದ್ದರು. ಅವರು ತಡವರಿಸಿದಾಗ ಪಕ್ಕದಲ್ಲಿ ಕುಳಿತವರು ಸುಳ್ಳುಗಳನ್ನು ಹೇಳಿಕೊಡುತ್ತಿದ್ದರು. ಅಧಿಕಾರದಲ್ಲಿ ಇದ್ದವರಿಗೆ ಏನು ಮಾಡ್ತಿದ್ದೀನಿ ಅಂತ ಗೊತ್ತಿರಬೇಕು. ಬಿಡಿಎ ಹಗರಣ ನಡೆದಾಗ ಜಸ್ಟೀಸ್ ಕೆಂಪಣ್ಣ ಆಯೋಗ ವರದಿ ಏನಾಯ್ತು? ಸ್ಟೀಲ್ ಬ್ರಿಡ್ಜ್ ಯಾಕೆ ವಾಪಾಸ್ ಪಡೆದಿರಿ? ಅವರ ಅವಧಿಯಲ್ಲಿ ಲೋಕೋಪಯೋಗಿ ಅಧಿಕಾರಿಗಳ ಮನೆ ಮೇಲೆ ದಾಳಿ ಆಗಿತ್ತು. ಅಧಿಕಾರಿಗಳಾದ ಚಿಕ್ಕರಾಯಪ್ಪ ಜಾಮೀನು ತೆಗೆದುಕೊಂಡರು, ಜಯಚಂದ್ರ ಜೈಲಿಗೆ ಹೋದರು. ಇತ್ತೀಚೆಗೆ ಜಯಚಂದ್ರ ಸಿಕ್ಕಾಗ ಕಣ್ಣೀರು ಹಾಕಿದ್ದರು. ಅವರಿಂದ 750 ಕೋಟಿ‌‌ ಕಲೆಕ್ಷನ್ ಮಾಡಿಸಿಕೊಂಡಿದ್ದಾರೆ ಎಂದಿದ್ದಾರೆ.

ಸಿದ್ದರಾಮಯ್ಯನವರು ಆಗಿರುವ ಘಟನೆಗಳಿಗೆ ಉತ್ತರ ಕಂಡುಕೋಳ್ಳುವ ಕೆಲಸ ಮಾಡಿದರಾ? ಈಗ ಕಷ್ಟಪಟ್ಟು ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪಾಡೇನು? ಭ್ರಷ್ಟಾಚಾರದಿಂದಲೇ ಪರೀಕ್ಷೆ ನಡೆದಿದೆ ಎಂಬ ಆರೋಪ ಮಾಡಿದರು. ಅಂಬೇಡ್ಕರ್ ಪುಣ್ಯತಿಥಿ ದಿನ ಜಯಚಂದ್ರ ಸಾವನ್ನಪ್ಪಿದರು. ಅವರ ದರ್ಶನಕ್ಕೂ ಹೋಗದ ಇವರು ದಿನ ಬೆಳಗಾದರೆ 40% ಆರೋಪ ಮಾಡ್ತಿದ್ದಾರೆ. ಕೆಂಪಣ್ಣ ಪತ್ರ ಬರೆದರೂ ಯಾರ ಮೇಲೆ ಅಂತ ಹೇಳಿಲ್ಲ, ದಾಖಲೆಯನ್ನೂ ಬಿಡುಗಡೆ ಮಾಡಲಿಲ್ಲ ಎಂದು ಟೀಕಿಸಿದ್ದಾರೆ.

ಇದೇ ಸಿದ್ದರಾಮಯ್ಯ ಉಗ್ರಪ್ಪನವರನ್ನು ಇಟ್ಟುಕೊಂಡು ಡಿ.ಕೆ. ಶಿವಕುಮಾರ್ ಮೇಲೆ ಪಿಸು ಮಾತನಾಡಿಸಿದರು. ಅಲ್ಪಸಂಖ್ಯಾತ ಸಲೀಂ ಅವರನ್ನು ತೆಗೆದುಹಾಕಿದರು. ಸಿದ್ದರಾಮಯ್ಯ ಉಗ್ರಪ್ಪನ ಪರ ನಿಂತಿದ್ದಕ್ಕೆ, ಅವರನ್ನು ಅಧಿಕಾರ ಕೊಟ್ಟು ಮುಂದುವರೆಸಿದ್ದಾರೆ. ಸೋರಿಕೆಯಲ್ಲಿ ಅಧಿಕಾರಿಗಳನ್ನು ಅಮಾನತು ಮಾಡಬೇಕು.

ಕರ್ನಾಟಕದ ಇತರೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:33 pm, Wed, 4 May 22

Follow Us
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು