ಗೇ ಎಂಬ ಕಾರಣಕ್ಕೆ ಕರಣ್ ಜೋಹರ್ ಮದುವೆ ಆಗಿಲ್ವಾ? ಅಸಲಿ ಕಾರಣ ತಿಳಿಸಿದ ನಿರ್ಮಾಪಕ

‘ನಾನು ಹೆಚ್ಚು ಸಂಬಂಧಗಳನ್ನು ಹೊಂದಿಲ್ಲ. ಸರಿಯಾದ ಸಂಗಾತಿಯನ್ನು ಹುಡುಕುವುದು ಸುಲಭವಲ್ಲ. ನನ್ನದು ಒನ್​ಸೈಡ್ ಲವ್​ ಸ್ಟೋರಿ ಇತ್ತು. ಇದನ್ನೇ ಇಟ್ಟುಕೊಂಡು ‘ಯೇ ದಿಲ್ ಹೈ ಮುಷ್ಕಿಲ್’ ಸಿನಿಮಾ ಮಾಡಿದೆ’ ಎಂದು ಕರಣ್​ ಜೋಹರ್​ ಹೇಳಿದ್ದಾರೆ. ಮದುವೆ ಮತ್ತು ಸಂಬಂಧಗಳ ಬಗ್ಗೆ ಅವರು ಮಾತನಾಡಿದ್ದಾರೆ.

ಗೇ ಎಂಬ ಕಾರಣಕ್ಕೆ ಕರಣ್ ಜೋಹರ್ ಮದುವೆ ಆಗಿಲ್ವಾ? ಅಸಲಿ ಕಾರಣ ತಿಳಿಸಿದ ನಿರ್ಮಾಪಕ
ಕರಣ್ ಜೋಹರ್
Follow us
 ಶ್ರೀಲಕ್ಷ್ಮೀ ಎಚ್
| Updated By: ಮದನ್​ ಕುಮಾರ್​

Updated on: Sep 27, 2023 | 6:55 PM

ಬಾಲಿವುಡ್​ನ ಜನಪ್ರಿಯ ನಿರ್ಮಾಪಕರಲ್ಲಿ ಕರಣ್ ಜೋಹರ್ (Karan Johar) ಕೂಡ ಒಬ್ಬರು. ‘ಧರ್ಮ ಪ್ರೊಡಕ್ಷನ್’ ಸಂಸ್ಥೆಯನ್ನು ಸ್ಥಾಪಿಸಿ ಅದನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡ ಹೋದ ಖ್ಯಾತಿ ಅವರಿಗೆ ಇದೆ. ಸ್ಟಾರ್​ ಕಿಡ್​ಗಳನ್ನು ಪರಿಚಯಿಸುವುದು ಎಂದರೆ ಅವರಿಗೆ ಎಲ್ಲಿಲ್ಲದ ಖುಷಿ. ಕರಣ್ ಜೋಹರ್​ಗೆ ಹಣದ ಕೊರತೆ ಇಲ್ಲ. ಅವರಿಗೆ ಕೊರತೆ ಇರೋದು ಪಾರ್ಟ್ನರ್ ವಿಚಾರದಲ್ಲಿ. ಈವರೆಗೆ ಸರಿಯಾದ ಸಂಗಾತಿ ಅವರಿಗೆ ಸಿಕ್ಕಿಲ್ಲ. ಕರಣ್ ಜೋಹರ್ ಮದುವೆ (Marriage) ಆಗದೆ ಇರುವುದಕ್ಕೆ ಕಾರಣ ತಿಳಿಸಿದ್ದಾರೆ.

ಕರಣ್ ಜೋಹರ್ ಗೇ ಅನ್ನೋದು ಅನೇಕರ ನಂಬಿಕೆ. ಅವರು ನಡೆದುಕೊಳ್ಳುವ ಶೈಲಿ, ಅವರ ಹಾವಭಾವ, ಕೆಲವು ವೇದಿಕೆಯ ಮೇಲೆ ಅವರು ಆಡಿದ ಮಾತುಗಳು ಹೀಗೊಂದು ಅನುಮಾನ ಬರುವಂತೆ ಮಾಡಿದೆ. ಶಾರುಖ್ ಖಾನ್ ಜೊತೆ ಕರಣ್ ಮಲಗುತ್ತಾರೆ ಎಂದು ಕೆಲವರು ಟೀಕೆ ಮಾಡಿದ್ದು ಇದೆ. ಇದು ಕರಣ್​ಗೆ ಬೇಸರ ಉಂಟುಮಾಡಿದೆ. ಕರಣ್ ಜೋಹರ್ ಅವರು ಈ ವಿಚಾರದಲ್ಲಿ ಹಲವು ಬಾರಿ ಸ್ಪಷ್ಟನೆ ನೀಡಿದ್ದಾರೆ. ಈಗ ತಾವು ಏಕೆ ಮದುವೆ ಆಗಿಲ್ಲ ಎಂಬ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ರಣ್​ವೀರ್ v/s ರಣ್​ಬೀರ್: ಕರಣ್ ಜೋಹರ್ ವಿವರಿಸಿದ್ದು ಹೀಗೆ

‘ನಾನು ಹೆಚ್ಚು ಸಂಬಂಧಗಳನ್ನು ಹೊಂದಿಲ್ಲ. ಪ್ರೀತಿಯ ವಲಯದಲ್ಲಿ ನಾನು ಏನು ಮಾಡಬೇಕೆಂದು ಬಯಸಿದ್ದೆನೋ ಅದನ್ನು ಮಾಡಬಲ್ಲೆ ಎಂದು ಅರಿತಿದ್ದು 30ರ ವಯಸ್ಸಿನಲ್ಲಿ. ಸರಿಯಾದ ಸಂಗಾತಿಯನ್ನು ಹುಡುಕುವುದು ಸುಲಭವಲ್ಲ. ನನ್ನದು ಒನ್​ಸೈಡ್ ಲವ್​ ಸ್ಟೋರಿ ಇತ್ತು. ಇದನ್ನೇ ಇಟ್ಟುಕೊಂಡು ‘ಯೇ ದಿಲ್ ಹೈ ಮುಷ್ಕಿಲ್’ ಸಿನಿಮಾ ಮಾಡಿದೆ. ಅದು ನನ್ನ ದುಃಖದ ಏಕ್​ತರಫ್​ ಪ್ಯಾರ್. ಒನ್​ ಸೈಡ್ ಲವ್ ಹಲವು ವರ್ಷಗಳ ಕಾಲ ನಡೆಯಿತು. ಪ್ರೀತಿಯ ಶಕ್ತಿ ಏನು ಎಂಬುದನ್ನು ಇದರಿಂದ ಕಲಿತೆ’ ಎಂದಿದ್ದಾರೆ ಕರಣ್ ಜೋಹರ್.

ಇದನ್ನೂ ಓದಿ: ಆಲಿಯಾ ಭಟ್ ನನ್ನ ಮೊದಲ ಮಗಳಿದ್ದಂತೆ: ಕರಣ್ ಜೋಹರ್, ನೆಪೊಟಿಸಂ ಆರೋಪಕ್ಕೆ ತೀಕ್ಷ್ಣ ಪ್ರತಿಕ್ರಿಯೆ

‘ಯಾರನ್ನಾದರೂ ಪ್ರೀತಿಸಲು ಆ ವ್ಯಕ್ತಿಯೇ ಬೇಕಿಲ್ಲ’ ಎಂದು ಶಾರುಖ್ ಖಾನ್ ಹೇಳುವ ಸಾಲಿದೆ. ನಾನು ಅದನ್ನು ಬಲವಾಗಿ ನಂಬುತ್ತೇನೆ. ಪ್ರೀತಿ ನನ್ನ ಅಸ್ತ್ರವಾಯಿತು. ಅದು ನನ್ನ ಹೃದಯವನ್ನು ಒಡೆದರೂ ಸಹ ನನಗೆ ಶಕ್ತಿ ತುಂಬಿತು’ ಎಂದಿದ್ದಾರೆ ಕರಣ್ ಜೋಹರ್. ‘ಪ್ರತಿದಿನ ನನಗೆ ಹೇರಳವಾದ ಪ್ರೀತಿ ಸಿಗುತ್ತಿದೆ. ಯಶ್ ಮತ್ತು ರೂಹಿ (ಬಾಡಿಗೆ ತಾಯ್ತನದಿಂದ ಪಡೆದ ಮಕ್ಕಳು) ನನ್ನ ಮೊದಲ ಪ್ರೇಮ. ನನ್ನ ತಾಯಿ ಹಿರೂ ಜೋಹರ್ ನನಗೆ ಬಲ’ ಎಂದಿದ್ದಾರೆ ಕರಣ್.

ಇದನ್ನೂ ಓದಿ: ‘ಗೇ’ ಅಂತ ಕರೆಸಿಕೊಂಡ ಬಗ್ಗೆ ಮುಕ್ತವಾಗಿ ಮಾತಾಡಿದ ಕರಣ್​ ಜೋಹರ್​; ಶಾರುಖ್​ ಖಾನ್​ ಕುರಿತು ಹೇಳಿದ್ದೇನು?

ಈ ಮೊದಲು ಕರಣ್​ ಅವರಿಗೆ ಏಕಾಂಗಿತನ ಕಾಡುತ್ತಿತ್ತಂತೆ. ಯಾರಾದರೂ ಜೊತೆಗೆ ಇರಬೇಕು ಎಂದು ಅವರಿಗೆ ಅನಿಸುತ್ತಿತ್ತು. ಆದರೆ, ಮದುವೆ ಆಗಲು ಸರಿಯಾದ ವ್ಯಕ್ತಿ ಸಿಕ್ಕಿಲ್ಲ. ಕರಣ್ ಜೋಹರ್ ನಿರ್ದೇಶಿಸಿ, ನಿರ್ಮಿಸಿದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಯಶಸ್ಸು ಕಂಡಿದೆ. ಈ ಚಿತ್ರದಲ್ಲಿ ರಣವೀರ್ ಸಿಂಗ್ ಹಾಗೂ ಆಲಿಯಾ ಭಟ್ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಬಾಕ್ಸ್ ಆಫೀಸ್​ನಲ್ಲಿ ಸಿನಿಮಾ ನೂರಾರು ಕೋಟಿ ಮಾಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್