‘ಭೀಮ’ ಚಿತ್ರದಲ್ಲಿದೆ ಶಾಕಿಂಗ್​ ವಿಷಯ; ಹಾಡು ಬಿಡುಗಡೆ ವೇಳೆ ಮಾಹಿತಿ ನೀಡಿದ ದುನಿಯಾ ವಿಜಯ್​

‘ನೈಜ ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ಪ್ರೀತಿ-ಪ್ರೇಮ, ದುಶ್ಚಟ ಮುಂತಾದ ವಿಚಾರಗಳು ಹೆಣ್ಮಕ್ಕಳು ಮತ್ತು ಗಂಡು ಮಕ್ಕಳ ಮೇಲೆ ಯಾವ ರೀತಿ ಪರಿಣಾಮ ಬೀರಿದೆ ಎಂಬುದನ್ನು ಬಹಳ ನೇರವಾಗಿ ತೋರಿಸುತ್ತೇನೆ. ಅದನ್ನು ಹೇಗೆ ತಡೆದುಕೊಳ್ಳುತ್ತಾರೋ ಗೊತ್ತಿಲ್ಲ. ಇದರಲ್ಲಿ ಎಚ್ಚರಿಕೆ ಗಂಟೆ ಇದೆ’ ಎಂದಿದ್ದಾರೆ ದುನಿಯಾ ವಿಜಯ್​.

‘ಭೀಮ’ ಚಿತ್ರದಲ್ಲಿದೆ ಶಾಕಿಂಗ್​ ವಿಷಯ; ಹಾಡು ಬಿಡುಗಡೆ ವೇಳೆ ಮಾಹಿತಿ ನೀಡಿದ ದುನಿಯಾ ವಿಜಯ್​
ದುನಿಯಾ ವಿಜಯ್​
Follow us
|

Updated on:Sep 18, 2023 | 2:54 PM

ನಟ ದುನಿಯಾ ವಿಜಯ್​ (Duniya Vijay) ಅವರು ನಿರ್ದೇಶಕನಾಗಿಯೂ ಬ್ಯುಸಿ ಆಗಿದ್ದಾರೆ. ‘ಸಲಗ’ ಚಿತ್ರದ ಮೂಲಕ ಭರ್ಜರಿ ಯಶಸ್ಸು ಕಂಡ ಅವರು ಈಗ ‘ಭೀಮ’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಅಭಿಮಾನಿಗಳಿಗೆ ಈ ಸಿನಿಮಾ ಮೇಲೆ ದೊಡ್ಡ ನಿರೀಕ್ಷೆ ಇದೆ. ಇಂದು (ಸೆ.18) ಗೌರಿ ಗಣೇಶ ಹಬ್ಬದ ಪ್ರಯುಕ್ತ ‘ಭೀಮ’ ಚಿತ್ರದ ಹಾಡು (Bheema Movie Song) ಬಿಡುಗಡೆ ಆಗಿದೆ. ‘ಬ್ಯಾಡ್​ ಬಾಯ್ಸ್​..’ ಎಂಬ ಈ ಹಾಡಿನ ಬಿಡುಗಡೆ ವೇಳೆ ದುನಿಯಾ ವಿಜಯ್ ಅವರು ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾದ ಕಥೆ ಏನು ಎಂಬುದರ ಬಗ್ಗೆಯೂ ಅವರು ಸುಳಿವು ನೀಡಿದ್ದಾರೆ. ಪೋಷಕರು ಮತ್ತು ಮಕ್ಕಳು ಶಾಕ್​ ಆಗುವಂತಹ ಒಂದು ವಿಷಯವನ್ನು ಇಟ್ಟುಕೊಂಡು ಅವರು ‘ಭೀಮ’ ಸಿನಿಮಾ (Bheema Movie) ಮಾಡಿದ್ದಾರೆ. ಇದು ನೈಜ ಘಟನೆಗಳನ್ನು ಆಧರಿಸಿದೆ ಎಂಬುದು ವಿಶೇಷ.

‘ನಾನು ಒಂದೆರಡು ಕಡೆಗಳಿಗೆ ಭೇಟಿ ನೀಡಿದೆ. ಅಲ್ಲಿ ನೋಡಿದಾಗ ಶಾಕ್​ ಆಯಿತು. ಅಲ್ಲಿರುವ ನಾಲ್ಕು ಹೆಣ್ಣು ಮಕ್ಕಳು, 10-15  ಹುಡುಗರು ಬದುಕಿದ್ದರೂ ವೇಸ್ಟ್​. ಅವರು ಯಾವಾಗ ಸಾಯುತ್ತಾರೋ ಗೊತ್ತಿಲ್ಲ. ಸತ್ತಾಗ ನಮಗೆ ಹೇಳಬೇಡಿ ಎನ್ನುತ್ತಾ ನೋವು ಅನುಭವಿಸುತ್ತಿರುವ ತಂದೆ-ತಾಯಿ ಇದ್ದಾರೆ. ಆ ವಿಚಾರ ನನ್ನನ್ನು ಕಾಡಿತು. ಈ ವಿಚಾರದ ಮೇಲೆ ಯಾಕೆ ಸಿನಿಮಾ ಮಾಡಬಾರದು ಅಂತ ನನಗೆ ಅನಿಸಿತು’ ಎಂದು ದುನಿಯಾ ವಿಜಯ್​ ಹೇಳಿದ್ದಾರೆ. ಈ ಸಿನಿಮಾದಲ್ಲಿ ಅನೇಕ ಹೊಸ ಕಲಾವಿದರು ನಟಿಸಿದ್ದಾರೆ.

‘ಭೀಮ’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದುನಿಯಾ ವಿಜಯ್​:

‘ನನ್ನ ಬಳಿ ಕೆಲವು ವಿಡಿಯೋ ಮತ್ತು ಫೋಟೋಗಳು ಇವೆ. ಸಿನಿಮಾ ರಿಲೀಸ್​ಗೂ ಮುನ್ನ ಇದನ್ನು ನಿಮಗೆ ತೋರಿಸುತ್ತೇನೆ. ಚಟಕ್ಕೆ ಛಲ ಇಲ್ಲ. ಯಾವ ಮಟ್ಟಕ್ಕೆ ಬೇಕಾದರೂ ಕರೆದುಕೊಂಡು ಹೋಗುತ್ತದೆ. ಇಂದಿನ ಯುವ ಜನತೆ ಯಾವ ಮಟ್ಟಕ್ಕೆ ಇಳಿದಿದ್ದಾರೆ ಎಂಬುದನ್ನು ನೋಡಿದಾಗ ನನ್ನ ಮನಸ್ಸಿಗೆ ಬಹಳ ನೋವಾಗಿದೆ. ಅದನ್ನೆಲ್ಲ ನಿಮಗೆ ಸಾಕ್ಷಿ ಸಮೇತ ತೋರಿಸುತ್ತೇವೆ. ಈ ಸಮಸ್ಯೆಗೆ ಪರಿಹಾರ ಎಲ್ಲರ ಕೈಯಲ್ಲೂ ಇದೆ. ಅಧಿಕಾರದಲ್ಲಿ ಇರುವ ಯುವಜನತೆ, ಆಫೀಸರ್​ಗಳು, ತಂದೆ-ತಾಯಿ, ರಾಜಕಾರಣಿಗಳು ಸೇರಿದಂತೆ ಎಲ್ಲರಿಗೂ ಈ ವಿಚಾರದಲ್ಲಿ ಜವಾಬ್ದಾರಿ ಇದೆ’ ಎಂದು ದುನಿಯಾ ವಿಜಯ್​ ಹೇಳಿದ್ದಾರೆ.

Duniya Vijay: ಪಕ್ಕಾ ಅಭಿಮಾನಿಗೆ ವಿಶೇಷ ಪ್ರೀತಿ ತೋರಿಸಿದ ನಟ ದುನಿಯಾ ವಿಜಯ್

‘ನೈಜ ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ಪ್ರೀತಿ-ಪ್ರೇಮ, ದುಶ್ಚಟ ಮುಂತಾದ ವಿಚಾರಗಳು ಹೆಣ್ಮಕ್ಕಳು ಮತ್ತು ಗಂಡು ಮಕ್ಕಳ ಮೇಲೆ ಯಾವ ರೀತಿ ಪರಿಣಾಮ ಬೀರಿದೆ ಎಂಬುದನ್ನು ಬಹಳ ನೇರವಾಗಿ ತೋರಿಸುತ್ತೇನೆ. ಅನೇಕ ಕಡೆಗಳಲ್ಲಿ ಓಡಾಡಿ, ತುಂಬ ಅಧ್ಯಯನ ಮಾಡಿದ್ದೇನೆ. ಯುವಜನತೆ ಇಂದು ಏನು ಮಾಡುತ್ತಿದೆ ಎಂಬುದನ್ನು ಬಹಳ ಸತ್ಯವಾಗಿ ತೆರೆದಿಟ್ಟಿದ್ದೇನೆ. ಅದನ್ನು ಹೇಗೆ ತಡೆದುಕೊಳ್ಳುತ್ತಾರೋ ಗೊತ್ತಿಲ್ಲ. ಪೋಷಕರಿಗೆ ಈ ಸಿನಿಮಾದಲ್ಲಿ ಎಚ್ಚರಿಕೆ ಗಂಟೆ ಇದೆ’ ಎಂದಿದ್ದಾರೆ ದುನಿಯಾ ವಿಜಯ್​.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:49 pm, Mon, 18 September 23

ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು