AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಣ್​ವೀರ್ v/s ರಣ್​ಬೀರ್: ಕರಣ್ ಜೋಹರ್ ವಿವರಿಸಿದ್ದು ಹೀಗೆ

Ranveer-Ranbir: ಬಾಲಿವುಡ್​ನ ಇಬ್ಬರು ಯುವ ಸ್ಟಾರ್​ ನಟರಾದ ರಣ್​ಬೀರ್ ಕಪೂರ್ ಹಾಗೂ ರಣ್​ವೀರ್ ಸಿಂಗ್ ಪರಸ್ಪರ ಹೇಗೆ ಭಿನ್ನ ಎಂದು ನಿರ್ದೇಶಕ, ನಿರ್ಮಾಪಕ, ನಟ ಕರಣ್ ಜೋಹರ್ ವಿವರಿಸಿದ್ದಾರೆ.

ರಣ್​ವೀರ್ v/s ರಣ್​ಬೀರ್: ಕರಣ್ ಜೋಹರ್ ವಿವರಿಸಿದ್ದು ಹೀಗೆ
ರಣ್​ಬೀರ್-ಕರಣ್
ಮಂಜುನಾಥ ಸಿ.
|

Updated on:Sep 26, 2023 | 9:34 PM

Share

ಬಾಲಿವುಡ್​ನ (Bollywood) ಸದ್ಯದ ಸ್ಟಾರ್​ಗಳು ಶಾರುಖ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಆಮಿರ್ ಖಾನ್​ಗಳಾದರೆ ಬಾಲಿವುಡ್​ನ ಮುಂದಿನ ದೊಡ್ಡ ಸ್ಟಾರ್​ಗಳು ರಣ್​ಬೀರ್ ಕಪೂರ್, ರಣ್ವೀರ್ ಸಿಂಗ್ ಎನ್ನಲಾಗುತ್ತದೆ. ಇಬ್ಬರು ಅದ್ಭುತ ನಟರು, ಬಹುಬೇಡಿಕೆಯ ನಟರು. ಇಬ್ಬರೊಟ್ಟಿಗೂ ಕೆಲಸ ಮಾಡಿರುವ ನಿರ್ದೇಶಕ ಕರಣ್ ಜೋಹರ್, ಇಬ್ಬರ ವ್ಯಕ್ತಿತ್ವ ಹಾಗೂ ವೃತ್ತಿಪರತೆ ಬಗ್ಗೆ ಮಾತನಾಡಿದ್ದಾರೆ.

ರಣ್ವೀರ್ ಸಿಂಗ್, ಹೊರಗಡೆ ಚಿತ್ರ-ವಿಚಿತ್ರವಾಗಿ ಕಾಣಿಸಿಕೊಳ್ಳುತ್ತಾರೆ. ವಿಚಿತ್ರವಾಗಿ ಬಟ್ಟೆ ಹಾಕಿಕೊಳ್ಳುತ್ತಾರೆ. ಕಾರ್ಯಕ್ರಮಗಳಲ್ಲಿ ಹೈಪರ್ ಎನರ್ಜಿಯಿಂದ ವರ್ತಿಸುತ್ತಾರೆ. ಕೂಗಾಡುತ್ತಾ, ಡ್ಯಾನ್ಸ್ ಮಾಡುತ್ತಾ, ಜೋರಾಗಿ ಮಾತನಾಡುತ್ತಾ ಸಾಮಾನ್ಯ ಜನರು ಹೌಹಾರುವಂತೆ ವರ್ತಿಸುತ್ತಾರೆ. ಆದರೆ ಅದು ಅವರ ನಿಜವಾದ ವ್ಯಕ್ತಿತ್ವ ಅಲ್ಲ. ಅವರು ಇಡೀ ದಿನ ಹಾಗೆಯೇ ಇರುವುದಿಲ್ಲ ಎಂದಿದ್ದಾರೆ ಕರಣ್.

”ರಣ್ವೀರ್ ಸಿಂಗ್ ಹೊರಗಡೆ ಹಾಗೆ ವರ್ತಿಸುತ್ತಾರೆ. ಆದರೆ ಅವರೊಬ್ಬ ಬಹಳ ಗಂಭೀರ ಮನುಷ್ಯ. ಅವರು ಹೆಚ್ಚು ಪಾರ್ಟಿಗಳಲ್ಲಿ ಭಾಗವಹಿಸುವುದಿಲ್ಲ. ಆಪ್ತ ಕೆಲವೇ ಗೆಳೆಯರೊಟ್ಟಿಗೆ ಮಾತ್ರವೇ ಪಾರ್ಟಿ ಮಾಡುತ್ತಾರೆ. ಸಿನಿಮಾ ಸೆಟ್​ಗಳಲ್ಲಿ ಬಹಳ ಗಂಭೀರವಾಗಿರುತ್ತಾರೆ. ಯಾವುದಾದರೂ ಪಾತ್ರ ಸಿಕ್ಕರೆ ಅದರ ಬಗ್ಗೆ ಬಹಳ ಗಂಭೀರವಾಗಿ ತರಬೇತಿ ಪಡೆದುಕೊಳ್ಳುತ್ತಾರೆ. ಟೇಕ್ ಸರಿಯಾಗಿ ಬರುವವರೆಗೆ ಬಿಡುವುದಿಲ್ಲ” ಎಂದಿದ್ದಾರೆ.

ಇದನ್ನೂ ಓದಿಆಲಿಯಾ ಭಟ್ ನನ್ನ ಮೊದಲ ಮಗಳಿದ್ದಂತೆ: ಕರಣ್ ಜೋಹರ್, ನೆಪೊಟಿಸಂ ಆರೋಪಕ್ಕೆ ತೀಕ್ಷ್ಣ ಪ್ರತಿಕ್ರಿಯೆ

ರಣ್​ಬೀರ್ ಕಪೂರ್ ಬಗ್ಗೆಯೂ ಮಾತನಾಡಿರುವ ಕರಣ್ ಜೋಹರ್, ”ರಣ್​ಬೀರ್ ಪ್ಲೇಬಾಯ್, ಸ್ಪಾಯಲ್ಟ್ ಬಾಯ್ ಎಂದೆಲ್ಲ ಚಿತ್ರರಂಗ ಮಾತನಾಡಿಕೊಳ್ಳುತ್ತದೆ. ಆದರೆ ರಣ್​ಬೀರ್ ಹಾಗಲ್ಲ. ರಣ್​ಬೀರ್​ಗೆ ಒಬ್ಬ ಮ್ಯಾನೇಜರ್ ಸಹ ಇಲ್ಲ. ತಮ್ಮ ಡೇಟ್ಸ್​ಗಳನ್ನು ತಾವೇ ಮ್ಯಾನೇಜ್ ಮಾಡುತ್ತಾರೆ. ಸೆಟ್​ಗಳಲ್ಲಿ ಸಹ ಬಹಳ ಮೌನವಾಗಿರುತ್ತಾರೆ. ಹೆಚ್ಚು ಯಾರೊಟ್ಟಿಗೆ ಮಾತನಾಡುವುದಿಲ್ಲ. ಅನವಶ್ಯಕವಾಗಿ ಅಂತೂ ಮಾತೇ ಆಡುವುದಿಲ್ಲ” ಎಂದಿದ್ದಾರೆ ಕರಣ್.

”ರಣ್​ಬೀರ್ ಕಪೂರ್ ನಿರ್ದೇಶಕರ ನಟ. ಒಳ್ಳೆಯ ನಿರ್ದೇಶಕ ಸಿಕ್ಕರೆ ಅದ್ಭುತವಾಗಿ ಫರ್ಮಾಮ್ ಮಾಡುತ್ತಾರೆ. ಕೆಟ್ಟ ನಿರ್ದೇಶಕ ಸಿಕ್ಕರೆ ಕೆಟ್ಟದಾಗಿಯೇ ಫರ್ಮಾಮ್ ಮಾಡುತ್ತಾರೆ. ನಿರ್ದೇಶಕ ತನ್ನಿಂದ ಎಷ್ಟು ಮತ್ತು ಏನು ನಿರೀಕ್ಷೆ ಮಾಡುತ್ತಾರೆಯೋ ಅದಕ್ಕಿಂತಲೂ ಹೆಚ್ಚಿನದ್ದನ್ನು ರಣ್​ಬೀರ್ ನೀಡುತ್ತಾರೆ. ಸೆಟ್​ನಲ್ಲಿ ಯಾರನ್ನು ಬಹುವಾಗಿ ಹಚ್ಚಿಕೊಳ್ಳುವುದಿಲ್ಲ. ಒಟ್ಟಿಗೆ ಊಟಕ್ಕೆ ಹೋಗುವುದು, ಪಾರ್ಟಿಗೆ ಹೋಗುವುದು ಎಲ್ಲ ಬಹಳ ಕಡಿಮೆ. ಒಮ್ಮೊಮ್ಮೆ ಒಬ್ಬರೇ ಹೋಗಿ ಊಟ ಮಾಡಿ ಬರುತ್ತಾರೆ. ಸಾಧ್ಯವಾದಷ್ಟು ಒಂಟಿಯಾಗಿ ಇರಲೇ ಹೆಚ್ಚು ಇಷ್ಟಪಡುತ್ತಾರೆ” ಎಂದಿದ್ದಾರೆ ಕರಣ್.

ಕರಣ್ ಜೋಹರ್ ನಿರ್ದೇಶನದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಕೆಲ ವಾರಗಳ ಮುಂಚೆಯಷ್ಟೆ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದೆ. ಸಿನಿಮಾದಲ್ಲಿ ರಣ್​ವೀರ್ ಸಿಂಗ್ ಹಾಗೂ ಆಲಿಯಾ ಭಟ್ ಒಟ್ಟಿಗೆ ನಟಿಸಿದ್ದಾರೆ. ಜಯಾ ಬಚ್ಚನ್, ಧರ್ಮೇಂದ್ರ, ಶಬಾನಾ ಆಜ್ಮಿ ಸೇರಿದಂತೆ ಇನ್ನೂ ಹಲವು ದೊಡ್ಡ ನಟರು ಸಿನಿಮಾದಲ್ಲಿ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:32 pm, Tue, 26 September 23

ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ