AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಪೇಂದ್ರ ಬಗ್ಗೆ ಶಿವಣ್ಣನಿಗೆ ಯಾಕೆ ಇಷ್ಟು ಪ್ರೀತಿ? ‘ಯುಐ’ ವೇದಿಕೆಯಲ್ಲಿ ಮನಸಾರೆ ಮಾತಾಡಿದ ‘ಹ್ಯಾಟ್ರಿಕ್​ ಹೀರೋ’

ಶಿವರಾಜ್​ಕುಮಾರ್​ ಅವರ ನೆಚ್ಚಿನ ನಿರ್ದೇಶಕರಲ್ಲಿ ಉಪೇಂದ್ರ ಕೂಡ ಇದ್ದಾರೆ. ಉಪ್ಪಿ ಜೊತೆ ಮತ್ತೆ ಸಿನಿಮಾ ಮಾಡಬೇಕು ಎಂಬ ಬಯಕೆ ಅವರಲ್ಲಿದೆ. ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ‘ಯುಐ’ ಟೀಸರ್​ ಬಿಡುಗಡೆ ಮಾಡಿದ ಬಳಿಕ ಅಭಿಮಾನಿಗಳ ಸಮ್ಮುಖದಲ್ಲಿ ಅನೇಕ ವಿಚಾರಗಳನ್ನು ಶಿವಣ್ಣ ಹಂಚಿಕೊಂಡಿದ್ದಾರೆ.

ಉಪೇಂದ್ರ ಬಗ್ಗೆ ಶಿವಣ್ಣನಿಗೆ ಯಾಕೆ ಇಷ್ಟು ಪ್ರೀತಿ? ‘ಯುಐ’ ವೇದಿಕೆಯಲ್ಲಿ ಮನಸಾರೆ ಮಾತಾಡಿದ ‘ಹ್ಯಾಟ್ರಿಕ್​ ಹೀರೋ’
ಉಪೇಂದ್ರ, ಗೀತಾ, ಶಿವರಾಜ್​ಕುಮಾರ್​
ಮದನ್​ ಕುಮಾರ್​
|

Updated on: Sep 18, 2023 | 10:02 PM

Share

ಉಪೇಂದ್ರ ಮತ್ತು ಶಿವರಾಜ್​ಕುಮಾರ್​ ನಡುವೆ ಹಲವು ವರ್ಷಗಳ ಒಡನಾಟ ಇದೆ. ‘ಓಂ’ ಸಿನಿಮಾದಲ್ಲಿ ಇವರಿಬ್ಬರು ಮಾಡಿದ ಮೋಡಿಯನ್ನು ಫ್ಯಾನ್ಸ್​ ಎಂದಿಗೂ ಮರೆಯುವಂಥದ್ದಲ್ಲ. ಇಂದು (ಸೆ.18) ಗೌರಿ ಗಣೇಶ ಹಬ್ಬದ ಪ್ರಯುಕ್ತ ‘ಯುಐ’ ಸಿನಿಮಾದ ಟೀಸರ್​ (UI Movie Teaser) ಲಾಂಚ್​ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಶಿವರಾಜ್​ಕುಮಾರ್​ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರ ಜೊತೆ ಗೀತಾ ಶಿವರಾಜ್​ಕುಮಾರ್​ ಕೂಡ ಸಾಥ್​ ನೀಡಿದರು. ಇಂದು ಉಪೇಂದ್ರ ಜನ್ಮದಿನ ಕೂಡ ಹೌದು. ಹಾಗಾಗಿ ಉಪ್ಪಿಗೆ ಶಿವರಾಜ್​ಕುಮಾರ್​ (Shivarajkumar) ಮತ್ತು ಗೀತಾ ದಂಪತಿ ಶುಭ ಕೋರಿದರು. ಬಳಿಕ ಉಪೇಂದ್ರ (Upendra) ಬಗ್ಗೆ ಶಿವಣ್ಣ ಮಾತನಾಡಿದರು. ತಮ್ಮಿಬ್ಬರ ನಡುವಿನ ಬಾಂಧವ್ಯ ಎಂಥದ್ದು? ಉಪೇಂದ್ರ ಅವರ ಪ್ರತಿಭೆ ಎಂಥದ್ದು ಎಂಬುದನ್ನು ಶಿವಣ್ಣ ವಿವರಿಸಿದರು.

‘ಉಪ್ಪಿಗೆ ಹ್ಯಾಪಿ ಬರ್ತ್​ಡೇ. ನಿನ್ನನ್ನು ನಾನು ಅಂದು ಹೇಗೆ ಪ್ರೀತಿಸುತ್ತಿದ್ದೆನೋ ಅದೇ ರೀತಿ ಯಾವಾಗಲೂ ಪ್ರೀತಿಸುತ್ತೇನೆ. ಯಾಕೆಂದರೆ, ನನ್ನ ಜೀವನದಲ್ಲಿ ನೀನು ಫೇವರಿಟ್​ ಡೈರೆಕ್ಟರ್​. ನನ್ನ ಇಮೇಜ್​ ಅನ್ನು ಬೇರೆ ಹಂತಕ್ಕೆ ತೆಗೆದುಕೊಂಡು ಹೋದ ನಿರ್ದೇಶಕ ನೀನು ಎಂಬುದನ್ನು ನಾನು ಎಂದಿಗೂ ಮರೆಯಲ್ಲ. ಇಂದು ನಾನು ಕಣ್ಣಿಂದ ಆ್ಯಕ್ಟ್​ ಮಾಡ್ತೀನಿ ಅಂತ ಜನರು ಹೇಳ್ತಾರೆ. ಆದರೆ ಅದು ನನಗೆ ಮೊದಲು ಗೊತ್ತಾಗಿದ್ದು ನಿನ್ನಿಂದ. ಇಂದು ನನ್ನ ಕಣ್ಣಿನ ಬಗ್ಗೆ ಇಡೀ ಭಾರತದಲ್ಲಿ ಮಾತಾಡುತ್ತಾರೆ ಎಂದರೆ ಅದರ ಕ್ರೆಡಿಟ್​ ನಿನಗೆ ಸಲ್ಲುತ್ತದೆ’ ಎಂದು ಶಿವರಾಜ್​ಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ: UI Teaser: ‘ಯುಐ’ ಟೀಸರ್​ನಲ್ಲಿ ಏನನ್ನೂ ತೋರಿಸದೇ ಜನರ ತಲೆಗೆ ಹುಳ ಬಿಟ್ಟ ಉಪೇಂದ್ರ

‘ಓಂ’ ಸಿನಿಮಾದ ಸಂದರ್ಭವನ್ನು ಶಿವಣ್ಣ ಮತ್ತೆ ನೆನಪು ಮಾಡಿಕೊಂಡಿದ್ದಾರೆ. ‘ರಜನಿಕಾಂತ್​ ಅವರು ಓಂ ಸಿನಿಮಾದ ಇಂಟ್ರಡಕ್ಷನ್​ ಸೀನ್​ ಬಗ್ಗೆ ಈಗಲೂ ಹೇಳುತ್ತಾ ಇರುತ್ತಾರೆ. ಅಂಥ ಇಂಟ್ರಡಕ್ಷನ್​ ಸೀನ್​ ನಾನು ಈವರೆಗೂ ನೋಡಿಲ್ಲ ಮರಿ ಅಂತ ಹೇಳ್ತಾರೆ. ಆ ಸಿನಿಮಾವನ್ನು ನಾವು ಎಂದಿಗೂ ಮರೆಯೋಕೆ ಆಗಲ್ಲ. ನೀವು ಡೈರೆಕ್ಷನ್​ ಮಾಡ್ತೀರಿ ಎಂದಾಗ ಬೇರೆ ರೀತಿಯ ಭರವಸೆ ಮೂಡುತ್ತದೆ. ಮತ್ತೆ ನಾವು-ನೀವು ಜೊತೆಯಾಗಿ ಸಿನಿಮಾ ಮಾಡೋದು ಯಾವಾಗ ಅಂತ ಅಭಿಮಾನಿಗಳು ಕೇಳುತ್ತಾರೆ. ಅದು ಬೇಡಿಕೆ ಕೂಡ ಹೌದು. ನಾನು ಕೂಡ ಅದಕ್ಕಾಗಿ ಕಾಯುತ್ತಿದ್ದೇನೆ’ ಎಂದಿದ್ದಾರೆ ಶಿವಣ್ಣ.

ಇದನ್ನೂ ಓದಿ: UI Teaser: ಉಪ್ಪಿ ಅಭಿಮಾನಿಗಳ ಎದುರು ‘ಯುಐ’ ಟೀಸರ್​ ಬಿಡುಗಡೆ; ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ

ಬೆಂಗಳೂರಿನ ಊರ್ವಶಿ ಥಿಯೇಟರ್​ನಲ್ಲಿ ‘ಯುಐ’ ಸಿನಿಮಾದ ಟೀಸರ್​ ಅನ್ನು ಶಿವರಾಜ್​ಕುಮಾರ್​ ಅವರು ಬಿಡುಗಡೆ ಮಾಡಿದರು. ಇದು ತುಂಬ ಡಿಫರೆಂಟ್​ ಆಗಿ ಮೂಡಿಬಂದಿದೆ. ಈ ಟೀಸರ್​ನಲ್ಲಿ ಯಾವುದೇ ದೃಶ್ಯಗಳು ಇಲ್ಲ. ಬರೀ ಡೈಲಾಗ್​ ಮತ್ತು ಶಬ್ದ ಕೇಳಿಸಿದೆ. ಆ ಮೂಲಕ ಪ್ರೇಕ್ಷಕರ ಕಲ್ಪನೆಗೆ ಎಲ್ಲವನ್ನೂ ಬಿಡಲಾಗಿದೆ. ಉಪೇಂದ್ರ ಅವರ ಈ ಪ್ರಯತ್ನಕ್ಕೆ ಶಿವರಾಜ್​ಕುಮಾರ್​ ಮೆಚ್ಚುಗೆ ಸೂಚಿಸಿದ್ದಾರೆ. ದುನಿಯಾ ವಿಜಯ್​, ಯುವ ರಾಜ್​ಕುಮಾರ್​ ಮುಂತಾದವರು ಕೂಡ ‘ಯುಐ’ ಟೀಸರ್​ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಕೋರಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!