ಪಿಎಸ್ಐ ಅಕ್ರಮದಲ್ಲಿ ಕಿಲಾಡಿ ಜೋಡಿಗಳ ಕಮಾಲ್; ಅಮೃತ್ ಪೌಲ್, ಶಾಂತಕುಮಾರ್ ವಿರುದ್ಧ ಆರೋಪಗಳ ಸುರಿಮಳೆ

ಪಿಎಸ್‌ಐ ನೇಮಕಾತಿಯಲ್ಲಿ ಕಿಲಾಡಿ ಜೋಡಿಗಳಾಗಿರುವ ಅಮೃತ್ ಪೌಲ್ ಮತ್ತು ಶಾಂತಕುಮಾರ್ ಕೋಟಿ ಕೋಟಿ ಹಣ ಪಡೆದು ಅಕ್ರಮದಲ್ಲಿ ನೇರವಾಗಿ ಭಾಗಿಯಾಗಿರುವ ಆರೋಪ ಕೇಳಿ ಬಂದಿದೆ. ಈ ಹಿಂದೆಯು ನೇಮಕಾತಿಯಲ್ಲಿ ಅಕ್ರಮವೆಸಗಿರುವ ಬಗ್ಗೆ ಇದೇ ಜೋಡಿ ಭಾಗಿಯಾಗಿರುವ ಆರೋಪ ಕೇಳಿ ಬಂದಿದೆ.

ಪಿಎಸ್ಐ ಅಕ್ರಮದಲ್ಲಿ ಕಿಲಾಡಿ ಜೋಡಿಗಳ ಕಮಾಲ್; ಅಮೃತ್ ಪೌಲ್, ಶಾಂತಕುಮಾರ್ ವಿರುದ್ಧ ಆರೋಪಗಳ ಸುರಿಮಳೆ
ಐಪಿಎಸ್ ಅಧಿಕಾರಿ ಅಮೃತ್ ಪೌಲ್
Follow us
TV9 Web
| Updated By: ಆಯೇಷಾ ಬಾನು

Updated on:May 04, 2022 | 1:43 PM

ಬೆಂಗಳೂರು: ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ(PSI Recruitment Scam) ವಿಚಾರಕ್ಕೆ ಸಂಬಂಧಿಸಿ ಪಿಎಸ್‌ಐ ನೇಮಕಾತಿಯ ಅಕ್ರಮದ ಹಿಂದೆ ಕಿಲಾಡಿ ಜೋಡಿಗಳ ಕೈವಾಡ ವಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಪಿಎಸ್‌ಐ ನೇಮಕಾತಿಯಲ್ಲಿ ಕಿಲಾಡಿ ಜೋಡಿಗಳಾಗಿರುವ ಅಮೃತ್ ಪೌಲ್ ಮತ್ತು ಶಾಂತಕುಮಾರ್ ಕೋಟಿ ಕೋಟಿ ಹಣ ಪಡೆದು ಅಕ್ರಮದಲ್ಲಿ ನೇರವಾಗಿ ಭಾಗಿಯಾಗಿರುವ ಆರೋಪ ಕೇಳಿ ಬಂದಿದೆ. ಈ ಹಿಂದೆಯು ನೇಮಕಾತಿಯಲ್ಲಿ ಅಕ್ರಮವೆಸಗಿರುವ ಬಗ್ಗೆ ಇದೇ ಜೋಡಿ ಭಾಗಿಯಾಗಿರುವ ಆರೋಪ ಕೇಳಿ ಬಂದಿದೆ. ಇದರಿಂದ ಕೋಟಿ ಕೋಟಿ ಹಣ ಗಳಿಸಿರುವ ಆರೋಪ ಕೇಳಿಬಂದಿದೆ. ಡಿವೈಎಸ್‌ಪಿ ಶಾಂತಿಕುಮಾರ್, ಮಧ್ಯವರ್ತಿಗಳ ಮೂಲಕ ಅಭ್ಯರ್ಥಿಗಳ ಭೇಟಿ ಮಾಡುತ್ತಿದ್ದರು. ಅಭ್ಯರ್ಥಿಗಳೊಂದಿಗೆ ಡೀಲ್ ಮಾಡಿಕೊಳ್ಳುತ್ತಿದ್ದರು. ಬಳಿಕ ರೇಟ್ ಫಿಕ್ಸ್ ಮಾಡುತ್ತಿದ್ದರು.

ಇನ್ನು ಬೆಂಗಳೂರಿನ ಸಿಐಡಿ ಕಚೇರಿಗೆ ಹಿರಿಯ ವಕೀಲ ರಂಗನಾಥ್ ಭೇಟಿ ನೀಡಿದ್ದು ಕೆಳಮಟ್ಟದಲ್ಲಿ ಅಕ್ರಮ ಎಸಗಿದವರನ್ನು ಮಾತ್ರ ವಿಚಾರಣೆ ನಡೆಸಲಾಗ್ತಿದೆ. ಪ್ರಕರಣದಲ್ಲಿ ಪ್ರಭಾವಿಗಳು, ಉನ್ನತ ಅಧಿಕಾರಿಗಳು ಭಾಗಿಯಾಗಿರುವ ಆರೋಪವಿದೆ. ಸಚಿವ ಅಶ್ವತ್ಥ್ ನಾರಾಯಣ ಸಹೋದರನ ವಿರುದ್ಧ ಆರೋಪ ಕೇಳಿ ಬಂದಿದೆ. ರಾಜ್ಯ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಡಿಜಿ & ಐಜಿಪಿ‌ ಪ್ರವೀಣ್ ಸೂದ್, ಎಡಿಜಿಪಿ ಅಮೃತ್ ಪಾಲ್, ಸಿಐಡಿ SP ರವಿ.ಡಿ ಚನ್ನಣ್ಣನವರ್ ಸೇರಿ ಹಲವರ ವಿರುದ್ಧ ಆರೋಪ ಕೇಳಿ ಬಂದಿದೆ. ಪ್ರಭಾವಿಗಳು, ಉನ್ನತಮಟ್ಟದವರಿಗೆ ಯಾವುದೇ ನೋಟಿಸ್ ನೀಡಿಲ್ಲ. ಉನ್ನತಮಟ್ಟದವರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲು ಸಿಐಡಿ ಡಿಜಿಪಿಗೆ ಹಿರಿಯ ವಕೀಲ ರಂಗನಾಥ್ ನೇತೃತ್ವದ ತಂಡ ಮನವಿ ಮಾಡಿದೆ. ಅಲ್ಲದೆ ಪಿಎಸ್​ಐ ಅಭ್ಯರ್ಥಿಗಳಿಂದ 50 ರಿಂದ 70 ಲಕ್ಷ ಹಣ ಪಡೆದಿದ್ದಾರೆ. ಸುಮಾರು 63 ಅಭ್ಯರ್ಥಿಗಳಿಂದ ಬ್ರೋಕರ್ ಮೂಲಕ ಹಣ ಪಡೆದಿದ್ದಾರೆ ಎಂದು ಮಾಜಿ ಸಿಎಂ ಪುತ್ರನ ವಿರುದ್ಧ ವಕೀಲ ರಂಗನಾಥ್ ಆರೋಪ ಮಾಡಿದ್ದು ಮಾಜಿ ಸಿಎಂ ಪುತ್ರನಿಗೆ ನೋಟಿಸ್ ನೀಡಿ ತನಿಖೆ ಮಾಡುಬೇಕು ಎಂದು ADGP-CIDಗೆ ದೂರು ನೀಡಿದ್ದಾರೆ.

ಪಿಎಸ್​ಐ ಅಕ್ರಮದ ಬಗ್ಗೆ ಇನ್ನಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಈ ಅಕ್ರಮದಲ್ಲಿ ಮತ್ತಷ್ಟು ಸಬ್ ಇನ್ಸಪೆಕ್ಟರ್ಗಳು ಹೆಸರು ಬರೋ ಸಾಧ್ಯತೆ ಇದೆ. KSIFS ಸಬ್ ಇನ್ಸಪೆಕ್ಟರ್ ಗಳ ಮೇಲೆ ಸಿಐಡಿ ಕಣ್ಣಿಟ್ಟಿದೆ. ನಿನ್ನೆ ಕಲಬುರಗಿಯ ನಾಗನಹಳ್ಳಿ ತರಬೇತಿ ಕೇಂದ್ರದಿಂದ ಯಶವಂತಗೌಡನನ್ನ ಸಿಐಡಿ ವಶಕ್ಕೆ‌ ಪಡೆದಿತ್ತು. ಯಶವಂತಗೌಡನನ್ನ ವಶಕ್ಕೆ ಪಡೆದು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದರು. ಈ ಹಿಂದೆ ಆಯ್ಕೆಯಾಗಿ ನಾಗನಹಳ್ಳಿ ತರಬೇತಿ ಕೇಂದ್ರದಲ್ಲಿ ಟ್ರೈನಿಂಗ್ ಪಡೆಯುತ್ತಿರೋ ಕೆಲ KSIFS ಸಬ್ ಇನ್ಸಪೆಕ್ಟರ್ಗಳು, ಸಿವಿಲ್ ಪಿಎಸ್ಐ ಎಕ್ಸಾಮ್ ನಲ್ಲಿ ಕೂಡಾ ಪಾಸ್ ಆಗಿರೋ ಅಭ್ಯರ್ಥಿಗಳು ಸೇರಿದಂತೆ ಅನೇಕರ ವಿಚಾರಣೆ ನಡೆಸಲಾಗುತ್ತಿದೆ.

RSS ಶಾಖೆಯವರನ್ನು PSI ಮಾಡುವ ಅನುಮಾನ ಮೂಡಿದೆ ಸಹಾಯಕ ಪ್ರಾಧ್ಯಾಪಕ, PSI ನೇಮಕಾತಿ ಅಕ್ರಮ ಪ್ರಕರಣ ಸಂಬಂಧ RSS ಶಾಖೆಯವರನ್ನು PSI ಮಾಡುವ ಅನುಮಾನ ಮೂಡಿದೆ ಎಂದು ಸರ್ಕಾರದ ವಿರುದ್ಧ ಹಿರಿಯ ವಕೀಲ ಬಾಲನ್ ಆರೋಪ ಮಾಡಿದ್ದಾರೆ. ಖಾಸಗಿ ಕೇಂದ್ರಗಳಲ್ಲಿ ಪರೀಕ್ಷೆ ಹೇಗೆ ನಡೆಸಿದರು? OMR ಶೀಟ್ ಹೇಗೆ​ ಬದಲಾವಣೆ ಆಯ್ತು? ಬ್ಲೂ ಟೂತ್ ಹೇಗೆ ಬಂತು ಎಂದು ವಕೀಲ ಬಾಲನ್ ಪ್ರಶ್ನೆ ಮಾಡಿದ್ದಾರೆ. ಗೃಹ ಮಂತ್ರಿ ಮೇಲೆ ಮೊದಲು ಎಫ್​ಐಆರ್ ಹಾಕಬೇಕು. ಇದೊಂದು ಡೋಂಗಿ ಸರ್ಕಾರ, ಇದು ದೇಶದ್ರೋಹ. ಬುಲ್ಡೋಜರ್ ಮಾದರಿ ಜಾರಿ ಮಾಡುತ್ತೇವೆ ಅಂತಾರೆ. ಹಾಗಾದರೆ ಗೃಹ ಮಂತ್ರಿ, ಎಡಿಜಿಪಿ​ ಪಾಲ್ ಮನೆಗೆ ಬುಲ್ಡೋಜರ್ ಕಳಿಸ್ತೀರಾ? ಹೈಕೋರ್ಟ್ ಜಡ್ಜ್​​ ನೇತೃತ್ವದಲ್ಲಿ ಎಸ್​ಐಟಿ ರಚಿಸಿ ತನಿಖೆ ನಡೆಸಿ ಎಂದು ಬೆಂಗಳೂರಲ್ಲಿ ಸರ್ಕಾರಕ್ಕೆ ವಕೀಲ ಬಾಲನ್ ಆಗ್ರಹಿಸಿದ್ದಾರೆ.

Published On - 1:05 pm, Wed, 4 May 22

ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್