10 ಸೈಮಾ ಪ್ರಶಸ್ತಿ ಪಡೆದ‘ಕಾಂತಾರ’; ‘ದೈವ ನರ್ತಕರು, ಅಪ್ಪು ಸರ್ ಹಾಗೂ ಕನ್ನಡಿಗರಿಗೆ ಸಮರ್ಪಣೆ’ ಎಂದ ರಿಷಬ್​ ಶೆಟ್ಟಿ

‘ಕಾಂತಾರ’ ಸಿನಿಮಾದಿಂದ ರಿಷಬ್​ ಶೆಟ್ಟಿ ಅವರು ಪಡೆದ ಜನಪ್ರಿಯತೆ ಸಣ್ಣದಲ್ಲ. ಈಗ ಈ ಸಿನಿಮಾಗೆ 10 ಸೈಮಾ ಪ್ರಶಸ್ತಿ ಬಂದಿದೆ. ಈ ಖುಷಿಯನ್ನು ರಿಷಬ್​ ಶೆಟ್ಟಿ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರಿಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ‘ಕಾಂತಾರ 2’ ಚಿತ್ರದ ಕೆಲಸಗಳಿಗೆ ಸಿದ್ಧತೆ ನಡೆಯುತ್ತಿದೆ.

10 ಸೈಮಾ ಪ್ರಶಸ್ತಿ ಪಡೆದ‘ಕಾಂತಾರ’; ‘ದೈವ ನರ್ತಕರು, ಅಪ್ಪು ಸರ್ ಹಾಗೂ ಕನ್ನಡಿಗರಿಗೆ ಸಮರ್ಪಣೆ’ ಎಂದ ರಿಷಬ್​ ಶೆಟ್ಟಿ
ರಿಷಬ್​ ಶೆಟ್ಟಿ
Follow us
|

Updated on: Sep 19, 2023 | 4:39 PM

ರಿಷಬ್​ ಶೆಟ್ಟಿ ನಿರ್ದೇಶನ ಹಾಗೂ ನಟನೆಯ ‘ಕಾಂತಾರ’ ಸಿನಿಮಾ (Kantara Movie) ಬಾಕ್ಸ್​ ಆಫೀಸ್​ನಲ್ಲಿ ಬಂಗಾರದ ಬೆಳೆ ತೆಗೆದಿದ್ದು ಮಾತ್ರವಲ್ಲದೇ ಪ್ರಶಸ್ತಿ ಬಾಚಿಕೊಳ್ಳುವಲ್ಲಿಯೂ ಮುಂಚೂಣಿಯಲ್ಲಿದೆ. ಇತ್ತೀಚೆಗೆ ಸೈಮಾ ಪ್ರಶಸ್ತಿ (SIIMA Awards 2023) ಪ್ರದಾನ ಸಮಾರಂಭ ನಡೆಯಿತು. ಅದರಲ್ಲಿ ಬರೋಬ್ಬರಿ 10 ವಿಭಾಗಗಳಲ್ಲಿ ಕಾಂತಾರ ಸಿನಿಮಾಗೆ ಅವಾರ್ಡ್​ ಸಿಕ್ಕಿರುವುದು ವಿಶೇಷ. ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಹಾಸ್ಯ ನಟ, ಅತ್ಯುತ್ತಮ ಸಂಗೀತ ನಿರ್ದೇಶನ ಮುಂತಾದ ವಿಭಾಗಗಳಲ್ಲಿ ‘ಕಾಂತಾರ’ ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿರುವುದನ್ನು ರಿಷಬ್​ ಶೆಟ್ಟಿ (Rishab Shetty) ಅವರು ಸಂಭ್ರಮಿಸುತ್ತಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ‘ದೈವ ನರ್ತಕರು, ಅಪ್ಪು ಸರ್ ಮತ್ತು ಕನ್ನಡಿಗರಿಗೆ ಈ ಯಶಸ್ಸು ಸಮರ್ಪಣೆ’ ಎಂದ ಅವರು ಬರೆದುಕೊಂಡಿದ್ದಾರೆ.

‘ಜನರ ಮನ್ನಣೆಯಿಂದ ಸಿಕ್ಕ ಪ್ರೀತಿಯೇ ಕಾಂತಾರ ಸಿನಿಮಾದ ಯಶಸ್ಸಿಗೆ ಕಾರಣ. ಸೈಮಾ ಅವಾರ್ಡ್ಸ್​ನಲ್ಲಿ ಅತ್ಯುತ್ತಮ ನಿರ್ದೇಶನ, ಪಾಥ್ ಬ್ರೇಕಿಂಗ್ ಸ್ಟೋರಿ, ಅತ್ಯುತ್ತಮ ನಟ, ನಟಿ, ಖಳನಟ, ಹಾಸ್ಯನಟ, ಸಂಗೀತ ನಿರ್ದೇಶಕ, ಗಾಯಕ, ಸಾಹಿತಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಮನ ತುಂಬಿ ಬಂದಿದೆ. ಜವಾಬ್ದಾರಿ ಹೆಚ್ಚಿಸಿದೆ. ನಿಮ್ಮ ಪ್ರೀತಿ, ಆಶೀರ್ವಾದ ಹೀಗೆಯೇ ಇರಲಿ. ದೈವ ನರ್ತಕರು, ಅಪ್ಪು ಸರ್ ಹಾಗೂ ಕನ್ನಡಿಗರಿಗೆ ಈ ಎಲ್ಲಾ ಯಶಸ್ಸು ಸಮರ್ಪಣೆ’ ಎಂದು ರಿಷಬ್​ ಶೆಟ್ಟಿ ಪೋಸ್ಟ್​ ಮಾಡಿದ್ದಾರೆ.

ತುಳುನಾಡಿನ ಸಂಸ್ಕೃತಿ ಮತ್ತು ಆಚರಣೆಗಳ ಬಗ್ಗೆ ‘ಕಾಂತಾರ’ ಸಿನಿಮಾದಲ್ಲಿ ತೋರಿಸಲಾಗಿದೆ. 2022ರ ಸೆಪ್ಟೆಂಬರ್​ 30ರಂದು ಬಿಡುಗಡೆ ಆದ ಈ ಸಿನಿಮಾದಲ್ಲಿನ ರಿಷಬ್​ ಶೆಟ್ಟಿ ಅವರ ನಟನೆಗೆ ಫಿದಾ ಆಗದವರಿಲ್ಲ. ಅದರಲ್ಲೂ ಕ್ಲೈಮ್ಯಾಕ್ಸ್​ ದೃಶ್ಯ ಹೆಚ್ಚು ಗಮನ ಸೆಳೆದಿತ್ತು. ಬೇರೆ ಭಾಷೆಗಳಿಗೆ ಡಬ್​ ಆಗಿ ತೆರೆಕಂಡು ಹಲವು ರಾಜ್ಯಗಳಲ್ಲಿ ಈ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಂಡಿತ್ತು. ಬಾಲಿವುಡ್​ ಮಟ್ಟದಲ್ಲಿ ರಿಷಬ್​ ಶೆಟ್ಟಿ ಅವರಿಗೆ ಜನಪ್ರಿಯತೆ ಸಿಕ್ಕಿತು. ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಗೆ ಭರ್ಜರಿ ಲಾಭ ಆಯಿತು. ಈಗ ‘ಕಾಂತಾರ 2’ ಸಿನಿಮಾಗೆ ಸಿದ್ಧತೆಗಳು ನಡೆಯುತ್ತಿವೆ.

ಇದನ್ನೂ ಓದಿ: ಅದ್ದೂರಿ ಕಾಂತಾರ ಸೆಟ್​ನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ, ಫೋಟೋಗಳಲ್ಲಿ ನೋಡಿ

‘ಕಾಂತಾರ’ ಚಿತ್ರ ಪಡೆದ ಸೈಮಾ ಪ್ರಶಸ್ತಿಗಳ ವಿವರ:

ಅತ್ಯುತ್ತಮ ನಿರ್ದೇಶಕ: ರಿಷಬ್​ ಶೆಟ್ಟಿ ಅತ್ಯುತ್ತಮ ನಟ (ಕ್ರಿಟಿಕ್ಸ್​): ರಿಷಬ್​ ಶೆಟ್ಟಿ ಪಾತ್​ ಬ್ರೇಕಿಂಗ್​ ಸ್ಟೋರಿ: ರಿಷಬ್​ ಶೆಟ್ಟಿ ಅತ್ಯುತ್ತಮ ನಟಿ (ಕ್ರಿಟಿಕ್ಸ್​): ಸಪ್ತಮಿ ಗೌಡ ಅತ್ಯುತ್ತಮ ಖಳನಟ: ಅಚ್ಯುತ್​ ಕುಮಾರ್​ ಅತ್ಯುತ್ತಮ ಸಂಗೀತ ನಿರ್ದೇಶನ: ಅಜನೀಶ್​ ಬಿ. ಲೋಕನಾಥ್​ ಅತ್ಯುತ್ತಮ ಗಾಯಕ: ವಿಜಯ್​ ಪ್ರಕಾಶ್​ ಅತ್ಯುತ್ತಮ ಹಾಸ್ಯ ನಟ: ಪ್ರಕಾಶ್​ ತುಮ್ಮಿನಾಡು ಅತ್ಯುತ್ತಮ ಸಾಹಿತ್ಯ: ಪ್ರಮೋದ್​ ಮರವಂತೆ ವಿಶೇಷ ಮೆಚ್ಚುಗೆ ಪ್ರಶಸ್ತಿ: ಮುಕೇಶ್​ ಲಕ್ಷ್ಮಣ್​

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.