ನಟ ಮೋಹನ್ ಜುನೇಜ ಬಗ್ಗೆ ಹಾಸ್ಯ ನಟ ಮಿತ್ರ ಮಾತು
ಹಾಸ್ಯ ಪಾತ್ರದ ಮೂಲಕ ಮೋಹನ್ ಜುನೇಜ ಗಮನ ಸೆಳೆದಿದ್ದರು. ಅವರಿಗೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಮಂದಿ ಗೆಳೆಯರಿದ್ದರು. ಆ ಪೈಕಿ ಹಾಸ್ಯ ನಟ ಮಿತ್ರ ಕೂಡ ಒಬ್ಬರು.
ನಟ ಮೋಹನ್ ಜುನೇಜ (Mohan Juneja) ಅವರು ಮೇ 6ರ ತಡರಾತ್ರಿ ನಿಧನ ಹೊಂದಿದರು. ಸ್ಯಾಂಡಲ್ವುಡ್ನಲ್ಲಿ ನೂರಾರು ಸಿನಿಮಾಗಳಲ್ಲಿ ಅವರು ನಟಿಸಿ ಮೆಚ್ಚುಗೆ ಪಡೆದುಕೊಂಡಿದ್ದರು. ಪೋಷಕ ಪಾತ್ರದ ಮೂಲಕ, ಹಾಸ್ಯ ಪಾತ್ರದ ಮೂಲಕ ಅವರು ಗಮನ ಸೆಳೆದಿದ್ದರು. ಅವರಿಗೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಮಂದಿ ಗೆಳೆಯರಿದ್ದರು. ಆ ಪೈಕಿ ಹಾಸ್ಯ ನಟ ಮಿತ್ರ ಕೂಡ ಒಬ್ಬರು. ಅವರು ಮೋಹನ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಬಹಳ ನೋವಿನ ವಿಷಯ. ನಾವು ಅವರ ಅಭಿಮಾನಿಗಳು. ಚೆಲ್ಲಾಟ ಸಿನಿಮಾದ (Chellata Movie) ಪಾತ್ರದ ಮೂಲಕ ಅವರು ನನಗೆ ಸಾಕಷ್ಟು ಇಷ್ಟವಾಗಿದ್ದರು. ಎರಡು ತಿಂಗಳ ಹಿಂದಷ್ಟೇ ಮಾತನಾಡಿದ್ದೆ. ನಾವು ತೆರೆಮೇಲೆ ನಗಿಸುತ್ತೇವೆ. ಆದರೆ, ತೆರೆಹಿಂದೆ ನಾವು ನೋವು ತಿನ್ನುತ್ತಿರುತ್ತೇವೆ’ ಎಂದಿದ್ದಾರೆ ಅವರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos