Updated on:Sep 19, 2023 | 12:42 PM
2022ರಲ್ಲಿ ರಿಲಿಸ್ ಆಗಿದ್ದ ಕಾಂತಾರಾ ಚಿತ್ರ ಭಾರತದ ಚಿತ್ರರಂಗದಲ್ಲೇ ಒಂದು ಮೈಲಿಗಲ್ಲು ಸೃಷ್ಠಿ ಮಾಡಿದೆ. ಚಿತ್ರದ ಕಥೆ, ಪಾತ್ರ, ದೈವಾರಾಧನೆ, ಸಂಗೀತ ಪ್ರೇಕ್ಷಕರನ್ನು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿ.
ಕಾಂತಾರಾ ಚಿತ್ರದಿಂದ ಪ್ರೆರೇಪಣೆಗೊಂಡು ಆನೆಕಲ್ನಲ್ಲಿ ಕಾಂತಾರ ಸೆಟ್ ನಿರ್ಮಿಸಿ, ಗಣೇಶ ಮೂರ್ತಿಯನ್ನ ಪ್ರತಿಷ್ಠಾಪನೆ ಮಾಡಲಾಗಿದೆ.
ರಾಜ್ಯದ ಗಡಿಭಾಗ ತಮಿಳುನಾಡಿನ ಡೆಂಕಣಿಕೋಟೆಯಲ್ಲಿ ಕಾಂತಾರ ಸಿನಿಮಾದಂತೆಯೇ ಅದ್ದೂರಿ ಸೆಟ್ ಹಾಕಲಾಗಿದೆ.
ಡೆಂಕಣಿಕೋಟೆಯ ಶ್ರೀ ರಾಜಮಾರ್ತಾಂಡ ಗಣಪತಿ ಭಕ್ತ ಮಂಡಳಿ ಬರೋಬ್ಬರಿ 16 ಲಕ್ಷ ರೂ. ಖರ್ಚು ಮಾಡಿ, ಆರ್ಟ್ ಡೈರೆಕ್ಟರ್ ಚಿತ್ತಾ ಜಿನೇಂದ್ರ ಅವರಿಂದ ಕಾಂತಾರ ಸೆಟ್ ನಿರ್ಮಾಣ ಮಾಡಿಸಿದೆ.
ತುಳುನಾಡಿನ ಆರಾಧ್ಯ ದೈವದ ನಿಜವಾದ ಕಥೆಯಾಗಿರುವುದರಿಂದ ಶ್ರದ್ಧೆ, ಭಕ್ತಿಯಿಂದ ಕಳೆದೊಂದು ತಿಂಗಳಿನಿಂದ ಮಾಂಸಹಾರವನ್ನ ತ್ಯಜಿಸಿ ಕಾಂತಾರ ಸೆಟ್ ನಿರ್ಮಾಣ ಮಾಡಲಾಗಿದೆ.
ಒಳ ಹೋಗುತ್ತಿದ್ದಂತೆ ಸುತ್ತಲೂ ಫೈರ್ ಫೀಲ್ ಆಗುವಂತೆ ಭೂತಕೋಲ ಸೆಟ್ ಹಾಕಲಾಗಿದ್ದು, ಭೂತಕೋಲ ಕೈಯಲ್ಲಿ ಪಂಜನ್ನು ಹಿಡಿದು ಆಕ್ಷನ್ ಮಾಡುವ ರೀತಿ ರಿಯಲಿಸ್ಟಿಕ್ ಆಗಿ ಇದೆ.
ಒಳಭಾಗದಲ್ಲಿ ಕಾಂತಾರ ಸಿನಿಮಾ ಕಥೆಯ ರಾಜನಂತೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.
ಪಂಜುರ್ಲಿ, ವರಾಹರೂಪಿ, ಭೂತಕೋಲ, ಗುಳಿಗ ದೈವ, ಕಾಡು, ಬೆಟ್ಟ ಸೆಟ್ನ ಹೈಲೆಟ್ಸ್ ಆಗಿವೆ.
ಕಾಂತಾರ ಸೆಟ್ನಲ್ಲಿನ ಗಣಪನನ್ನು ನೋಡಲು ಆನೇಕಲ್, ಬೆಂಗಳೂರು, ಕೃಷ್ಣಗಿರಿ, ಆಂಧ್ರ ಪ್ರದೇಶದಿಂದಲೂ ಭಕ್ತರು ಆಗಮಿಸುತ್ತಿದ್ದಾರೆ.
Published On - 11:10 am, Tue, 19 September 23