PSI ನೇಮಕಾತಿ ಅಕ್ರಮ ಕೇಸ್: ಸಿಐಡಿ ಪೊಲೀಸರಿಂದ ಕಾನ್ಸ್‌ಟೇಬಲ್ ಅರೆಸ್ಟ್, ಅಕ್ರಮವಾಗಿ ಪರೀಕ್ಷೆ ಬರೆದ ಆರೋಪಿ ಇನ್ನೂ ಬಂಧನವಿಲ್ಲ!
PSI Recruitment Scam: ರಾಜ್ಯಾದ್ಯಂತ ಬಿರುಗಾಳಿ ಎಬ್ಬಿಸಿರುವ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಎರಡು ಪ್ರಮುಖ ಬೆಳವಣಿಗೆಗಳು ನಡೆದಿವೆ.
ಬೆಂಗಳೂರು: ರಾಜ್ಯಾದ್ಯಂತ ಬಿರುಗಾಳಿ ಎಬ್ಬಿಸಿರುವ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಎರಡು ಪ್ರಮುಖ ಬೆಳವಣಿಗೆಗಳು ನಡೆದಿವೆ. ಪ್ರಕರಣದಲ್ಲಿ ಎಫ್ಐಆರ್ ದಾಖಲಾದರೂ ಅಕ್ರಮವಾಗಿ ಪರೀಕ್ಷೆ ಬರೆದ ಆರೋಪ ಹೊತ್ತಿರುವ ನಾಗೇಶ್ ಗೌಡ ಎಂಬ ಅಭ್ಯರ್ಥಿಯ ಬಂಧನವಾಗಿಲ್ಲ. ಇನ್ನು, ಇದೆ PSI ಅಕ್ರಮ ಕೇಸ್ ಸಂಬಂಧ ಮತ್ತೊಬ್ಬ ಕಾನ್ಸ್‌ಟೇಬಲ್ ನನ್ನು ಬಂಧಿಸಲಾಗಿದೆ. ಸಿಐಡಿ ಪೊಲೀಸರು (CID police) ಕಾನ್ಸ್‌ಟೇಬಲ್ ಯಶವಂತ್ ದೀಪ್ ಎಂಬಾತನನ್ನು ಅರೆಸ್ಟ್ ಮಾಡಿದ್ದಾರೆ (PSI Recruitment Scam).
ಪಿಎಸ್ಐ ತಾತ್ಕಾಲಿಕ ಪಟ್ಟಿಯಲ್ಲಿ ನಾಗೇಶ್ ಗೌಡ C S ಎಂಬಾತನ ವಿರುದ್ಧ ಅಕ್ರಮವಾಗಿ ಪರೀಕ್ಷೆ ಬರೆದ ಆರೋಪ ಕೇಳಿಬಂದಿತ್ತು. ಪಿಎಸ್ಐ ಪರೀಕ್ಷಾ ಅಕ್ರಮ ಸಂಬಂಧ ನಾಗೇಶ್ ಗೌಡ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ FIR ಆಗಿತ್ತು. ಆದರೆ FIR ದಾಖಲಾದರೂ ನಾಗೇಶ್ಗೌಡನನ್ನ ಪೊಲೀಸರು ಇದುವರೆಗೂ ಬಂಧಿಸಿಲ್ಲ.
ಸಿಐಡಿ ತನಿಖಾ ಅಧಿಕಾರಿ ಬಿ ಕೆ ಶೇಖರ್ ನೇತೃತ್ವದ ತಂಡದಿಂದ ನಡೆದ ವಿಚಾರಣೆಯಲ್ಲಿ ನಾಗೇಶ್ ಗೌಡ ಅಕ್ರಮವೆಸಗಿರುವುದು ಪತ್ತೆಯಾಗಿತ್ತು. ನಾಗೇಶ್ ಗೌಡ ಪೇಪರ್ ನಂಬರ್ 1 ನಲ್ಲಿ 29.5 ಅಂಕ, ನಾಗೇಶ್ ಗೌಡ ಫೇಪರ್ ನಂಬರ್ 2 ನಲ್ಲಿ 131 ಅಂಕ ಮತ್ತು ಒಟ್ಟಾರೆಯಾಗಿ ನಾಗೇಶ್ ಗೌಡ 161.125 ಅಂಕ ಪಡೆದಿದ್ದಾನೆ. ಜೊತೆಗೆ ನಾಗೇಶ್ ಗೌಡ ಜನರಲ್ ಕ್ಯಾಟಗಿರಿನಲ್ಲಿ ಆಯ್ಕೆ ಆಗಿದ್ದಾನೆ.
ಇನ್ನು PSI ಅಕ್ರಮ ಕೇಸ್ ಸಂಬಂಧ ಸಿಐಡಿಯಿಂದ ಕಾನ್ಸ್‌ಟೇಬಲ್ ಯಶವಂತ್ ದೀಪ್ ಬಂಧನವಾಗಿದೆ. ಬಂಧಿತ ಯಶವಂತ್ ವಿವಿಐಪಿ ಭದ್ರತಾ ವಿಭಾಗದ ಕಾನ್ಸ್‌ಟೇಬಲ್. ಯಶವಂತ್ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ FIR ದಾಖಲಾಗಿತ್ತು. ಯಶವಂತ್ ಸೇರಿ 22 ಅಭ್ಯರ್ಥಿಗಳ ವಿರುದ್ಧ FIR ದಾಖಲಾಗಿದೆ.
ಸದ್ಯ ಸಿಐಡಿಯಲ್ಲಿ ಸಿಕ್ಕಿ ಬಿದ್ದಿರೊ ಅಭ್ಯರ್ಥಿಗಳ ಹೆಸರುಗಳು ಹೀಗಿವೆ:
1) ಜಾಗೃತ್ ಎಸ್. ರೋಲ್ ನ.9252135, 2) ಗಜೇಂದ್ರ ಬಿ, ರೂಲ್ ನಂ.9252062, 3) ಸೋಮನಾಥ್ ಮಲಿಕಾರ್ಜುನಯ, ರೋಲ್ ನಂ.9252119, 4) ರಘುವೀರ್ ಹೆಚ್ ಯು ರೋಲ್ ನಂ.9245950, 5) ಚಿತನ್ ಕುಮಾರ್ ಎಂ ಸಿ ರೋಲ್ ನಂ 9246411, 6) ವೆಂಕಟೇಶ್ ಗೌಡ ಬಿ.ಸಿ ರೋಲ್ 9246290, 7) ಮನೋಜ್ ಎಪಿ ರೋಲ್ ನಂಬರ್ 9245895, 8) ಮನುಕುಮಾರ್ ಜಿ ಆರ್ ರೋಲ್ ನಂಬರ್ 9246469, 9) ಸಿದ್ದಲಿಂಗಪ್ಪ ಪದಶವಾಗಿ , ರೋಲ್ ನಂ:9246519, 10) ಮಮತೇಸ್ ಗೌಡ ಎಸ್, ರೋಲ್ ನಂ 9246311, 11) ಯಶವಂತಗೌಡ ಹೆಚ್ ರೋಲ್ ನಂ.9244198, 12) ನಾರಾಯಣ ಎಂ ಸಿ ರೋಲ್ ನಂ 9244622, 13) ನಾಗೇಶ್ ಗೌಡ ಸಿ ಎಸ್. ರೋಲ್ ನಂ 9244728, 14) ಮಧು ಆರ್, ರೋಲ್ ನಂಬರ್ .9245556, 15) ಯಶವಂತ್ ದೀಪ್ ಸಿ ರೋಲ್ ನಂ 9245293, 16) ದೀಲಿಪ್ ಕುಮಾರ್ ಸಿ ಕೆ 9245508 17) ರಚನಾ ಹನಮಂತ್ ರೋಲ್ ನಂ 9242741, 18) ಶಿವರಾಜ ಜಿ , ರೋಲ್ ನಂ 9246834, 19) ಪ್ರವೀಣ್ ಕುಮಾರ್ ಹೆಚ್ ಆರ್ ರೋಲ್ 9247144, 20) ಸೂರ್ಯನಾರಾಯಣ ಕೆ ರೋಲ್ ನಂ 9247225 21) ನಾಗರಾಜ ಸಿ ಎಂ. ರೋಲ್ ನಂ 9253817 22) ರಾಘವೇಂದ್ರ ಜಿ ಸಿ ರೋಲ್ ನಂ 9253524
ಪ್ರಸ್ತುತ 1)ರಘುವೀರ್ ಹೆಚ್ ಯು 2)ಚೇತನ್ ಕುಮಾರ್.ಎಂ ಸಿ . 3)ವೆಂಕಟೇಶ್ ಗೌಡ ಸಿ, 4) ಮಮತೇಸ್ ಗೌಡ 5) ಮಧು ಆರ್ 6)ದಿಲೀಪ್ ಕುಮಾರ್ ಸಿಕೆ, 7)ಪ್ರವೀಣ್ ಕುಮಾರ್ ಹೆಚ್‌ಆರ್, 8)ಸೂರ್ಯನಾರಾಯಣ, 9) ನಾಗರಾಜ ಸಿ ಎಂ, 10) ಗಜೇಂದ್ರ 11) ಯಶವಂತ್ ದೀಪ್ ಸೇರಿ ಒಟ್ಟು 12 ಜನರನ್ನು ಈಗಾಗಲೇ ಅರೆಸ್ಟ್ ಮಾಡಿರೊ ಪೊಲೀಸರು. ಇನ್ನೂ ಸುಮಾರು 10 ಜನರು ಅರೆಸ್ಟ್ ಆಗಬೇಕಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:50 pm, Wed, 4 May 22