ಕಾಫಿ ವಿತ್ ಕರಣ್ ಶೋಗೆ ಬರಲಿದ್ದಾರೆ ಕಾರ್ತಿಕ್ ಆರ್ಯನ್? ಕರಣ್ ಜೊತೆಗಿನ ಕಿರಿಕ್ ಬಗ್ಗೆ ಮಾತು?
ಕಾರ್ತಿಕ್ ಹಾಗೂ ಕರಣ್ ಮಧ್ಯೆ ಮೂಡಿದ್ದ ವೈಮನಸ್ಸು ದೂರವಾಗಿದೆಯಂತೆ. ಹೀಗಾಗಿ, ಕಾರ್ತಿಕ್ ಅವರಿಗೆ ಕರಣ್ ಶೋಗೆ ಬರುವಂತೆ ಆಹ್ವಾನ ನೀಡಿದ್ದಾರೆ. ಈ ಆಹ್ವಾನವನ್ನು ಸ್ವೀಕರಿಸಿ ಬರಲು ಕಾರ್ತಿಕ್ ಕೂಡ ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸಿದಾಗ ಹಲವು ವಿಚಾರಗಳ ಬಗ್ಗೆ ಇಬ್ಬರೂ ಓಪನ್ ಆಗಿ ಮಾತನಾಡಲಿದ್ದಾರಂತೆ.

ಕರಣ್ ಜೋಹರ್ ನಡೆಸಿಕೊಡಲಿರುವ ‘ಕಾಫಿ ವಿತ್ ಕರಣ್ ಸೀಸನ್ 8’ (Koffee With Karan Season 8 ) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಅಕ್ಟೋಬರ್ 26ರಂದು ಹೊಸ ಸೀಸನ್ನ ಮೊದಲ ಎಪಿಸೋಡ್ ಪ್ರಸಾರ ಕಾಣಲಿದೆ ಎಂದು ಹೇಳಲಾಗುತ್ತಿದೆ. ಈ ಸೀಸನ್ನಲ್ಲಿ ಯಾವೆಲ್ಲ ಅತಿಥಿಗಳು ಬರಲಿದ್ದಾರೆ ಎನ್ನುವ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಈ ಬಗ್ಗೆ ಇನ್ನೂ ಕ್ಲಾರಿಟಿ ಇಲ್ಲ. ಶೋ ಆರಂಭಕ್ಕೂ ಕೆಲವು ದಿನ ಮೊದಲು ಕರಣ್ ಜೋಹರ್ ಈ ಬಗ್ಗೆ ಮಾಹಿತಿ ನೀಡುತ್ತಾರೆ. ಈಗ ಹೊಸ ಸೀಸನ್ಗೆ ಕಾರ್ತಿಕ್ ಆರ್ಯನ್ ಬರಲಿದ್ದಾರೆ ಎಂದು ವರದಿ ಆಗಿದೆ. ಈ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.
ಕಾರ್ತಿಕ್ ಆರ್ಯನ್ ಅವರು ಯಾವುದೇ ಹಿನ್ನೆಲೆ ಇಲ್ಲದೆ ಬಂದವರು. ಅವರಿಗೆ ದೊಡ್ಡ ಮಟ್ಟದ ಬೇಡಿಕೆ ಸೃಷ್ಟಿ ಆಗಿದೆ. ಅನೇಕ ಸ್ಟಾರ್ ನಿರ್ಮಾಪಕರು ಇವರ ಕಾಲ್ಶೀಟ್ಗಾಗಿ ಕಾದಿದ್ದಾರೆ. ಆದರೆ, ಕೆಲ ವರ್ಷಗಳ ಹಿಂದೆ ಈ ರೀತಿ ಇರಲಿಲ್ಲ. ಅವರು ಆಗತಾನೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದರು. ಧರ್ಮ ಪ್ರೊಡಕ್ಷನ್ ಅಡಿಯಲ್ಲಿ ಸಿದ್ಧವಾಗಬೇಕಿದ್ದ ‘ದೋಸ್ತಾನಾ 2’ ಸಿನಿಮಾದಲ್ಲಿ ಕಾರ್ತಿಕ್ ನಟಿಸಬೇಕಿತ್ತು. ಆದರೆ, ಕರಣ್ ಹಾಗೂ ಕಾರ್ತಿಕ್ ಮಧ್ಯೆ ಹೊಂದಾಣಿಕೆ ಆಗದ ಕಾರಣ ಅವರು ಚಿತ್ರದಿಂದ ಹೊರ ನಡೆದರು ಎನ್ನಲಾಗಿದೆ. ಆ ಬಳಿಕ ಪ್ರಾಜೆಕ್ಟ್ ನಿಂತೇ ಹೋಯಿತು. ಕಾರ್ತಿಕ್ ಅವರನ್ನು ತುಳಿಯಬೇಕು ಎಂದು ಕರಣ್ ಪ್ರಯತ್ನಿಸಿದ್ದರು ಎನ್ನುವ ಆರೋಪವನ್ನು ಕೆಲವರು ಮಾಡಿದ್ದಾರೆ.
ಈಗ ಕಾರ್ತಿಕ್ ಹಾಗೂ ಕರಣ್ ಮಧ್ಯೆ ಮೂಡಿದ್ದ ವೈಮನಸ್ಸು ದೂರವಾಗಿದೆಯಂತೆ. ಹೀಗಾಗಿ, ಕಾರ್ತಿಕ್ ಅವರಿಗೆ ಕರಣ್ ಶೋಗೆ ಬರುವಂತೆ ಆಹ್ವಾನ ನೀಡಿದ್ದಾರೆ. ಈ ಆಹ್ವಾನವನ್ನು ಸ್ವೀಕರಿಸಿ ಬರಲು ಕಾರ್ತಿಕ್ ಕೂಡ ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸಿದಾಗ ಹಲವು ವಿಚಾರಗಳ ಬಗ್ಗೆ ಇಬ್ಬರೂ ಓಪನ್ ಆಗಿ ಮಾತನಾಡಲಿದ್ದಾರಂತೆ. ಈ ವೇಳೆ ಕರಣ್ ಜೊತೆಗೆ ಆದ ಕಿರಿಕ್ ಬಗ್ಗೆಯೂ ಅವರು ಮಾತನಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
‘ಕಾಫಿ ವಿತ್ ಕರಣ್’ ಶೋನಲ್ಲಿ ಯಾವುದೇ ಮಾತಿಗೂ ಸೆನ್ಸಾರ್ ಇರುವುದಿಲ್ಲ. ಅಲ್ಲಿ ಎಲ್ಲಾ ವಿಚಾರಗಳನ್ನು ಮುಕ್ತವಾಗಿ ಮಾತನಾಡಲಾಗುತ್ತದೆ. ಇದರಿಂದ ಹಲವು ವಿವಾದಗಳು ಎದ್ದಿರುವ ಉದಾಹರಣೆ ಇದೆ. ಈಗ ಕಾರ್ತಿಕ್ಗೆ ಯಾವ ರೀತಿಯ ಪ್ರಶ್ನೆ ಕೇಳಲಾಗುತ್ತದೆ ಎಂಬ ಬಗ್ಗೆ ಕುತೂಹಲ ಮೂಡಿದೆ. 2019ರಲ್ಲಿ ಕಾರ್ತಿಕ್ ಅವರು ಕರಣ್ ಜೋಹರ್ ಶೋಗೆ ಬಂದಿದ್ದರು. ಈಗ ಎರಡನೇ ಬಾರಿಗೆ ಅವರು ಈ ಶೋಗೆ ಬರುತ್ತಿರುವ ಬಗ್ಗೆ ಕರಣ್ ಜೋಹರ್ ಕಡೆಯಿಂದ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
ಇದನ್ನೂ ಓದಿ: ಗೇ ಎಂಬ ಕಾರಣಕ್ಕೆ ಕರಣ್ ಜೋಹರ್ ಮದುವೆ ಆಗಿಲ್ವಾ? ಅಸಲಿ ಕಾರಣ ತಿಳಿಸಿದ ನಿರ್ಮಾಪಕ
ಕಾರ್ತಿಕ್ ಆರ್ಯನ್ ಅವರು ‘ಭೂಲ್ ಭುಲಯ್ಯ 2’ ಚಿತ್ರದಿಂದ ದೊಡ್ಡ ಗೆಲುವು ಕಂಡರು. ಕಳೆದ ವರ್ಷ ಅವರ ನಿರ್ದೇಶನದ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿಲ್ಲ. ಸದ್ಯ ಅವರು ‘ಚಂದು ಚಾಂಪಿಯನ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:15 pm, Fri, 13 October 23