ರಾಖಿ ಸಾವಂತ್ ಬಯೋಪಿಕ್ಗೆ ರಿಷಬ್ ಶೆಟ್ಟಿ ನಿರ್ದೇಶನ? ಮೈಸೂರಿನಿಂದ ಹೊಸ ನ್ಯೂಸ್
ರಾಖಿ ಸಾವಂತ್ ಅವರ ಜೀವನದ ಕಥೆ ಇಟ್ಟುಕೊಂಡು ಸಿನಿಮಾ ಮಾಡಲು ಪ್ಲ್ಯಾನ್ ನಡೆಯುತ್ತಿದೆ. ಅದಕ್ಕೆ ನಿರ್ಮಾಪಕರು ಕೂಡ ಮುಂದೆ ಬಂದಿದ್ದಾರೆ. ತಮ್ಮ ಪಾತ್ರವನ್ನು ವಿದ್ಯಾ ಬಾಲನ್ ಮಾಡಿದರೆ ಉತ್ತಮ ಎಂದು ರಾಖಿ ಸಾವಂತ್ ಅಭಿಪ್ರಾಯಪಟ್ಟಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನ ಮಾಡಬೇಕು ಎಂದು ಅವರು ಹೇಳಿದ್ದಾರೆ.
ನಟಿ ರಾಖಿ ಸಾವಂತ್ (Rakhi Sawant) ಅವರು ಸಿನಿಮಾ ಮಾಡಿದ್ದಕ್ಕಿಂತ ವಿವಾದ ಮಾಡಿಕೊಂಡಿದ್ದೇ ಹೆಚ್ಚು. ಆ ವಿವಾದಗಳಿಂದಲೇ ಅವರು ಹೆಚ್ಚು ಪ್ರಚಾರ ಪಡೆದಿದ್ದಾರೆ. ಪ್ರತಿ ದಿನವೂ ಅವರು ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ರಾಖಿ ಸಾವಂತ್ ಅವರ ವೈಯಕ್ತಿಕ ಜೀವನದ ವಿಚಾರಗಳು ಬೀದಿಗೆ ಬಂದಿವೆ. ಪತಿ ಆದಿಲ್ ಖಾನ್ ಜೊತೆ ಅವರು ಕಿರಿಕ್ ಮಾಡಿಕೊಂಡಿದ್ದು ಎಲ್ಲರಿಗೂ ತಿಳಿದಿದೆ. ಈಗ ಅವರು ತಮ್ಮ ಬಯೋಪಿಕ್ (Rakhi Sawant Biopic) ಬಗ್ಗೆ ಒಂದು ಆಸೆ ವ್ಯಕ್ತಪಡಿಸಿದ್ದಾರೆ. ತಮ್ಮ ಜೀವನದ ಕಥೆಯನ್ನು ಆಧರಿಸಿ ತಯಾರಾಗುವ ಸಿನಿಮಾಗೆ ರಿಷಬ್ ಶೆಟ್ಟಿ ನಿರ್ದೇಶನ ಮಾಡಬೇಕು ಎಂದು ಹೇಳಿದ್ದಾರೆ. ಅವರ ಈ ವಿಡಿಯೋ ಸಖತ್ ವೈರಲ್ ಆಗಿದೆ. ಇದಕ್ಕೆ ರಿಷಬ್ ಶೆಟ್ಟಿ (Rishab Shetty) ಅವರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕೌತುಕ ಮೂಡಿದೆ.
ರಾಖಿ ಸಾವಂತ್ ಅವರ ಜೀವನದ ಕಥೆ ಇಟ್ಟುಕೊಂಡು ಸಿನಿಮಾ ಮಾಡಲು ಪ್ಲ್ಯಾನ್ ನಡೆಯುತ್ತಿದೆ. ಅದಕ್ಕೆ ನಿರ್ಮಾಪಕರು ಕೂಡ ಮುಂದೆ ಬಂದಿದ್ದಾರೆ. ತಮ್ಮ ಪಾತ್ರವನ್ನು ವಿದ್ಯಾ ಬಾಲನ್ ಮಾಡಿದರೆ ಉತ್ತಮ ಎಂದು ರಾಖಿ ಸಾವಂತ್ ಅಭಿಪ್ರಾಯಪಟ್ಟಿದ್ದಾರೆ. ‘ನಿಮ್ಮ ಪಾತ್ರವನ್ನು ನೀವೇ ಮಾಡಬಹುದಲ್ಲ’ ಎಂದು ನಿರ್ಮಾಪಕರು ರಾಖಿಗೆ ಹೇಳಿದ್ದಾರಂತೆ. ‘ಆ ಬಗ್ಗೆ ನಾನು ಯೋಚಿಸಿಲ್ಲ’ ಎಂದು ರಾಖಿ ಸಾವಂತ್ ಹೇಳಿದ್ದಾರೆ. ಯಾರು ನಿರ್ದೇಶನ ಮಾಡಬೇಕು ಎಂದು ಕೇಳಿದ್ದಕ್ಕೆ ರಿಷಬ್ ಶೆಟ್ಟಿಯ ಹೆಸರನ್ನು ರಾಖಿ ಸಾವಂತ್ ಹೇಳಿದ್ದಾರೆ.
ಇದನ್ನೂ ಓದಿ: ರಾಖಿ ಸಾವಂತ್-ಆದಿಲ್ ಖಾನ್ಗೆ ನಿಖಾ ಮಾಡಿಸಿದ್ದು ನಕಲಿ ಮೌಲಾನಾ?
‘ಯಾರು ನಿರ್ದೇಶನ ಮಾಡಬೇಕು ಎಂಬುದರ ಚರ್ಚೆ ನಡೆಯುತ್ತಿದೆ. ಕಥೆ, ಚಿತ್ರಕಥೆ, ಸಂಗೀತ, ನಿರ್ದೇಶನ ಎಲ್ಲ ವಿಭಾಗದಲ್ಲೂ ದೊಡ್ಡ ತಂತ್ರಜ್ಞರನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ನನಗೆ ಕಾಂತಾರ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಹೆಚ್ಚು ಇಷ್ಟ’ ಎಂದು ರಾಖಿ ಸಾವಂತ್ ಹೇಳಿದ್ದಾರೆ. ಮೈಸೂರಿನಲ್ಲಿ ಅವರು ಸುದ್ದಿಗೋಷ್ಠಿ ನಡೆಸಿ ಈ ವಿಚಾರ ಹೇಳಿದ್ದಾರೆ. ಸದ್ಯ ರಿಷಬ್ ಶೆಟ್ಟಿ ಅವರು ‘ಕಾಂತಾರ 2’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.
ಇದನ್ನೂ ಓದಿ: ‘ಗಂಡಸರು ನನ್ನನ್ನು ಮುಟ್ಟಬೇಡಿ, ನಾನು ಪವಿತ್ರಳಾಗಿದ್ದೇನೆ’: ಮೆಕ್ಕಾದಿಂದ ಬಂದು ಎಚ್ಚರಿಕೆ ನೀಡಿದ ರಾಖಿ ಸಾವಂತ್
ರಾಖಿ ಸಾವಂತ್ ಅವರ ಪತಿ ಆದಿಲ್ ಖಾನ್ ಮೈಸೂರಿನವರು. ಮೈಸೂರಿನಲ್ಲಿ ಇರುವ ಆದಿಲ್ ಖಾನ್ ಮನೆ ಮುಂದೆ ಬುಲ್ಡೋಜರ್ ತಂದು ನಿಲ್ಲಿಸಿದ್ದಾರೆ ರಾಖಿ. ಈ ಎಲ್ಲ ಡ್ರಾಮಾಗಳು ಪ್ರತಿದಿನ ನಡೆಯುತ್ತಿವೆ. ಮದುವೆ ಬಳಿಕ ತಾವು ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿರುವುದಾಗಿ ಈಗಾಗಲೇ ರಾಖಿ ಸಾವಂತ್ ಹೇಳಿದ್ದಾರೆ. ಅವರು ಫಾತಿಮಾ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ. ಮೆಕ್ಕಾ ಮದೀನಾಗೂ ಅವರು ಹೋಗಿ ಬಂದಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ ಬಳಿಕ ಅವರಿಗೆ ಹೆಚ್ಚು ಪ್ರಚಾರ ಸಿಕ್ಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.