Avatara Purusha Review: ಅವತಾರ ಪುರುಷನ ಹಲವು ಅವತಾರ, ನಿಜವಾದದ್ದು ಯಾವುದು?

ಸಿಂಪಲ್​ ಸುನಿ ನಿರ್ದೇಶನ ಹಾಗೂ ಶರಣ್​ ನಟನೆ ಎಂದರೆ ಅಲ್ಲಿ ಕಾಮಿಡಿ ಇದ್ದೇ ಇರುತ್ತದೆ. ಈ ಬಾರಿ ಇವರ ಕಾಂಬಿನೇಷನ್​ನಲ್ಲಿ ‘ಅವತಾರ ಪುರುಷ’ ಸಿನಿಮಾ ಮೂಡಿ ಬಂದಿದೆ. ಈ ಚಿತ್ರ ಹೇಗಿದೆ ಎಂಬುದರ ವಿಮರ್ಶೆ ಇಲ್ಲಿದೆ.

Avatara Purusha Review: ಅವತಾರ ಪುರುಷನ ಹಲವು ಅವತಾರ, ನಿಜವಾದದ್ದು ಯಾವುದು?
ಆಶಿಕಾ-ಶರಣ್
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: May 06, 2022 | 11:57 AM

ಸಿನಿಮಾ: ಅವತಾರ ಪುರುಷ

ಪಾತ್ರವರ್ಗ: ಶರಣ್, ಆಶಿಕಾ ರಂಗನಾಥ್​, ಸಾಯಿ ಕುಮಾರ್, ಭವ್ಯ ಮೊದಲಾದವರು

ನಿರ್ದೇಶನ: ಸಿಂಪಲ್ ಸುನಿ

ಇದನ್ನೂ ಓದಿ
Image
‘ಅವತಾರ ಪುರುಷ’ ಸಿನಿಮಾ ಕಥೆ ಹುಟ್ಟಿದ್ದು ಹೇಗೆ?; ಎಲ್ಲವನ್ನೂ ವಿವರಿಸಿದ ಸುನಿ
Image
‘ಅವತಾರ ಪುರುಷ’ ಬೇರೆ ಭಾಷೆಗೆ ಯಾಕೆ ಡಬ್​ ಆಗಿಲ್ಲ? ಪ್ಯಾನ್​ ಇಂಡಿಯಾ ಪ್ಲಾನ್​ ಬಗ್ಗೆ ಸುನಿ ಹೇಳೋದಿಷ್ಟು..
Image
‘ಅವತಾರ ಪುರುಷ’ ಚಿತ್ರದ ಓವರ್ ಆ್ಯಕ್ಟಿಂಗ್ ಅನಿಲ ಪಾತ್ರ ಹುಟ್ಟಿದ್ದು ಹೀಗೆ
Image
‘ಅವತಾರ ಪುರುಷ’ ಪ್ರಚಾರಕ್ಕೆ ಬಳಕೆ ಆಗ್ತಿದೆ ‘ಆರ್​ಸಿಬಿ’ ಮ್ಯಾಚ್​; ಸಿಂಪಲ್ ಸುನಿಯ ಹೊಸ ಐಡಿಯಾ

ನಿರ್ಮಾಣ: ಪುಷ್ಕರ್ ಫಿಲ್ಮ್ಸ್​

ಸ್ಟಾರ್​: 3/5

ಕಥಾ ನಾಯಕ ಅನಿಲ್ (ಶರಣ್​) ಯಾರದ್ದಾದರೂ ಸಾವಾದರೆ ಹೆಣಕ್ಕೆ ಹೆಗಲು ಬೇಕಾದರೂ ಕೊಡ್ತಾನೆ, ಮದುವೆ ಆದರೆ ಅಲ್ಲಿ ಅಕ್ಷತೆ ಕಾಳು ಹಾಕಿ ಹಾರೈಸ್ತಾನೆ. ಏಕೆಂದರೆ, ಆತ ಓರ್ವ ಜ್ಯೂನಿಯರ್​ ಆರ್ಟಿಸ್ಟ್. ದೊಡ್ಡ ಹೀರೋ ಆಗಬೇಕು ಎಂಬುದು ಆತನ ಕನಸು. ಆದರೆ, ಅವನಿಗೆ ಸಿಗೋದೆಲ್ಲ ಚಿಕ್ಕ-ಪುಟ್ಟ ಪಾತ್ರಗಳು. ಹೀಗಿರುವಾಗಲೇ ಆತ ಒಂದು ಆಡಿಷನ್​ಗೆ ಹೋಗುತ್ತಾನೆ. ಹಾಗಂತ ಇದು ಸಿನಿಮಾ ಆಡಿಷನ್​ ಅಲ್ಲ. ರಿಯಲ್​ ಲೈಫ್​ನಲ್ಲಿ ಒಂದು ತಾಯಿಗೆ ಮಗನಾಗಿ ನಟಿಸಬೇಕು. ಈ ಆಡಿಷನ್​ ಮಾಡೋದು ಸಿರಿ (ಆಶಿಕಾ ರಂಗನಾಥ್​). ಆ ಬಳಿಕ ಸಿನಿಮಾ ಕಥೆ ಸಿರಿಯ ಅಜ್ಜನ ಮನೆಯಲ್ಲೇ ಸಾಗುತ್ತದೆ. ಮತ್ತೊಂದು ಟ್ರ್ಯಾಕ್​ನಲ್ಲಿ ಸಾಗುವ ತಂತ್ರ ಮಂತ್ರಗಳ ಕಥೆಗೂ ಸಿರಿಯ ಅಜ್ಜನ ಮನೆಯ ಮೇಲೆ ಕಣ್ಣು. ಅಷ್ಟಕ್ಕೂ ಅನಿಲ್​ ಈ ಮನೆಗೆ ಬಂದಿದ್ದು ಕಾಕತಾಳಿಯವೋ ಅಥವಾ ಇದರ ಹಿಂದೆ ಉದ್ದೇಶ ಇತ್ತೋ? ಅವನ ನಿಜವಾದ ಮುಖ ಯಾವುದು? ಈ ಎಲ್ಲ ಪ್ರಶ್ನೆಗಳಿಗೆ ಸಿನಿಮಾದಲ್ಲಿ ಉತ್ತರ ಸಿಗಲಿದೆ.

ಸಿಂಪಲ್​ ಸುನಿ ಸಿನಿಮಾದಲ್ಲಿ ಕಾಮಿಡಿಗೆ ಹೆಚ್ಚು ಆದ್ಯತೆ. ಈ ಸಿನಿಮಾದಲ್ಲೂ ಅದು ಮುಂದುವರಿದಿದೆ. ಮೊದಲಾರ್ಧ ಅನೇಕ ದೃಶ್ಯಗಳು ನಗಿಸುತ್ತ ಸಾಗುತ್ತವೆ. ದ್ವಿತಿಯಾರ್ಧ ಕೊಂಚ ಗಂಭೀರತೆ ಪಡೆದುಕೊಳ್ಳುತ್ತದೆ. ಪಂಚಿಂಗ್​ ಡೈಲಾಗ್​ಗಳು ಸಿನಿಮಾದ ತೂಕವನ್ನು ಹೆಚ್ಚಿಸಿದೆ. ಈ ಸಿನಿಮಾದಲ್ಲಿ ಮಾಟ ಮಂತ್ರ, ತ್ರಿಶಂಕು ಲೋಕದ ವಿಚಾರಗಳನ್ನು ಸುನಿ ಹೇಳಿದ್ದು, ಇದಕ್ಕಾಗಿ ಅವರು ಸಾಕಷ್ಟು ಅಧ್ಯಯನ ನಡೆಸಿದ್ದು ವೀಕ್ಷಕರಿಗೆ ಸ್ಪಷ್ಟವಾಗುತ್ತದೆ. ತಂತ್ರ-ಮಂತ್ರ ಹಾಗೂ ಹಾಸ್ಯವನ್ನು ಹದವಾಗಿ ಬೆರೆಸಿ ಪ್ರೇಕ್ಷಕರಿಗೆ ಉಣಬಡಿಸಿದ್ದಾರೆ ನಿರ್ದೇಶಕರು. ತಂತ್ರ-ಮಂತ್ರಗಳ ವಿಚಾರವನ್ನು ಹೇಳಿರುವುದರಿಂದ ಆ ಪ್ರಕಾರದ ಸಿನಿಮಾವನ್ನು ಇಷ್ಟಪಡುವ ಪ್ರೇಕ್ಷಕರಿಗೆ ‘ಅವತಾರ ಪುರುಷ’ ಹೆಚ್ಚು ಆಪ್ತವಾಗಲಿದೆ.

ಶರಣ್​ ಅವರು ಜ್ಯೂನಿಯರ್ ಆರ್ಟಿಸ್ಟ್​ ಆಗಿ ಒದ್ದಾಡುವ ಅನಿಲನಾಗಿ ಮಿಂಚಿದ್ದಾರೆ. ಅವರ ಕಾಮಿಡಿ ಪಂಚ್​ ಸಖತ್​ ಆಗಿದೆ. ಅಮ್ಮನ ಜತೆಗಿನ ಸೆಂಟಿಮೆಂಟ್​ ದೃಶ್ಯಗಳಲ್ಲಿ ಉತ್ತಮ ನಟನೆ ತೋರಿದ್ದಾರೆ. ಮಗನಿಗಾಗಿ ಪರಿತಪಿಸುವ ಪಾತ್ರದಲ್ಲಿ ಭವ್ಯ ಮಿಂಚಿದ್ದಾರೆ. ಹಳ್ಳಿ ಔಷಧಿ ಕೊಡುವ ಗಂಭೀರ ವ್ಯಕ್ತಿಯಾಗಿ ಸಾಯಿ ಕುಮಾರ್ ನಟನೆ ಹೆಚ್ಚು ಅಂಕ ಗಿಟ್ಟಿಸಿಕೊಳ್ಳುತ್ತದೆ. ನಟಿ ಆಶಿಕಾ ರಂಗನಾಥ್​ ಹೆಚ್ಚು ಗ್ಲಾಮರಸ್​ ಆಗಿ ಕಾಣಿಸಿಕೊಳ್ಳದೆ ಸಿಂಪಲ್​ ಲುಕ್​ನಲ್ಲಿ ಇಷ್ಟವಾಗುತ್ತಾರೆ. ಹಿನ್ನುಡಿ ಪಾತ್ರದಲ್ಲಿ ಬಾಲಾಜಿ ಮನೋಜರ್​ ಭಯ ಹುಟ್ಟಿಸುತ್ತಾರೆ. ಕೊನೆಯಲ್ಲಿ ಬರುವ ಶ್ರೀನಗರ ಕಿಟ್ಟಿ ಪಾತ್ರ ಗಮನ ಸೆಳೆಯುತ್ತದೆ.

ಸಿನಿಮಾದಲ್ಲಿ ಹಾಸ್ಯಕ್ಕೆ ಹೆಚ್ಚು ಆದ್ಯತೆ ಕೊಡಲಾಗಿದೆ. ಈ ಕಾರಣಕ್ಕೆ ಸಾಧು ಕೋಕಿಲ ಅವರ ಟ್ರ್ಯಾಕ್​ ಒಂದನ್ನು ಸೇರಿಸಲಾಗಿದೆ. ಇದು ಹಾಸ್ಯಕ್ಕೆ ಮಾತ್ರ ಸೀಮಿತವಾಗಿದ್ದು, ಚಿತ್ರದ ಕಥೆಗೆ ಪೂರಕವಾಗಿಲ್ಲ. ಈ ಚಿತ್ರದಲ್ಲಿ ಲವ್​ ವಿಚಾರಕ್ಕೆ ನಿರ್ದೇಶಕರು ಹೆಚ್ಚು ಒತ್ತು ನೀಡಿಲ್ಲ. ಕೊನೆಯಲ್ಲಿ ಹೇಳುವ ಮಾಟದ ವಿಚಾರ ಪ್ರೇಕ್ಷಕನಿಗೆ ಕೊಂಚ ಗೊಂದಲ ಮೂಡಿಸಬಹುದು. ಆ ಬಗ್ಗೆ ನಿರ್ದೇಶಕರು ಕೊಂಚ ಗಮನ ಹರಿಸಬೇಕಿತ್ತು. ಜಾಹೀರಾತುಗಳನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡು ಮಾಡಿದ ‘ಲಡ್ಡು ಬಂದು ಬಾಯಿಗ್ ಬಿತ್ತಾ..’ ಹಾಗೂ ಉತ್ತರ ಕರ್ನಾಟಕದ ‘ಹೀರೋ ಹೊಂಡಾ..’ ಹಾಡು ಗಮನ ಸೆಳೆಯುತ್ತದೆ. ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕೆ ಚೆನ್ನಾಗಿ ಒಪ್ಪಿದೆ. ಹಿನ್ನೆಲೆ ಸಂಗೀತದಲ್ಲೂ ಅರ್ಜುನ್​ ಜನ್ಯ ಗಮನ ಸೆಳೆಯುತ್ತಾರೆ. ‘ಅವತಾರ ಪುರುಷ 2’ ಕೂಡ ಬರುತ್ತಿದೆ. ಈ ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ಎರಡನೇ ಚಾಪ್ಟರ್​ಗೆ ಕನೆಕ್ಷನ್ ನೀಡಲಾಗಿದೆ.

ಕೇವಲ ಟ್ರೆಂಡ್​ ಫಾಲೋ ಮಾಡುವ ಸಲುವಾಗಿ ಸುನಿ ಅವರು ಒಂದೇ ಕಥೆಯನ್ನು ಎರಡು ಪಾರ್ಟ್​ನಲ್ಲಿ ಹೇಳಲು ನಿರ್ಧರಿಸಿದರಾ ಎಂಬ ಪ್ರಶ್ನೆ ಮೂಡುತ್ತದೆ. ಕೆಲವು ದೃಶ್ಯಗಳು ಜಾಳು ಜಾಳಾಗಿವೆ. ಅವುಗಳಿಗೆಲ್ಲ ಕತ್ತರಿ ಹಾಕಿ, ಒಂದೇ ಸಿನಿಮಾದಲ್ಲಿ ಪೂರ್ತಿ ಕಥೆ ಹೇಳಬಹುದಿತ್ತೇನೋ ಎನಿಸುತ್ತದೆ. ಪಾರ್ಟ್​ 2 ನೋಡಿದ ಬಳಿಕವಷ್ಟೇ ಪ್ರೇಕ್ಷಕರಿಗೆ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಬೇಕಿದೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ