ಸಡಿಲ ಆಗಲಿದೆ ನಯನತಾರಾ ವೃತ್ತಿಜೀವನದ ರೂಲ್ಸ್​? ಶಾರುಖ್​ ಖಾನ್​ಗಾಗಿ ಈ ನಟಿಯ ಒಪ್ಪಂದ ಬದಲಾಗುತ್ತಾ?

ಇತ್ತೀಚಿನ ವರ್ಷಗಳಲ್ಲಿ ನಯನತಾರಾ ಅವರು ಯಾವುದೇ ಸಿನಿಮಾವನ್ನು ಪ್ರಚಾರ ಮಾಡಿಲ್ಲ. ನಿರ್ಮಾಪಕರಿಂದ ಬಹುಕೋಟಿ ರೂಪಾಯಿ ಸಂಭಾವನೆ ಪಡೆದರೂ ಕೂಡ ಅವರು ಪ್ರಚಾರಕ್ಕೆ ಬರುವುದಿಲ್ಲ. ಆ ರೀತಿಯಾಗಿಯೇ ಅವರು ಒಪ್ಪಂದ ಮಾಡಿಕೊಂಡಿರುತ್ತಾರೆ. ಆದರೆ ‘ಜವಾನ್​’ ವಿಚಾರದಲ್ಲಿ ಅವರು ಈ ರೂಲ್ಸ್​ ಸಡಿಲ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸಡಿಲ ಆಗಲಿದೆ ನಯನತಾರಾ ವೃತ್ತಿಜೀವನದ ರೂಲ್ಸ್​? ಶಾರುಖ್​ ಖಾನ್​ಗಾಗಿ ಈ ನಟಿಯ ಒಪ್ಪಂದ ಬದಲಾಗುತ್ತಾ?
ಶಾರುಖ್​ ಖಾನ್​, ನಯನತಾರಾ
Follow us
ಮದನ್​ ಕುಮಾರ್​
|

Updated on: Aug 17, 2023 | 11:34 AM

ನಟಿ ನಯನತಾರಾ (Nayanthara) ಅವರು ದಕ್ಷಿಣ ಭಾರತದಲ್ಲಿ ಲೇಡಿ ಸೂಪರ್​ ಸ್ಟಾರ್​ ಅಂತ ಫೇಮಸ್​. ಕಾಲ್​ಶೀಟ್​ಗಾಗಿ ಅವರ ಮನೆ ಮುಂದೆ ನಿರ್ಮಾಪಕರು ಕ್ಯೂ ನಿಲ್ಲುತ್ತಾರೆ. ಈಗ ನಯನತಾರಾ ಅವರು ‘ಜವಾನ್​’ ಸಿನಿಮಾದಲ್ಲಿ ನಟಿಸಿದ್ದು, ಆ ಚಿತ್ರದ ಬಿಡುಗಡೆಗೆ ಸಕಲ ಸಿದ್ಧತೆ ನಡೆದಿದೆ. ಸೆಪ್ಟೆಂಬರ್​ 7ರಂದು ಈ ಸಿನಿಮಾ ರಿಲೀಸ್​ ಆಗಲಿದೆ. ಶಾರುಖ್​ ಖಾನ್​ (Shah Rukh Khan) ನಟನೆಯ ಸಿನಿಮಾ ಎಂಬ ಕಾರಣಕ್ಕೆ ‘ಜವಾನ್​’ ಮೇಲೆ ಭಾರಿ ನಿರೀಕ್ಷೆ ಸೃಷ್ಟಿ ಆಗಿದೆ. ಪ್ರಚಾರ ಕಾರ್ಯಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಈ ಸಿನಿಮಾದ ಸಲುವಾಗಿ ನಯನತಾರಾ ಅವರು ತಮ್ಮ ವೃತ್ತಿಜೀವನದ ಕೆಲವು ನಿಯಮಗಳನ್ನು ಸಡಿಲ ಮಾಡಿಕೊಳ್ಳುತ್ತಾರೆ ಎಂಬ ಸುದ್ದಿ ಹರಡಿದೆ. ಇಷ್ಟು ದಿನ ತಮ್ಮ ಸಿನಿಮಾಗಳ ಪ್ರಚಾರಕ್ಕೆ ಹಿಂದೇಟು ಹಾಕುತ್ತಿದ್ದ ನಯನತಾರಾ ಅವರು ಈಗ ಶಾರುಖ್​ ಖಾನ್​ ಮೇಲಿನ ಗೌರವದಿಂದ ‘ಜವಾನ್​’ ಸಿನಿಮಾದ (Jawan Movie) ಪ್ರಚಾರದಲ್ಲಿ ಭಾಗಿಯಾಗುತ್ತಾರೆ ಎಂದು ಹೇಳಲಾಗುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ನಯನತಾರಾ ಅವರು ಯಾವುದೇ ಸಿನಿಮಾವನ್ನು ಪ್ರಚಾರ ಮಾಡಿಲ್ಲ. ನಿರ್ಮಾಪಕರಿಂದ ಬಹುಕೋಟಿ ರೂಪಾಯಿ ಸಂಭಾವನೆ ಪಡೆದರೂ ಕೂಡ ಅವರು ಪ್ರಚಾರಕ್ಕೆ ಬರುವುದಿಲ್ಲ. ಆ ರೀತಿಯಾಗಿಯೇ ಅವರು ಒಪ್ಪಂದ ಮಾಡಿಕೊಂಡಿರುತ್ತಾರೆ. ಆದರೆ ‘ಜವಾನ್​’ ವಿಚಾರದಲ್ಲಿ ಅವರು ಈ ರೂಲ್ಸ್​ ಸಡಿಲ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಶಾರುಖ್​ ಖಾನ್​ ಜೊತೆ ಅವರು ಪ್ರಚಾರದಲ್ಲಿ ಭಾಗಿ ಆಗುತ್ತಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ನಯನತಾರಾ ಅಥವಾ ಶಾರುಖ್​ ಖಾನ್​ ಕಡೆಯಿಂದ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

ಇದನ್ನೂ ಓದಿ: ‘ಸುಮ್ಮನಿರಿ.. 2 ಮಕ್ಕಳ ತಾಯಿ ಅವರು’: ನಯನತಾರಾ ಮೇಲೆ ಲವ್​ ಆಯ್ತಾ ಅಂತ ಕೇಳಿದ್ದಕ್ಕೆ ಶಾರುಖ್​ ಉತ್ತರ

ಅಟ್ಲಿ ಅವರ ನಿರ್ದೇಶನದಲ್ಲಿ ‘ಜವಾನ್​’ ಸಿನಿಮಾ ಮೂಡಿಬಂದಿದೆ. ಈ ಚಿತ್ರಕ್ಕೆ ಶಾರುಖ್​ ಖಾನ್​ ಅವರು ‘ರೆಡ್​ ಚಿಲ್ಲೀಸ್​ ಎಂಟರ್​ಟೇನ್ಮೆಂಟ್​’ ಸಂಸ್ಥೆ ಬಂಡವಾಳ ಹೂಡಿದೆ. ಶಾರುಖ್​ ಖಾನ್ ಅವರ ಪತ್ನಿ ಗೌರಿ ಖಾನ್​ ನಿರ್ಮಾಪಕಿಯಾಗಿ ಕೆಲಸ ಮಾಡಿದ್ದಾರೆ. ಈ ಸಿನಿಮಾದ ಕಲಾವಿದರಿಗೆ ಬಹುಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ. ದಕ್ಷಿಣ ಭಾರತದಲ್ಲಿ ಬಹಳ ಖ್ಯಾತಿ ಹೊಂದಿರುವ ನಯನತಾರಾ ಹಾಗೂ ವಿಜಯ್​ ಸೇತುಪತಿ ಅವರು ಈ ಚಿತ್ರದಲ್ಲಿ ನಟಿಸಿರುವುದರಿಂದ ತಮಿಳುನಾಡು, ಆಂಧ್ರ ಮತ್ತು ತೆಲಂಗಾಣದಲ್ಲಿ ಈ ಚಿತ್ರಕ್ಕೆ ಭರ್ಜರಿ ಕಲೆಕ್ಷನ್​ ಆಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ‘ನಯನತಾರಾ ಮೊದಲಿನಂತಿಲ್ಲ’; ವಿಘ್ನೇಶ್​ ಶಿವನ್​ಗೆ ವಾರ್ನಿಂಗ್ ಕೊಟ್ಟ ಶಾರುಖ್ ಖಾನ್

ನಯನತಾರಾ ಅವರು ವಿಘ್ನೇಶ್​ ಶಿವನ್​ ಜೊತೆ ಹಾಯಾಗಿ ಸಂಸಾರ ಮಾಡಿಕೊಂಡಿದ್ದಾರೆ. ಬಾಡಿಗೆ ತಾಯಿ ಮೂಲಕ ಈ ದಂಪತಿಯು ಅವಳಿ ಗಂಡು ಮಕ್ಕಳನ್ನು ಪಡೆದಿದ್ದಾರೆ. ಮಕ್ಕಳ ಆರೈಕೆಯ ಜೊತೆಯಲ್ಲಿ ಸಿನಿಮಾ ಕೆಲಸಗಳಿಗೂ ನಯನತಾರಾ ಅವರು ಸಮಯ ನೀಡುತ್ತಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟು ಹಲವು ವರ್ಷಗಳು ಕಳೆದಿದ್ದರೂ ಕೂಡ ಅವರ ಡಿಮ್ಯಾಂಡ್​ ಕಡಿಮೆ ಆಗಿಲ್ಲ. ‘ಜವಾನ್​’ ಸಿನಿಮಾದಲ್ಲಿ ಅವರು ಆ್ಯಕ್ಷನ್​ ಮೆರೆದಿದ್ದಾರೆ. ಆ ಕಾರಣದಿಂದಲೂ ಅಭಿಮಾನಿಗಳಿಗೆ ಈ ಸಿನಿಮಾ ಮೇಲೆ ನಿರೀಕ್ಷೆ ಮೂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ