AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Seetha Raama: ಸೀತಾಳ ಮನೆ ಉಳಿಸಿಕೊಳ್ಳುವ ಕನಸು, ಭಾರ್ಗವಿ ದೆಸೆಯಿಂದ ನನಸಾಗದೇ ಉಳಿದುಬಿಡುತ್ತಾ?

Seetha Raama: ಭಾರ್ಗವಿಯನ್ನು ಆಫೀಸ್ ನಲ್ಲಿ ನೋಡಿದ ಸೀತಾಗೆ ಮನೆ ಉಳಿಸಿಕೊಳ್ಳಲು ದುಡ್ಡು ಕೊಡಬಹುದು ಎಂಬ ಆಸೆ ಚಿಗುರೊಡೆಯುತ್ತದೆ. ಜೊತೆಗೆ ಅವಳನ್ನು ಭಾರ್ಗವಿ ಕ್ಯಾಬಿನ್ ಗೆ ಕರೆಯುತ್ತಾಳೆ. ಮುಂದೇನಾಗಬಹದು? ಸೀತಾಳಿಗೆ ದುಡ್ಡು ಸಿಗಬಹುದಾ? ಅಶೋಕ್ ರಾಮನಿಗೆ ಈ ವಿಚಾರ ತಿಳಿಸುತ್ತಾನಾ? ರಾಮ್ ಮುಂದಿನ ನಡೆಯೇನು? ಕಾದು ನೋಡೋಣ.

Seetha Raama: ಸೀತಾಳ ಮನೆ ಉಳಿಸಿಕೊಳ್ಳುವ ಕನಸು, ಭಾರ್ಗವಿ ದೆಸೆಯಿಂದ ನನಸಾಗದೇ ಉಳಿದುಬಿಡುತ್ತಾ?
ವೈಷ್ಣವಿ
ಪ್ರೀತಿ ಭಟ್​, ಗುಣವಂತೆ
| Edited By: |

Updated on:Sep 27, 2023 | 11:45 AM

Share

ಸೀತಾ ರಾಮ’ (Seetha Raama Serial) ಧಾರಾವಾಹಿ (Serial) ಸಂಚಿಕೆ 53: ಮನೆ ಮಾರಾಟ ಮಾಡುವ ವಿಚಾರವಾಗಿ ಲಾಯರ್ ರುದ್ರ ಪ್ರತಾಪ್, ಸೀತಾಳಿಗೆ ಕರೆ ಮಾಡುತ್ತಾನೆ. ಅವನಿಗೆ ಆಫೀಸ್ ನಲ್ಲಿ ಹಣದ ವ್ಯವಸ್ಥೆ ಆಗುತ್ತದೆ ಎಂದು ಸೀತಾ ಹೇಳಿದಾಗ ಕೋಪಗೊಂಡರೂ ತೋರಿಸಿಕೊಳ್ಳದೇ ಸಮಾಧಾನವಾಗಿ ಮಾತನಾಡಿ, ಮುಂದಿನ ವಿಷಯ ತಿಳಿಸಿ ಎನ್ನುತ್ತಾನೆ. ಇನ್ನು ತನ್ನ ಮಾವನಿಗೂ ಸತ್ಯ ಹೇಳದೆ ಆಫೀಸ್ ಗೆ ಹೊರಡುತ್ತಾಳೆ ಭಾರ್ಗವಿ. ಅವರು ಆಫೀಸಿಗೆ ಹೋದದ್ದು ನೋಡಿದ ಸತ್ಯನ ಹೆಂಡತಿ ತನ್ನ ಗಂಡನ ಬಳಿ ಬಂದು ನಾವು ಅವರ ತರ ಸುತ್ತಾಡಲು ಹೋಗಬಹುದಿತ್ತು ಎಂಬ ತನ್ನ ಮನದ ಇಂಗಿತವನ್ನು ವ್ಯಕ್ತ ಪಡಿಸುತ್ತಾಳೆ.

ಅದಕ್ಕೆ ನಕ್ಕ ಸತ್ಯ, ಅವರ ತರ ಆಗಲು ಹೊರಟ ಹೆಂಡತಿಯನ್ನು ರೇಗಿಸುತ್ತಾನೆ. ಅದಕ್ಕವಳು ತಾನು ರಾಮನೊಂದಿಗೆ ದೇವಸ್ಥಾನಕ್ಕಾದರೂ ಹೋಗುತ್ತಿದ್ದೇ ಎಂದಾಗ, ಸತ್ಯನಿಗೆ ಭಾರ್ಗವಿ ಯಾವುದೋ ಸಂಚು ಮಾಡಿಯೇ ರಾಮನನ್ನು ದೇವಸ್ಥಾನಕ್ಕೆ ಕಳುಹಿಸಿದ್ದಾಳೆ ಎಂಬುದು ಮನದಟ್ಟಾಗುತ್ತದೆ. ಹಾಗಾಗಿ ತಕ್ಷಣ ಅವಸರವಸರವಾಗಿ ಅಲ್ಲಿಂದ ಹೊರಡುತ್ತಾನೆ. ಇನ್ನು ಸಿಹಿಯ ಶಾಲೆಯಲ್ಲಿ ಮಕ್ಕಳೆಲ್ಲಾ ಪಿಕ್ನಿಕ್ ಗೆ ಹೋಗುವ ಸಂಭ್ರಮದಲ್ಲಿ ಇದ್ದರೇ ಸಿಹಿ ಮಾತ್ರ ಅಮ್ಮನ ಪರ್ಮಿಷನ್ ಸಿಗದೆ ಬೇಸರದಲ್ಲಿರುತ್ತಾಳೆ. ಅವಳ ಸ್ನೇಹಿತರು ಅಪ್ಪ, ಅಮ್ಮನ ಬಗ್ಗೆ ಹೇಳುವುದನ್ನು ಕೇಳಿ ಅವಳು ಕೂಡ ತನ್ನ ತಾಯಿಯನ್ನು ಹೊಗಳುತ್ತಾಳೆ.

ಇದನ್ನೂ ಓದಿ:‘ಸೀತಾ ರಾಮ’ ನಟಿ ವೈಷ್ಣವಿ ಹೊಸ ಫೋಟೋ ನೋಡಿ ವಾವ್​ ಎಂದ ಫ್ಯಾನ್ಸ್​

ಗಂಡನ ಜೊತೆ ಆಫೀಸ್ ಗೆ ಬಂದ ಭಾರ್ಗವಿ, ಅಶೋಕ್ ಬಾಸ್ ಕುರ್ಚಿಯಲ್ಲಿ ಕುಳಿತಿರುವುದನ್ನು ನೋಡಿ ಸಿಟ್ಟಿನಿಂದ ಗದರುತ್ತಾಳೆ. ಅವಳನ್ನು ನೋಡಿದ ಅಶೋಕ್ ನಿಗೆ ಏನು ಮಾಡಬೇಕು ಎಂಬುದು ತಿಳಿಯುವುದಿಲ್ಲ. ಭಾರ್ಗವಿ ಹೀಯಾಳಿಸಿದರೂ, ಮಾತನಾಡದೇ ಕಣ್ಣೀರುಡುತ್ತಾ ನಿಲ್ಲುತ್ತಾನೆ. ಭಾರ್ಗವಿಯನ್ನು ಆಫೀಸ್ ನಲ್ಲಿ ನೋಡಿದ ಸೀತಾಗೆ ಮನೆ ಉಳಿಸಿಕೊಳ್ಳಲು ದುಡ್ಡು ಕೊಡಬಹುದು ಎಂಬ ಆಸೆ ಚಿಗುರೊಡೆಯುತ್ತದೆ. ಜೊತೆಗೆ ಅವಳನ್ನು ಭಾರ್ಗವಿ ಕ್ಯಾಬಿನ್ ಗೆ ಕರೆಯುತ್ತಾಳೆ. ಮುಂದೇನಾಗಬಹದು? ಸೀತಾಳಿಗೆ ದುಡ್ಡು ಸಿಗಬಹುದಾ? ಅಶೋಕ್ ರಾಮನಿಗೆ ಈ ವಿಚಾರ ತಿಳಿಸುತ್ತಾನಾ? ರಾಮ್ ಮುಂದಿನ ನಡೆಯೇನು? ಕಾದು ನೋಡೋಣ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:41 pm, Tue, 26 September 23