AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಗೇ’ ಅಂತ ಕರೆಸಿಕೊಂಡ ಬಗ್ಗೆ ಮುಕ್ತವಾಗಿ ಮಾತಾಡಿದ ಕರಣ್​ ಜೋಹರ್​; ಶಾರುಖ್​ ಖಾನ್​ ಕುರಿತು ಹೇಳಿದ್ದೇನು?

‘ನಾನು 10ನೇ ತರಗತಿಯಲ್ಲಿ ಶಲಾಕಾ ಎಂಬ ಹುಡುಗಿಯನ್ನು ಪ್ರೀತಿಸುತ್ತಿರುವುದಾಗಿ ನಾಟಕವಾಡಿದ್ದೆ. ಇಂದು ನೀವೆಲ್ಲರೂ ಗೇ, ಹೋಮೋ ಎಂದೆಲ್ಲ ನಿಂದನೀಯವಾಗಿ ಕರೆಯುತ್ತೀರಿ. ಆಗಿನ ಕಾಲದಲ್ಲಿ ಪ್ಯಾನ್ಸಿ ಎಂದು ಕರೆಯಲಾಗುತ್ತಿತ್ತು. ನಿಜವಾಗಿಯೂ ಆ ಪದ ನನಗೆ ತುಂಬ ನೋವು ಉಂಟು ಮಾಡಿತ್ತು’ ಎಂದು ಕರಣ್​ ಜೋಹರ್​ ಅವರು ಹೇಳಿದ್ದಾರೆ.

‘ಗೇ’ ಅಂತ ಕರೆಸಿಕೊಂಡ ಬಗ್ಗೆ ಮುಕ್ತವಾಗಿ ಮಾತಾಡಿದ ಕರಣ್​ ಜೋಹರ್​; ಶಾರುಖ್​ ಖಾನ್​ ಕುರಿತು ಹೇಳಿದ್ದೇನು?
ಶಾರುಖ್​ ಖಾನ್​, ಕರಣ್​ ಜೋಹರ್​
ಮದನ್​ ಕುಮಾರ್​
|

Updated on: Aug 30, 2023 | 1:17 PM

Share

ಬಾಲಿವುಡ್​ನ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಕರಣ್​ ಜೋಹರ್​ (Karan Johar) ಅವರನ್ನು ಕೆಲವರು ಅಪಹಾಸ್ಯ ಮಾಡಿದ್ದುಂಟು. ಅವರನ್ನು ಸಲಿಂಗಕಾಮಿ (Gay) ಎಂದು ಕೆಲವರು ನಿಂದಿಸಿದ್ದಾರೆ. ಅದು ಅವರಿಗೆ ಬೇಸರ ಮೂಡಿಸಿದೆ. ಕೆಲವು ಸಂದರ್ಶನಗಳಲ್ಲಿ ಅವರಿಗೆ ಈ ಬಗ್ಗೆ ನೇರವಾಗಿ ಪ್ರಶ್ನೆ ಎದುರಾಗಿದ್ದರು ಕೂಡ ಉಂಟು. ಆಗ ಅವರು ಖಡಕ್​ ಉತ್ತರಗಳನ್ನು ನೀಡಿ ಬಂದಿದ್ದಾರೆ. ಈಗ ಕರಣ್​ ಜೋಹರ್​ ಅವರು ಒಂದು ಯೂಟ್ಯೂಬ್​ ಸಂದರ್ಶನದಲ್ಲಿ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಶಾಲಾ ದಿನಗಳಲ್ಲೇ ತಮ್ಮನ್ನು ‘ಗೇ’ ಎಂದು ಕರೆಯಲಾಗುತ್ತಿತ್ತು ಎಂದು ಕರಣ್​ ಜೋಹರ್​ ಹೇಳಿದ್ದಾರೆ. ಅಲ್ಲದೇ, ಶಾರುಖ್​ ಖಾನ್​ (Shah Rukh Khan) ಅವರು ತಮಗೆ ನೀಡುವ ಗೌರವದ ಬಗ್ಗೆಯೂ ಕರಣ್​ ವಿವರಿಸಿದ್ದಾರೆ.

‘ನಾನು 10ನೇ ತರಗತಿಯಲ್ಲಿ ಶಲಾಕಾ ಎಂಬ ಹುಡುಗಿಯನ್ನು ಪ್ರೀತಿಸುತ್ತಿರುವುದಾಗಿ ನಾಟಕವಾಡಿದ್ದೆ. ಇಂದು ನೀವೆಲ್ಲರೂ ಗೇ, ಹೋಮೋ ಎಂದೆಲ್ಲ ನಿಂದನೀಯವಾಗಿ ಕರೆಯುತ್ತೀರಿ. ಆಗಿನ ಕಾಲದಲ್ಲಿ ಪ್ಯಾನ್ಸಿ ಎಂದು ಕರೆಯಲಾಗುತ್ತಿತ್ತು. ನಿಜವಾಗಿಯೂ ಆ ಪದ ನನಗೆ ತುಂಬ ನೋವು ಉಂಟು ಮಾಡಿತ್ತು. ಆದರೆ ನನಗೆ ಕೀಳರಿಮೆ ಮೂಡದ ರೀತಿಯಲ್ಲಿ ವರ್ತಿಸಿದ ಮೊದಲ ವ್ಯಕ್ತಿ ಎಂದರೆ ಅದು ಶಾರುಖ್​ ಖಾನ್​’ ಎಂದು ಕರಣ್​ ಜೋಹರ್​ ಹೇಳಿದ್ದಾರೆ.

ಇದನ್ನೂ ಓದಿ: ಪದೇಪದೇ ಕಿಡಿಕಾರುವ ಕಂಗನಾಗೂ ಪ್ರೀತಿ ತೋರಿದ ಕರಣ್​ ಜೋಹರ್​; ‘ಎಮರ್ಜೆನ್ಸಿ’ ನೋಡಲು ಕಾತರ

ಕರಣ್​ ಜೋಹರ್​ ಮತ್ತು ಶಾರುಖ್​ ಖಾನ್​ ನಡುವೆ ಹಲವು ವರ್ಷಗಳಿಂದ ಸ್ನೇಹ ಇದೆ. ಈ ಹಿಂದೆ ಸಂದರ್ಶನವೊಂದರಲ್ಲಿ ಅವರಿಬ್ಬರ ಸಂಬಂಧದ ಬಗ್ಗೆ ಕೀಳಾಗಿ ಪ್ರಶ್ನೆ ಕೇಳಲಾಗಿತ್ತು. ಆ ಘಟನೆಯನ್ನು ತಮ್ಮ ಆಟೋಬಯೋಗ್ರಫಿಯಲ್ಲಿ ಕರಣ್​ ಜೋಹರ್​ ಬರೆದಿದ್ದಾರೆ. ‘ಹಿಂದಿ ವಾಹಿನಿಯೊಂದರ ಶೋನಲ್ಲಿ ಶಾರುಖ್ ಬಗ್ಗೆ ನನ್ನಲ್ಲಿ ಕೇಳಲಾಯಿತು. ನಿಮ್ಮಿಬ್ಬರ ಸಂಬಂಧ ಹೇಗಿದೆ ಅಂತ ಅವರು ಪ್ರಶ್ನೆ ಮಾಡಿದರು. ನನಗೆ ಕೋಪ ಬಂತು. ನೀವು ನಿಮ್ಮ ಸಹೋದರನೊಂದಿಗೆ ಮಲಗುತ್ತೀರಾ ಎಂದು ನಾನು ನಿಮ್ಮನ್ನು ಕೇಳಿದರೆ ನಿಮಗೆ ಹೇಗೆ ಅನಿಸುತ್ತದೆ? ಅಂತ ಅವರನ್ನು ಮರು ಪ್ರಶ್ನಿಸಿದೆ. ನನಗೆ ಶಾರುಖ್​ ಖಾನ್ ಎಂದರೆ ತಂದೆ ಮತ್ತು ಅಣ್ಣ ಇದ್ದಂತೆ’ ಎಂದು ಕರಣ್​ ಜೋಹರ್​ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ನನಗೆ ನನ್ನ ಹೆಂಡತಿಯನ್ನೇ ನಿಭಾಯಿಸೋಕೆ ಆಗ್ತಿಲ್ಲ’: ಶಾರುಖ್​ ಖಾನ್​ ಹೀಗೆ ಹೇಳಿದ್ದೇಕೆ?

ನಿರ್ದೇಶಕನಾಗಿ, ನಿರ್ಮಾಪಕನಾಗಿ ಕರಣ್​ ಜೋಹರ್​ ಅವರು ಗುರುತಿಸಿಕೊಂಡಿದ್ದಾರೆ. ಹಲವು ವರ್ಷಗಳ ಬಳಿಕ ಅವರು ನಿರ್ದೇಶನ ಮಾಡಿದ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಯಿತು. ಆ ಚಿತ್ರದಲ್ಲಿ ರಣವೀರ್​ ಸಿಂಗ್​ ಮತ್ತು ಆಲಿಯಾ ಭಟ್​ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ ನೂರಾರು ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಆ ಮೂಲಕ ಕರಣ್​ ಜೋಹರ್​ ಮುಖದಲ್ಲಿ ನಗು ಅರಳಿದೆ. ‘ಕಾಫಿ ವಿತ್​ ಕರಣ್​’, ‘ಬಿಗ್​ ಬಾಸ್​ ಒಟಿಟಿ’ ಮುಂತಾದ ಶೋಗಳನ್ನು ನಿರೂಪಣೆ ಮಾಡುವ ಮೂಲಕವೂ ಅವರು ಜನಪ್ರಿಯತೆ ಪಡೆದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.