AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೂಜಾ ಹೆಗ್ಡೆ-ನಾಗ ಚೈತನ್ಯ ಜೋಡಿ ಮಾಡಲು ನಡೆದಿದೆ ತಯಾರಿ? ಗುಟ್ಟು ಬಿಟ್ಟುಕೊಡುವುದೊಂದೇ ಬಾಕಿ

ದಕ್ಷಿಣ ಭಾರತದಲ್ಲಿ ನಟಿ ಪೂಜಾ ಹೆಗ್ಡೆ ಅವರು ಸಖತ್​ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಹಾಗೆಯೇ ನಾಗ ಚೈತನ್ಯ ಅವರ ಮುಂದಿನ ಸಿನಿಮಾ ಬಗ್ಗೆ ಕೌತುಕ ಹೆಚ್ಚಿದೆ.

ಪೂಜಾ ಹೆಗ್ಡೆ-ನಾಗ ಚೈತನ್ಯ ಜೋಡಿ ಮಾಡಲು ನಡೆದಿದೆ ತಯಾರಿ? ಗುಟ್ಟು ಬಿಟ್ಟುಕೊಡುವುದೊಂದೇ ಬಾಕಿ
ನಾಗ ಚೈತನ್ಯ, ಪೂಜಾ ಹೆಗ್ಡೆ
TV9 Web
| Updated By: ಮದನ್​ ಕುಮಾರ್​|

Updated on: Feb 18, 2022 | 9:28 AM

Share

ನಟ ನಾಗ ಚೈತನ್ಯ (Naga Chaitanya) ಅವರು ಇತ್ತೀಚಿನ ದಿನಗಳಲ್ಲಿ ಹಲವು ಕಾರಣಕ್ಕಾಗಿ ಸುದ್ದಿ ಆಗುತ್ತಿದ್ದಾರೆ. ವೃತ್ತಿಜೀವನದಲ್ಲಿ ಅವರಿಗೆ ಬ್ಯಾಕ್​ ಟು ಬ್ಯಾಕ್​ ಯಶಸ್ಸು ಸಿಗುತ್ತಿದೆ. ಸಾಯಿ ಪಲ್ಲವಿ ಜೊತೆ ನಟಿಸಿದ ‘ಲವ್​ ಸ್ಟೋರಿ’ ಚಿತ್ರ, ತಂದೆ ನಾಗಾರ್ಜುನ ಜೊತೆ ಅಭಿನಯಿಸಿದ ‘ಬಂಗಾರ‍್ರಾಜು’ ಸಿನಿಮಾಗಳು ನಾಗ ಚೈತನ್ಯ ಅವರಿಗೆ ಯಶಸ್ಸು ತಂದುಕೊಟ್ಟಿವೆ. ಈಗ ಅವರು ‘ಥ್ಯಾಂಕ್ಯೂ’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇದಿಷ್ಟು ಸಿನಿಮಾ ವಿಷಯಗಳಾದರೆ, ಅವರ ಖಾಸಗಿ ಬದುಕಿನ ಒಂದಷ್ಟು ವಿಚಾರಗಳು ಸಹ ಆಗಾಗ ಸುದ್ದಿ ಆಗುತ್ತಿವೆ. ಸಮಂತಾ (Samantha) ಜೊತೆಗಿನ ದಾಂಪತ್ಯಕ್ಕೆ ಅವರು ಕಳೆದ ವರ್ಷ ಅಂತ್ಯ ಹಾಡಿದರು. ಆದರೆ ಅದಕ್ಕೆ ಕಾರಣ ಏನೆಂಬುದನ್ನು ಈವರೆಗೂ ವಿವರಿಸಿಲ್ಲ. ಸಂಸಾರದ ಈ ಏಳು-ಬೀಳಿನ ಬಗ್ಗೆ ಹೆಚ್ಚು ಗಮನ ನೀಡದ ಅವರು ಈಗ ಬ್ಯಾಕ್​ ಟು ಬ್ಯಾಕ್ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ನಾಗ ಚೈತನ್ಯ ನಟಿಸಲಿರುವ ಹೊಸ ಚಿತ್ರಕ್ಕೆ ಪೂಜಾ ಹೆಗ್ಡೆ (Pooja Hegde) ನಾಯಕಿ ಆಗಲಿದ್ದಾರೆ ಎಂಬ ಸದ್ದಿ ಕೇಳಿಬಂದಿದೆ. ಇವರಿಬ್ಬರನ್ನು ಜೋಡಿಯಾಗಿಸಲು ತೆರೆಮರೆಯಲ್ಲಿ ಪ್ರಯತ್ನಗಳು ನಡೆಯುತ್ತಿವೆ.

ನಾಗ ಚೈತನ್ಯ ಅವರು ತೆಲುಗು ಮತ್ತು ತಮಿಳಿನಲ್ಲಿ ಒಂದು ಹೊಸ ಸಿನಿಮಾ ಮಾಡಲಿದ್ದಾರೆ. ಆ ಚಿತ್ರಕ್ಕೆ ಕಾಲಿವುಡ್​ನ ಖ್ಯಾತ ನಿರ್ದೇಶಕ ವೆಂಕಟ್​ ಪ್ರಭು ಆ್ಯಕ್ಷನ್​-ಕಟ್​ ಹೇಳಲಿದ್ದಾರೆ. ಇದು ವೆಂಕಟ್​ ಪ್ರಭು ಅವರಿಗೆ ತೆಲುಗಿನಲ್ಲಿ ಮೊದಲ ಸಿನಿಮಾ ಆಗಲಿದೆ. ನಾಯಕಿಯ ಆಯ್ಕೆಯಲ್ಲಿ ಚಿತ್ರತಂಡ ಎಚ್ಚರಿಕೆ ವಹಿಸುತ್ತಿದೆ. ನಾಗ ಚೈತನ್ಯ ಅವರಿಗೆ ಪೂಜಾ ಹೆಗ್ಡೆ ಅವರನ್ನು ಜೋಡಿಯಾಗಿಸುವ ಪ್ರಯತ್ನ ನಡೆದಿದೆ ಎಂದು ವರದಿ ಆಗಿದೆ.

ಈ ವಿಷಯದ ಬಗ್ಗೆ ಚಿತ್ರತಂಡದ ಯಾರೊಬ್ಬರೂ ಅಧಿಕೃತವಾಗಿ ಮಾತನಾಡಿಲ್ಲ. ಎಲ್ಲ ಪ್ರಯತ್ನಗಳು ಗುಟ್ಟಾಗಿ ನಡೆಯುತ್ತಿವೆ. ಅಧಿಕೃತವಾಗಿ ಆ ಗುಟ್ಟು ರಟ್ಟಾಗುವುದೊಂದೇ ಬಾಕಿ ಎಂದು ಗಾಸಿಪ್​ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ನಾಗ ಚೈತನ್ಯ ಅಭಿನಯಿಸುತ್ತಿರುವ ‘ಥ್ಯಾಂಕ್ಯೂ’ ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಅದೇ ರೀತಿ ಪೂಜಾ ಹೆಗ್ಡೆ ಅವರು ‘ರಾಧೆ ಶ್ಯಾಮ್​’ ಚಿತ್ರದ ಬಿಡುಗಡೆಯನ್ನು ಎದುರುನೋಡುತ್ತಿದ್ದಾರೆ.

ದಕ್ಷಿಣ ಭಾರತದಲ್ಲಿ ನಟಿ ಪೂಜಾ ಹೆಗ್ಡೆ ಅವರು ಸಖತ್​ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಬ್ಯಾಕ್​ ಟು ಬ್ಯಾಕ್​ ಸ್ಟಾರ್​ ನಟರ ಸಿನಿಮಾಗಳಿಗೆ ಆಯ್ಕೆ ಆಗುವ ಮೂಲಕ ಅವರು ಡಿಮ್ಯಾಂಡ್​ ಹೆಚ್ಚಿಸಿಕೊಂಡಿದ್ದಾರೆ. ಪ್ರಭಾಸ್​ ಜೊತೆ ನಟಿಸಿರುವ ‘ರಾಧೆ ಶ್ಯಾಮ್​’ ಸಿನಿಮಾ ರಿಲೀಸ್​ ಆದರೆ ಅವರ ಚಾರ್ಮ್​ ಡಬಲ್​ ಆಗಲಿದೆ. ಕಾಲಿವುಡ್​ನಲ್ಲಿ ‘ದಳಪತಿ’ ವಿಜಯ್​ ನಟನೆಯ ‘ಬೀಸ್ಟ್​’ ಚಿತ್ರಕ್ಕೂ ಪೂಜಾ ಹೆಗ್ಡೆ ನಾಯಕಿ ಆಗಿದ್ದಾರೆ. ಈ ಹಿಂದೆ ‘ಒಕ ಲೈಲಾ ಕೋಸಂ’ ಚಿತ್ರದಲ್ಲಿ ನಾಗ ಚೈತನ್ಯ ಮತ್ತು ಪೂಜಾ ಹೆಗ್ಡೆ ಜೋಡಿಯಾಗಿ ನಟಿಸಿದ್ದರು. ಆ ಚಿತ್ರ 2014ರಲ್ಲಿ ತೆರೆಕಂಡಿತ್ತು. ಈಗ ಮತ್ತೊಮ್ಮೆ ಅವರಿಬ್ಬರು ಜೋಡಿ ಆಗುತ್ತಿದ್ದಾರೆ ಎಂಬ ಮಾತು ಕೇಳಿಬಂದಿದೆ. ಆದರೆ ಈ ಕುರಿತು ಚಿತ್ರತಂಡದಿಂದ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

ಪೂಜಾ ಹೆಗ್ಡೆ ಅವರು ಇತ್ತೀಚೆಗೆ ಸಿನಿಮಾ ಕೆಲಸಗಳಿಂದ ಬಿಡುವು ಪಡೆದುಕೊಂಡು ಮಾಲ್ಡೀವ್ಸ್​ಗೆ ತೆರಳಿದ್ದರು. ಅಲ್ಲಿನ ಕಡಲ ತೀರದಲ್ಲಿ ಕುಟುಂಬ ಸಮೇತರಾಗಿ ಅವರು ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ತಾಯಿಯ ಜನ್ಮದಿನವನ್ನು ಪ್ರೀತಿಯಿಂದ ಆಚರಿಸಿದ್ದ ಪೂಜಾ ಹೆಗ್ಡೆ ಅವರು ಕೆಲವು ಫೋಟೋಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದರು. ಹಲವು ವರ್ಷಗಳ ಬಳಿಕ ಅವರು ಕುಟುಂಬದ ಜೊತೆ ವಿದೇಶಕ್ಕೆ ಪ್ರವಾಸ ತೆರಳಿರುವುದಾಗಿ ಹೇಳಿಕೊಂಡಿದ್ದರು.

ಇದನ್ನೂ ಓದಿ:

ಸಮಂತಾ ದೂರಾದ ಬಳಿಕ ನಾಗ ಚೈತನ್ಯ ಜತೆ ಖಾಸಗಿ ವಿಮಾನದಲ್ಲಿ ಕಾಣಿಸಿಕೊಂಡ ಈ ಸುಂದರಿ ಯಾರು?

ವಿದೇಶದಲ್ಲಿ ಹಣ ಉಳಿಸಲು ಇಂಥ ಕೆಲಸ ಮಾಡಿದ್ರಾ​ ನಾಗ ಚೈತನ್ಯ-ರಾಶಿ ಖನ್ನಾ? ಇದು ಟಾಲಿವುಡ್​ ಗಾಸಿಪ್​

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ