‘ಅವರಿಂದ ಪಡೆದ ಹಣ ನಾನಿನ್ನೂ ವಾಪಸ್ ಕೊಟ್ಟಿಲ್ಲ’; ಇನ್ಸೈಡ್ ಮಾಹಿತಿ ಬಹಿರಂಗ ಪಡಿಸಿದ ಧನಂಜಯ
‘ಬಡವ ರಾಸ್ಕಲ್’ ಚಿತ್ರದ ಸಕ್ಸಸ್ ಮೀಟ್ ನಡೆದಿದೆ. ಈ ವೇಳೆ ಅನೇಕ ವಿಷಯಗಳ ಬಗ್ಗೆ ಧನಂಜಯ ಮಾತನಾಡಿದರು.
ನಟ ಧನಂಜಯ (Daali Dhananjaya) ಅವರು ನಿರ್ಮಾಪಕನಾಗಿ ಗೆದ್ದಿದ್ದಾರೆ. ಅವರು ನಿರ್ಮಾಣ ಮಾಡಿ, ಅಭಿನಯಿಸಿದ ‘ಬಡವ ರಾಸ್ಕಲ್’ ಸಿನಿಮಾ (Badava Rascal Movie) ಸೂಪರ್ ಹಿಟ್ ಆಗಿದೆ. ಅನೇಕ ಕಡೆಗಳಲ್ಲಿ ಈ ಚಿತ್ರ ಹೌಸ್ಫುಲ್ ಪ್ರದರ್ಶನ ಕಂಡಿತು. ಧನಂಜಯ ಮತ್ತು ಅಮೃತಾ ಅಯ್ಯಂಗಾರ್ (Amrutha Iyengar) ಜೋಡಿಯಾಗಿ ನಟಿಸಿದ ಈ ಸಿನಿಮಾವನ್ನು ಜನರು ಮೆಚ್ಚಿಕೊಂಡರು. ನಟನಾಗಿ ಯಶಸ್ಸು ಕಂಡಿದ್ದ ಧನಂಜಯ ಅವರಿಗೆ ಈ ಸಿನಿಮಾ ಮೂಲಕ ನಿರ್ಮಾಪಕನಾಗಿಯೂ ಪ್ರೇಕ್ಷಕರು ಗೆಲುವು ನೀಡಿದ್ದಾರೆ. ಹಾಗಂತ ಈ ಹಾದಿ ಸುಲಭದ್ದಾಗಿರಲಿಲ್ಲ. ‘ಬಡವ ರಾಸ್ಕಲ್’ ಸಿನಿಮಾ ನಿರ್ಮಾಣ ಮಾಡಲು ಧನಂಜಯ ಅವರು ಹಲವು ಬಗೆಯಲ್ಲಿ ಕಷ್ಟಪಟ್ಟಿದ್ದಾರೆ. ಅನೇಕರಿಂದ ಹಣ ಪಡೆದು ಈ ಚಿತ್ರ ನಿರ್ಮಾಣ ಮಾಡಿದರು. ಅಂದು ಯಾರಿಂದ ದುಡ್ಡು ಪಡೆದುಕೊಳ್ಳಲಾಗಿತ್ತೋ ಅವರಿಗೆ ಧನಂಜಯ ಅವರು ಇನ್ನೂ ಹಣ ವಾಪಸ್ ನೀಡಲ್ಲ. ಆ ವಿಚಾರವನ್ನು ಅವರು ವೇದಿಕೆ ಮೇಲೆಯೇ ಒಪ್ಪಿಕೊಂಡಿದ್ದಾರೆ. ಇನ್ನೂ ಯಾಕೆ ಹಣ ವಾಪಸ್ ನೀಡಿಲ್ಲ ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ. ಇತ್ತೀಚೆಗೆ ‘ಬಡವ ರಾಸ್ಕಲ್’ ಚಿತ್ರದ ಸಕ್ಸಸ್ ಮೀಟ್ ನಡೆಯಿತು. ಈ ವೇಳೆ ಅನೇಕ ವಿಷಯಗಳ ಬಗ್ಗೆ ಧನಂಜಯ ಮಾತನಾಡಿದರು.
ಇದನ್ನೂ ಓದಿ:
ಅಮೃತಾ ಅಯ್ಯಂಗಾರ್ಗೆ ಡಾಲಿ ಧನಂಜಯ ಪ್ರಪೋಸ್; ಖುಷಿಯಿಂದ ಕಮೆಂಟ್ ಮಾಡಿದ ಫ್ಯಾನ್ಸ್
‘ನಾವು ಕಾಲಿಟ್ರೆ ಹೊಸ ಅಲೆ ಏಳತ್ತೆ’; ಸಿನಿಮಾ ಜರ್ನಿಯನ್ನು ಇನ್ನೊಂದು ರೀತಿ ಅರ್ಥೈಸಿದ ಧನಂಜಯ
ಅಸ್ಸಾಂನ ಬುಡಕಟ್ಟು ಮಹಿಳೆಯ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ!
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್
ನೌಕಾ ಡ್ರೋನ್ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್

