‘ನನಗೆ ನನ್ನ ಹೆಂಡತಿಯನ್ನೇ ನಿಭಾಯಿಸೋಕೆ ಆಗ್ತಿಲ್ಲ’: ಶಾರುಖ್​ ಖಾನ್​ ಹೀಗೆ ಹೇಳಿದ್ದೇಕೆ?

‘ಜವಾನ್​’ ಸಿನಿಮಾ ಸೆಪ್ಟೆಂಬರ್​ 7ರಂದು ಬಿಡುಗಡೆ ಆಗಲಿದೆ. ಈ ಚಿತ್ರವನ್ನು ನೋಡಲು ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದಾರೆ. ಆದರೆ ನೆಟ್ಟಿಗರೊಬ್ಬರಿಗೆ ಹೆಂಡತಿಯಿಂದ ಸಮಸ್ಯೆ ಆಗಿದೆ. ಆ ಬಗ್ಗೆ ಅವರು ಶಾರುಖ್​ ಖಾನ್​ ಬಳಿ ಹೇಳಿಕೊಂಡಿದ್ದಾರೆ. ಅದಕ್ಕೆ ಸಖತ್​ ಫನ್ನಿಯಾಗಿ ಶಾರುಖ್​ ಉತ್ತರ ನೀಡಿದ್ದಾರೆ. ಅವರ ಟ್ವೀಟ್​ ವೈರಲ್​ ಆಗಿದೆ.

‘ನನಗೆ ನನ್ನ ಹೆಂಡತಿಯನ್ನೇ ನಿಭಾಯಿಸೋಕೆ ಆಗ್ತಿಲ್ಲ’: ಶಾರುಖ್​ ಖಾನ್​ ಹೀಗೆ ಹೇಳಿದ್ದೇಕೆ?
ಶಾರುಖ್​ ಖಾನ್​
Follow us
ಮದನ್​ ಕುಮಾರ್​
|

Updated on: Aug 27, 2023 | 11:44 AM

ನಟ ಶಾರುಖ್​ ಖಾನ್​ (Shah Rukh Khan) ಅವರು ಅಭಿಮಾನಿಗಳ ಜೊತೆ ಆಗಾಗ ಪ್ರಶ್ನೋತ್ತರ ನಡೆಸುತ್ತಾರೆ. ಟ್ವಿಟರ್​ ಮೂಲಕ ಅಭಿಮಾನಿಗಳು ಕೇಳುವ ಪ್ರಶ್ನೆಗೆ ಶಾರುಖ್​ ಉತ್ತರ ನೀಡುತ್ತಾರೆ. ಈ ವೇಳೆ ಕೆಲವು ಫನ್ನಿ ಪ್ರಶ್ನೆಗಳು ಕೂಡ ಎದುರಾಗುತ್ತವೆ. ಆಗ ಶಾರುಖ್​ ಖಾನ್​ ಅವರು ತುಂಬ ತಮಾಷೆಯ ರೂಪದಲ್ಲೇ ಉತ್ತರ ನೀಡುತ್ತಾರೆ. ಈ ವರ್ಷ ಅವರಿಗೆ ‘ಪಠಾಣ್​’ ಚಿತ್ರದ ಮೂಲಕ ದೊಡ್ಡ ಗೆಲುವು ಸಿಕ್ಕಿತು. ಈಗ ‘ಜವಾನ್​’ (Jawan Movie) ಚಿತ್ರದ ಬಿಡುಗಡೆಯನ್ನು ಅವರು ಎದುರು ನೋಡುತ್ತಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬರು ತಮ್ಮ ಹೆಂಡತಿಯಿಂದ ಆದ ಸಮಸ್ಯೆಯನ್ನು ಶಾರುಖ್​ ಖಾನ್​ ಬಳಿ ಹೇಳಿಕೊಂಡಿದ್ದಾರೆ. ಅದಕ್ಕೆ ಉತ್ತರಿಸಿರುವ ಶಾರುಖ್​, ‘ನನಗೆ ನನ್ನ ಹೆಂಡತಿಯನ್ನೇ ನಿಭಾಯಿಸೋಕೆ ಆಗ್ತಿಲ್ಲ’ ಎಂದು ಹೇಳಿದ್ದಾರೆ. ಅವರ ಈ ಟ್ವೀಟ್​ ಸಖತ್​ ವೈರಲ್​ ಆಗಿದೆ. ‘ಜವಾನ್​’ ಚಿತ್ರಕ್ಕೆ ಶಾರುಖ್​ ಪತ್ನಿ ಗೌರಿ ಖಾನ್ (Gauri Khan)​ ಅವರು ಬಂಡವಾಳ ಹೂಡಿದ್ದಾರೆ.

‘ಜವಾನ್​’ ಸಿನಿಮಾ ಸೆಪ್ಟೆಂಬರ್​ 7ರಂದು ಬಿಡುಗಡೆ ಆಗಲಿದೆ. ಈ ಚಿತ್ರವನ್ನು ನೋಡಲು ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದಾರೆ. ಆದರೆ ನೆಟ್ಟಿಗರೊಬ್ಬರಿಗೆ ಹೆಂಡತಿಯಿಂದ ಸಮಸ್ಯೆ ಆಗಿದೆ. ಹೆಂಡತಿಯ ಕಾರಣದಿಂದ ಸರಿಯಾದ ಸಮಯಕ್ಕೆ ಚಿತ್ರಮಂದಿರಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಅವರು ಶಾರುಖ್​ ಖಾನ್​ ಬಳಿ ಸಮಸ್ಯೆ ಹೇಳಿಕೊಂಡಿದ್ದಾರೆ. ‘ಹೆಂಡತಿ ಜೊತೆ ಜವಾನ್​ ಸಿನಿಮಾ ನೋಡಬೇಕು ಅಂತ ಪ್ಲ್ಯಾನ್​ ಮಾಡಿದ್ದೇನೆ ಸರ್​. ಆದರೆ ಪ್ರತಿ ಬಾರಿ ಆಕೆ ಲೇಟ್​ ಮಾಡುತ್ತಾಳೆ. ಪಠಾಣ್​ ನೋಡಲು ಹೋದಾಗಲೂ ಹೀಗೆಯೇ ಆಗಿತ್ತು. ಬೇಗ ಚಿತ್ರಮಂದಿರವನ್ನು ತಲುಪಲು ಏನಾದರೂ ಟಿಪ್ಸ್​ ಕೊಡಿ’ ಎಂದು ಅಭಿಮಾನಿಯು ಕೇಳಿದ್ದಾರೆ.

ಅಭಿಮಾನಿ ಕೇಳಿದ ಪ್ರಶ್ನೆಗೆ ಶಾರುಖ್​ ಖಾನ್​ ಅವರು ತಮಾಷೆಯಾಗಿ ಉತ್ತರ ನೀಡಿದ್ದಾರೆ. ‘ದಯವಿಟ್ಟು.. ಹೆಂಡತಿಗೆ ಸಂಬಂಧಿಸಿದ ಸಮಸ್ಯೆಯನ್ನು ಬಗೆಹರಿಸುವಂತಹ ಪ್ರಶ್ನೆಗಳನ್ನು ಇನ್ಮುಂದೆ ಕೇಳಬೇಡಿ. ನನಗೆ ನನ್ನ ಹೆಂಡತಿಯನ್ನೇ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ನೀವು ನಿಮ್ಮ ಸಮಸ್ಯೆಯನ್ನೂ ನನ್ನ ಮೇಲೆ ಹಾಕುತ್ತಿದ್ದೀರಿ. ಎಲ್ಲ ಹೆಂಡತಿಯರೇ.. ಯಾವುದೇ ಚಿಂತೆ ಇಲ್ಲದೇ ಜವಾನ್​ ಸಿನಿಮಾ ನೋಡಲು ಹೋಗಿ’ ಎಂದು ಶಾರುಖ್​ ಖಾನ್​ ಟ್ವೀಟ್​ ಮಾಡಿದ್ದಾರೆ.

‘ಜವಾನ್​ ಚಿತ್ರ 500 ಕೋಟಿ ರೂಪಾಯಿ ಕಲೆಕ್ಷನ್​​ ಮಾಡಲಿದೆ’: ಭವಿಷ್ಯ ನುಡಿದ ಮನೋಜ್​ ದೇಸಾಯಿ

‘ಜವಾನ್​’ ಚಿತ್ರಕ್ಕೆ ಅಟ್ಲಿ ಅವರು ನಿರ್ದೇಶನ ಮಾಡಿದ್ದಾರೆ. ಶಾರುಖ್​ ಖಾನ್​ ಜೊತೆ ನಯನತಾರಾ, ದೀಪಿಕಾ ಪಡುಕೋಣೆ, ವಿಜಯ್​ ಸೇತುಪತಿ, ಸಾನ್ಯಾ ಮಲ್ಹೋತ್ರಾ ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಹಾಲಿವುಡ್​ನ ಸಾಹಸ ನಿರ್ದೇಶಕರು ಸ್ಟಂಟ್​ ಕೊರಿಯೋಗ್ರಫಿ ಮಾಡಿದ್ದಾರೆ. ದೊಡ್ಡ ಬಜೆಟ್​ನಲ್ಲಿ ಅದ್ದೂರಿಯಾಗಿ ಈ ಸಿನಿಮಾ ಮೂಡಿಬಂದಿದೆ. ‘ಪಠಾಣ್​’ ರೀತಿಯೇ ಈ ಸಿನಿಮಾ ಕೂಡ ಬ್ಲಾಕ್​ ಬಸ್ಟರ್​ ಆಗುವ ಸಾಧ್ಯತೆ ಇದೆ. ಆದಷ್ಟು ಬೇಗ ಟ್ರೇಲರ್​ ರಿಲೀಸ್​ ಮಾಡಿ ಎಂದು ಫ್ಯಾನ್ಸ್​ ಬೇಡಿಕೆ ಇಟ್ಟಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್