ಕರ್ಬೂಜ ಹಣ್ಣಿನ ಪ್ರಯೋಜನಗಳ ಬಗ್ಗೆ ನಿಮಗೆಷ್ಟು ಗೊತ್ತು?
ಕರ್ಬೂಜದಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಇದು ದೇಹವನ್ನು ತೇವಾಂಶದಿಂದ ಇಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೃದಯದ ಆರೋಗ್ಯಕ್ಕೂ ಕರ್ಬೂಜ ಅತ್ಯುತ್ತಮವಾದ ಹಣ್ಣು. ಕರ್ಬೂಜ ಹಣ್ಣಿನಲ್ಲಿರುವ ವಿಟಮಿನ್ ಎ ನಿಮ್ಮ ಕೂದಲನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುವ ಮೇದೋಗ್ರಂಥಿಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ.
Updated on: Sep 19, 2023 | 4:02 PM

ಕರ್ಬೂಜ ಹಣ್ಣು ಎಲ್ಲ ಕಾಲಕ್ಕೂ, ಎಲ್ಲ ರೀತಿಯ ದೇಹ ಪ್ರಕೃತಿನ ಇರುವವರಿಗೂ ಅತ್ಯುತ್ತಮವಾದ ಹಣ್ಣು. ಕರ್ಬೂಜ ಹಣ್ಣು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ ಮತ್ತು ಹೆಚ್ಚು ಪ್ರಮಾಣದ ಜೀವಸತ್ವಗಳು, ಖನಿಜಗಳನ್ನು ಹೊಂದಿರುತ್ತವೆ.

ಇದರ ಸೇವನೆಯಿಂದ ನಮ್ಮ ದೇಹಕ್ಕೆ ಬೇಕಾದ ಶೇ. 20ರಷ್ಟು ವಿಟಮಿನ್ ಎ ಮತ್ತು ಶೇ. 61ರಷ್ಟು ವಿಟಮಿನ್ ಸಿ ಸಿಗುತ್ತದೆ. ಈ ಹಣ್ಣಿನಲ್ಲಿ ಶೇ. 90ರಷ್ಟು ನೀರಿನಂಶ ಇರುತ್ತದೆ. ಹೀಗಾಗಿ, ಈ ಹಣ್ಣು ತಿಂದ ನಂತರ ಹಲವು ಗಂಟೆಗಳ ಕಾಲ ನಿಮ್ಮ ಹಸಿವನ್ನು ನಿಯಂತ್ರಿಸುತ್ತದೆ.

ಕರ್ಬೂಜ ಹಣ್ಣು ಕಣ್ಣಿನ ದೃಷ್ಟಿಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ದೈನಂದಿನ ಆಹಾರದಲ್ಲಿ ಕರ್ಬೂಜವನ್ನು ಸೇರಿಸುವುದರಿಂದ ಕಣ್ಣಿನ ದೃಷ್ಟಿ ಸುಧಾರಿಸುತ್ತದೆ.

ಈ ಹಣ್ಣು ಮಕ್ಕಳಿಗೆ ಬಹಳ ಉತ್ತಮವಾದುದು. ಇದು ದೃಷ್ಟಿ ಸಮಸ್ಯೆಗಳನ್ನು ಸರಿಪಡಿಸುವುದು ಮಾತ್ರವಲ್ಲದೆ ಉರಿಯೂತವನ್ನು ಕಡಿಮೆ ಮಾಡುತ್ತದೆ.

ಕರ್ಬೂಜದಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಇದು ಚರ್ಮಕ್ಕೆ ದೃಢತೆಯನ್ನು ನೀಡುತ್ತದೆ. ಇದರ ನಿಯಮಿತ ಸೇವನೆಯು ನೈಸರ್ಗಿಕ ಹೊಳಪನ್ನು ನೀಡುವ ಮೂಲಕ ಚರ್ಮದ ಬಣ್ಣವನ್ನು ಸುಧಾರಿಸುತ್ತದೆ.

ನೀವು ತೂಕ ಇಳಿಸುವ ಪ್ರಯತ್ನದಲ್ಲಿದ್ದರೆ ಕರ್ಬೂಜವನ್ನು ಸೇವಿಸಿ. ಈ ಹಣ್ಣಿನಲ್ಲಿ ಶೇ. 90ರಷ್ಟು ನೀರಿನ ಅಂಶವಿದೆ. ಇದು ಫೈಬರ್‌ನಿಂದ ತುಂಬಿರುತ್ತದೆ.

ಇದರಲ್ಲಿ ಕೊಲೆಸ್ಟ್ರಾಲ್ ಇಲ್ಲ, ಸಕ್ಕರೆ ಇಲ್ಲ ಮತ್ತು ಕ್ಯಾಲೊರಿ ಕೂಡ ತುಂಬಾ ಕಡಿಮೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ರೋಗಿಗಳಿಗೆ ವೈದ್ಯರು ಕರ್ಬೂಜವನ್ನು ಶಿಫಾರಸು ಮಾಡುತ್ತಾರೆ.

ಏಕೆಂದರೆ ಇದರಲ್ಲಿ ಪೊಟ್ಯಾಸಿಯಂ ಸಮೃದ್ಧವಾಗಿದೆ. ಇದರ ನಿಯಮಿತ ಸೇವನೆಯು ರಕ್ತ ತೆಳುವಾಗುವಂತೆ ಮಾಡುತ್ತದೆ.

ಕರ್ಬೂಜದಲ್ಲಿರುವ ನೀರಿನ ಅಂಶ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ ಮತ್ತು ಮೂತ್ರಪಿಂಡದ ಕಲ್ಲುಗಳನ್ನು ತೆರವುಗೊಳಿಸುತ್ತದೆ.

ಕರ್ಬೂಜದಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳಿವೆ.

ಇದು ದೇಹವನ್ನು ತೇವಾಂಶದಿಂದ ಇಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಹೃದಯದ ಆರೋಗ್ಯಕ್ಕೂ ಕರ್ಬೂಜ ಅತ್ಯುತ್ತಮವಾದ ಹಣ್ಣು.

ಕರ್ಬೂಜ ಹಣ್ಣಿನಲ್ಲಿರುವ ವಿಟಮಿನ್ ಎ ನಿಮ್ಮ ಕೂದಲನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುವ ಮೇದೋಗ್ರಂಥಿಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ.

ಕರ್ಬೂಜ ಹಣ್ಣಿನ ತಿರುಳನ್ನು ನೀವು ನೇರವಾಗಿ ನಿಮ್ಮ ನೆತ್ತಿಗೆ ಹಚ್ಚಿದರೆ ಕೂದಲಿನ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರ ಪರಿಣಾಮವಾಗಿ ಉದ್ದವಾದ, ಹೊಳಪುಳ್ಳ ಕೂದಲು ನಿಮ್ಮದಾಗುತ್ತದೆ.



















