UI Teaser: ‘ಯುಐ’ ಟೀಸರ್​ನಲ್ಲಿ ಏನನ್ನೂ ತೋರಿಸದೇ ಜನರ ತಲೆಗೆ ಹುಳ ಬಿಟ್ಟ ಉಪೇಂದ್ರ

ಉಪೇಂದ್ರ ಏನೇ ಮಾಡಿದರೂ ಅದು ತುಂಬ ಡಿಫರೆಂಟ್​ ಆಗಿರುತ್ತದೆ. ‘ಯುಐ’ ಸಿನಿಮಾದ ಟೀಸರ್​ನಲ್ಲೂ ಅದು ಸಾಬೀತಾಗಿದೆ. ಇಂದು ಚಿತ್ರತಂಡ ರಿಲೀಸ್​ ಮಾಡಿರುವ ಈ ಟೀಸರ್​ನಲ್ಲಿ ಯಾವುದೇ ದೃಶ್ಯಗಳು ಕಾಣಿಸಿಲ್ಲ. ಕೇವಲ ಡೈಲಾಗ್​ಗಳು ಮತ್ತು ಇತರೆ ಶಬ್ದ ಕೇಳಿಸಿದೆ. ಅದನ್ನು ಕೇಳಿಸಿಕೊಂಡು ಅಭಿಮಾನಿಗಳು ಕಥೆಯನ್ನು ಊಹಿಸಿಕೊಳ್ಳಬೇಕು.

UI Teaser: ‘ಯುಐ’ ಟೀಸರ್​ನಲ್ಲಿ ಏನನ್ನೂ ತೋರಿಸದೇ ಜನರ ತಲೆಗೆ ಹುಳ ಬಿಟ್ಟ ಉಪೇಂದ್ರ
ಯುಐ ಸಿನಿಮಾ ಟೀಸರ್​
Follow us
ಮದನ್​ ಕುಮಾರ್​
|

Updated on: Sep 18, 2023 | 7:26 PM

ಬಹುನಿರೀಕ್ಷಿತ ‘ಯುಐ’ ಸಿನಿಮಾದ ಟೀಸರ್ (UI Movie Teaser)​ ಬಿಡುಗಡೆ ಆಗಿದೆ. ಅನೇಕ ವರ್ಷಗಳ ಬಳಿಕ ಉಪೇಂದ್ರ ಅವರು ಈ ಚಿತ್ರದ ಮೂಲಕ ನಿರ್ದೇಶಕನ ಕ್ಯಾಪ್​ ಧರಿಸಿರುವುದರಿಂದ ಅಭಿಮಾನಿಗಳ ನಿರೀಕ್ಷೆ ಜೋರಾಗಿದೆ. ಇಂದು (ಸೆಪ್ಟೆಂಬರ್ 18) ಉಪೇಂದ್ರ (Upendra) ಜನ್ಮದಿನ. ಆ ಪ್ರಯುಕ್ತ ಅಭಿಮಾನಿಗಳ ಸಮ್ಮುಖದಲ್ಲಿ ಟೀಸರ್​ ರಿಲೀಸ್​ ಮಾಡಲಾಗಿದೆ. ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳ ಎದುರಿನಲ್ಲಿ ಟೀಸರ್​ ಬಿತ್ತರ ಆಗಿದೆ. ಈ ಸಮಾರಂಭದಲ್ಲಿ ಶಿವರಾಜ್​​ಕುಮಾರ್​, ಗೀತಾ ಶಿವರಾಜ್​ಕುಮಾರ್​, ದುನಿಯಾ ವಿಜಯ್​ ಸೇರಿದಂತೆ ಅನೇಕ ಗಣ್ಯರು ಭಾಗಿ ಆಗಿದ್ದಾರೆ. ದೊಡ್ಡ ಪರದೆ ಮೇಲೆ ‘ಯುಐ’ (UI Movie) ಟೀಸರ್​ ಬಿತ್ತರ ಮಾಡಲಾಗಿದೆ. ಆದರೆ ಅದರಲ್ಲಿ ಏನೂ ಕಾಣಿಸಿಲ್ಲ. ಬರೀ ಶಬ್ದ ಕೇಳಿಸಿದೆ ಅಷ್ಟೇ!

ಉಪೇಂದ್ರ ಏನೇ ಮಾಡಿದರೂ ಅದು ತುಂಬ ಡಿಫರೆಂಟ್​ ಆಗಿರುತ್ತದೆ. ‘ಯುಐ’ ಸಿನಿಮಾದ ಟೀಸರ್​ನಲ್ಲೂ ಅದು ಸಾಬೀತಾಗಿದೆ. ಇಂದು ಚಿತ್ರತಂಡ ರಿಲೀಸ್​ ಮಾಡಿರುವ ಈ ಟೀಸರ್​ನಲ್ಲಿ ಯಾವುದೇ ದೃಶ್ಯಗಳು ಕಾಣಿಸಿಲ್ಲ. ಕೇವಲ ಒಂದಷ್ಟು ಡೈಲಾಗ್​ಗಳು ಮತ್ತು ಇತರೆ ಶಬ್ದ ಕೇಳಿಸಿದೆ. ಅದನ್ನು ಕೇಳಿಸಿಕೊಂಡು ಅಭಿಮಾನಿಗಳು ಕಥೆಯನ್ನು ಊಹಿಸಿಕೊಳ್ಳಬೇಕು. ಆ ಮೂಲಕ ಎಲ್ಲರ ತಲೆಗೂ ಉಪೇಂದ್ರ ಕೆಲಸ ಕೊಟ್ಟಿದ್ದಾರೆ. ಇದಕ್ಕೆ ಸಿನಿಪ್ರಿಯರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಉಪೇಂದ್ರ ಅವರ ಕ್ರಿಯೇಟಿವಿಟಿಗೆ ಫ್ಯಾನ್ಸ್​ ಭೇಷ್​ ಎನ್ನುತ್ತಿದ್ದಾರೆ.

‘ಯುಐ’ ಸಿನಿಮಾದ ಟೀಸರ್

ಈ ಟೀಸರ್​ ಕೇಳಿಸಿಕೊಂಡ ಪ್ರತಿಯೊಬ್ಬರ ತಲೆಯಲ್ಲೂ ಬೇರೆ ಬೇರೆ ಕಲ್ಪನೆ ಮೂಡುತ್ತಿದೆ. ಆ ರೀತಿ ಆಗಬೇಕು ಎಂಬುದೇ ಉಪೇಂದ್ರ ಅವರ ಆಶಯ. ಅಷ್ಟಕ್ಕೂ ತಾವು ಯಾವುದೇ ದೃಶ್ಯವನ್ನು ಯಾಕೆ ತೋರಿಸಿಲ್ಲ ಎಂಬುದನ್ನು ಕೂಡ ಸ್ವತಃ ಉಪೇಂದ್ರ ವಿವರಿಸಿದ್ದಾರೆ. ‘ಇದೆಲ್ಲವೂ ಕಲ್ಪನೆಯಲ್ಲೇ ಇರಲಿ. ಅದರಲ್ಲೇ ಮಜಾ ಇದೆ. ಇದು ನಿಮ್ಮ ಕಲ್ಪನೆಯನ್ನು ಟೀಸ್​ ಮಾಡುವ ಟೀಸರ್​. ತಲೆ ಎತ್ತಿ ಕಲ್ಪನೆ ಮಾಡಿಕೊಳ್ಳಿ. ತಲೆ ತಗ್ಗಿಸಿ ಮೊಬೈಲ್​ ನೋಡೋದು ಬಿಡಿ. ಇದರಲ್ಲಿ ಸೌಂಡ್​ ಟ್ರಾವೆಲ್​ ಆಗುತ್ತದೆ. ಅದನ್ನು ಗಮನಿಸಿ. ಇದನ್ನು ಕೇಳಿಸಿಕೊಂಡರೆ ನೀವೆಲ್ಲ ಡೈರೆಕ್ಟರ್​ ಆಗುತ್ತೀರಿ’ ಎಂದು ಉಪೇಂದ್ರ ಹೇಳಿದ್ದಾರೆ.

ಇದನ್ನೂ ಓದಿ: UI Teaser: ಉಪ್ಪಿ ಅಭಿಮಾನಿಗಳ ಎದುರು ‘ಯುಐ’ ಟೀಸರ್​ ಬಿಡುಗಡೆ; Video ನೋಡಲು ಇಲ್ಲಿ ಕ್ಲಿಕ್​ ಮಾಡಿ

‘ಯುಐ’ ಸಿನಿಮಾದ ಗ್ರಾಫಿಕ್ಸ್​ ಬಗ್ಗೆ ಉಪ್ಪಿ ಮಾಹಿತಿ ನೀಡಿದ್ದಾರೆ. ‘ಇದು ಮಾಮೂಲಿ ಸಿನಿಮಾ ಅಲ್ಲ. ಸಿನಿಮಾ ನೋಡಿದ ಮೇಲೆ ತಲೆ ಎತ್ತಿಕೊಂಡು ಓಡಾಡುತ್ತೀರಿ. ಈ ಚಿತ್ರದಲ್ಲಿ 90ರಷ್ಟು ಗ್ರಾಫಿಕ್ಸ್​​ ಇದೆ. ಅದಕ್ಕಾಗಿ 4-5 ಕಡೆಗಳಲ್ಲಿ ಕೆಲಸ ನಡೆಯುತ್ತಿದೆ. ಆ ಕೆಲಸ ಪೂರ್ಣ ಆಗುವ ತನಕ ನಾನು ಏನನ್ನೂ ನಿಮಗೆ ತೋರಿಸಲ್ಲ. ಈ ಜನ್ಮದಿನಕ್ಕೆ ನಮ್ಮ ಫ್ಯಾನ್ಸ್​ ಹೇಗೆ ಯೋಚನೆ ಮಾಡ್ತಾರೆ ನೋಡೋಣ ಅಂತ ನಿಮ್ಮ ತಲೆಗೆ ಕೆಲಸ ಕೊಟ್ಟಿದ್ದೇನೆ’ ಎಂದು ಉಪೇಂದ್ರ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು