ಒಂದೇ ಒಂದು ಫೋಟೋದಿಂದ ರಮ್ಯಾ ಅಭಿಮಾನಿಗಳ ಮನಸ್ಸಿನಲ್ಲಿ ಕೊರೆಯುತ್ತಿದೆ ಹತ್ತು ಹಲವು ಪ್ರಶ್ನೆ
Ramya Viral Photo: ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗಿದೆ. ಶೀಘ್ರದಲ್ಲೇ ರಮ್ಯಾ ಏನಾದರೂ ಗುಡ್ ನ್ಯೂಸ್ ನೀಡಬಹುದೇ ಎಂಬ ಗುಮಾನಿ ವ್ಯಕ್ತವಾಗಿದೆ.
ಸ್ಯಾಂಡಲ್ವುಡ್ನ ಖ್ಯಾತ ನಟಿ ರಮ್ಯಾ (Ramya Divya Spandana) ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಆದರೂ ಅವರು ಸಿನಿಮಾಗಳಿಂದ ದೂರ ಉಳಿದುಕೊಂಡಿದ್ದಾರೆ. ರಾಜಕೀಯದ ಸಲುವಾಗಿ ನಟನೆಯಿಂದ ಅವರು ಬ್ರೇಕ್ ಪಡೆದುಕೊಂಡಿದ್ದರು. ಹಾಗಂತ ಚಿತ್ರರಂಗದ ಜೊತೆಗಿನ ನಂಟನ್ನು ಪೂರ್ತಿಯಾಗಿ ಕಡಿದುಕೊಂಡಿಲ್ಲ. ಈಗಲೂ ಅನೇಕ ಸಿನಿಮಾಗಳ ಬಗ್ಗೆ ಅವರು ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಾ ಇರುತ್ತಾರೆ. ರಮ್ಯಾ (Ramya) ಆದಷ್ಟು ಬೇಗ ಕಮ್ಬ್ಯಾಕ್ ಮಾಡಲಿ ಎಂಬುದು ಅವರ ಅಭಿಮಾನಿಗಳ ಬಯಕೆ. ಈ ನಡುವೆ ರಮ್ಯಾ ಅವರ ಒಂದು ಫೋಟೋ (Ramya Photo) ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಫೋಟೋ ನೋಡಿದ ಮೇಲೆ ಅಭಿಮಾನಿಗಳ ಮನದಲ್ಲಿ ಹತ್ತು ಹಲವು ಪ್ರಶ್ನೆಗಳು ಮೂಡಿವೆ. ಶೀಘ್ರದಲ್ಲೇ ರಮ್ಯಾ ಅವರು ಏನಾದರೂ ಗುಡ್ ನ್ಯೂಸ್ ನೀಡುತ್ತಾರೆ ಎಂಬ ಕುತೂಹಲ ಸೃಷ್ಟಿ ಆಗಿದೆ. ಈ ಬಗ್ಗೆ ಇನ್ನಷ್ಟೇ ಸ್ಪಷ್ಟತೆ ಸಿಗಬೇಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: May 09, 2022 09:30 AM
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಇಂದು ಗುರು ಪೂರ್ಣಿಮೆ ಶುಭ ದಿನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ

