AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

23 ವರ್ಷಗಳ ಬಳಿಕ ಮಣಿಪುರದಲ್ಲಿ ಹಿಂದಿ ಸಿನಿಮಾ ಬಿಡುಗಡೆ

Manipur: 23 ವರ್ಷಗಳ ಬಳಿಕ ಮಣಿಪುರದಲ್ಲಿ ಹಿಂದಿ ಸಿನಿಮಾ ಬಿಡುಗಡೆ ಆಗಿದೆ. 23 ವರ್ಷಗಳಿಂದ ಯಾವುದೇ ಹಿಂದಿ ಸಿನಿಮಾ ಮಣಿಪುರದಲ್ಲಿ ಬಿಡುಗಡೆ ಆಗದ್ದಕ್ಕೆ ಕಾರಣವೇನು?

23 ವರ್ಷಗಳ ಬಳಿಕ ಮಣಿಪುರದಲ್ಲಿ ಹಿಂದಿ ಸಿನಿಮಾ ಬಿಡುಗಡೆ
ಉರಿ: ದಿ ಸರ್ಜಿಕಲ್ ಸ್ಟ್ರೈಕ್
ಮಂಜುನಾಥ ಸಿ.
|

Updated on: Aug 17, 2023 | 4:17 PM

Share

ಮಣಿಪುರ (Manipur) ಕಳೆದ ಕೆಲ ತಿಂಗಳಿನಿಂದ ಭಾರಿ ಸುದ್ದಿಯಲ್ಲಿದೆ. ಮಣಿಪುರ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರ ವಿಶ್ವದ ಗಮನ ಸೆಳೆದಿತ್ತು, ವೈರಲ್ ಆಗಿದ್ದ ಮಣಿಪುರದ ವಿಡಿಯೋ ದೇಶವನ್ನೇ ಅಲ್ಲಾಡಿಸಿತ್ತು, ವಿಡಿಯೋ ಸೃಷ್ಟಿಸಿದ್ದ ತಲ್ಲಣ ಯಾವ ಮಟ್ಟಿಗಿತ್ತೆಂದರೆ ಪ್ರಧಾನಿ ನರೇಂದ್ರ ಮೋದಿ (Narendra Modi) ಆ ಬಗ್ಗೆ ಹೇಳಿಕೆ ಬಿಡುಗಡೆ ಮಾಡಬೇಕಾಯ್ತು. ಕಳೆದ ಮೂರು ತಿಂಗಳಿಗಿಂತಲೂ ಹೆಚ್ಚು ಸಮಯದಿಂದ ಮಣಿಪುರ ಹಿಂಸೆಯ ಕೂಪದಲ್ಲಿ ಬೇಯುತ್ತಿದೆ, ಕಳೆದ ಕೆಲ ವಾರಗಳಿಂದ ಪರಿಸ್ಥಿತಿ ತುಸು ಹತೋಟಿಗೆ ಬರುತ್ತಿದ್ದು, ಶಾಂತಿ ಸ್ಥಾಪನೆಗೆ ಸರ್ಕಾರ, ಸೈನ್ಯ, ಸ್ಥಳೀಯ ಪೊಲೀಸು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ನಡುವೆ 23 ವರ್ಷಗಳ ಬಳಿಕ ಮಣಿಪುರದಲ್ಲಿ ಹಿಂದಿ ಸಿನಿಮಾ (Hindi Cinema) ಒಂದು ಬಿಡುಗಡೆ ಆಗಿದೆ.

ಮಣಿಪುರದಲ್ಲಿ ಹಿಂದಿ ಭಾಷೆಯ ಸಿನಿಮಾ ಬಿಡುಗಡೆ ಆಗಿ 23 ವರ್ಷಗಳಾಗಿದ್ದವು. ಇದೀಗ ವಿಕ್ಕಿ ಕೌಶಲ್​ರ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾ ಮಣಿಪುರದಲ್ಲಿ ಬಿಡುಗಡೆ ಆಗಿದೆ. ಮಣಿಪುರದ ಚುರಚಂದ್​ಪುರ್​ನ ಚಿತ್ರಮಂದಿರದಲ್ಲಿ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾ ಪ್ರದರ್ಶನ ಕಾಣುತ್ತಿದ್ದು ಸ್ಥಳೀಯರಿಂದ ಒಳ್ಳೆಯ ಪ್ರತಿಕ್ರಿಯೆಯೂ ದೊರೆತಿದೆ ಎನ್ನಲಾಗುತ್ತಿದೆ.

ಮಣಿಪುರದಲ್ಲಿ 23 ವರ್ಷದ ಬಳಿಕ ಹಿಂದಿ ಸಿನಿಮಾ

ಮೈತಿ ಸಮುದಾಯದ ಪರವಾದ ಬಂಡುಕೋರ ಗುಂಪು ಆರ್​ಪಿಎಫ್ (ರೆವಲ್ಯೂಷನರಿ ಪೀಪಲ್ ಫ್ರಂಟ್) 2000ರಲ್ಲಿ ಹಿಂದಿ ಸಿನಿಮಾಗಳ ಪ್ರದರ್ಶನದ ಮೇಲೆ ನಿಷೇಧ ಹೇರಿತ್ತು, ಆಗಿನಿಂದ ಯಾವೊಂದು ಹಿಂದಿ ಸಿನಿಮಾ ಸಹ ಮಣಿಪುರದಲ್ಲಿ ಪ್ರದರ್ಶನವಾಗಿರಲಿಲ್ಲ, ಆದರೆ ಈಗ ಎಚ್​ಎಸ್​ಎ (ಹಮರ್ ಸ್ಟೂಟೆಂಡ್ ಅಸೋಸಿಯೇಷನ್) ಸಂಘವು ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾವನ್ನು ಪ್ರದರ್ಶಿಸಿದೆ. ‘ಮೈತಿ ಸಮಯದಾಯವು ಹಿಂದಿ ಸಿನಿಮಾಗಳಿಗೆ ನಿಷೇಧ ಹೇರಿತ್ತು, ಈಗ ಈ ಸಿನಿಮಾ ಪ್ರದರ್ಶಿಸುತ್ತಿರುವುದು ಮೈತಿಯ ಭಾರತ ವಿರೋಧಿ ಮನಸ್ಥಿತಿಯ ವಿರುದ್ಧ ಪ್ರತಿಭಟಿಸಲು ಹಾಗೂ ನಮ್ಮ ಭಾರತ ಪ್ರೇಮವನ್ನು ಸಾರಲು” ಎಂದು ಸ್ಥಳೀಯ ಬುಡಕಟ್ಟು ಸಂಘದ ಮುಖಂಡ ಜಿಂಜಾ ವುಲ್​ಜೋಂಗ್ ಹೇಳಿದ್ದಾರೆ.

ಇದನ್ನೂ ಓದಿ:ದೇಶವೇ ನಿಮ್ಮ ಜತೆಗಿದೆ: ಮಣಿಪುರದ ಮಹಿಳೆಯರು ಮತ್ತು ಹೆಣ್ಣುಮಕ್ಕಳಿಗೆ ಆಶ್ವಾಸನೆ ನೀಡಿದ ಮೋದಿ

1998 ರಲ್ಲಿ ಬಿಡುಗಡೆ ಆಗಿದ್ದ ಶಾರುಖ್ ಖಾನ್ ನಟನೆಯ ‘ಕುಚ್ ಕುಚ್ ಹೋತಾ ಹೈ’ ಸಿನಿಮಾದ ಬಳಿಕ ಇನ್ಯಾವುದೇ ಹಿಂದಿ ಸಿನಿಮಾ ಮಣಿಪುರದಲ್ಲಿ ಬಿಡುಗಡೆ ಆಗಿರಲಿಲ್ಲ. 2000 ರಲ್ಲಿ ಹಿಂದಿ ಸಿನಿಮಾಗಳ ಮೇಲೆ ನಿಷೇಧ ಹೇರಿದ ಕೇವಲ ಒಂದೇ ವಾರದಲ್ಲಿ ಬಂಡುಕೋರರ ಗುಂಪು ರಾಜ್ಯದಾದ್ಯಂತ ಲಭ್ಯವಿದ್ದ ಬಹುತೇಕ ಎಲ್ಲ ಹಿಂದಿ ಸಿನಿಮಾ ಕ್ಯಾಸೆಟ್, ಸಿಡಿಗಳನ್ನು ಸುಟ್ಟು ಹಾಕಿತ್ತಂತೆ. ಮಾತ್ರವಲ್ಲದೆ ಸ್ಥಳೀಯ ಕೇಬಲ್ ಮಾಲೀಕರ ಮೇಲೂ ಒತ್ತಡ ಹೇರಿ ಹಿಂದಿ ಕಾರ್ಯಕ್ರಮಗಳ ನಿಷೇಧಕ್ಕೆ ಯತ್ನಿಸಿದ್ದಲ್ಲದೆ, ಬಾಲಿವುಡ್ ಸಿನಿಮಾಗಳ ಪ್ರಭಾವದಿಂದ ನಮ್ಮ ಸ್ಥಳೀಯ ಭಾಷೆ, ಸಂಸ್ಕೃತಿ ನಶಿಸುತ್ತದೆ ಎಂದು ಪ್ರಚಾರ ಮಾಡಲಾಗಿತ್ತು.

ಇದೀಗ ಬಿಡುಗಡೆ ಆಗಿರುವ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾವು ಭಾರತೀಯ ಸೇನೆಯು ಪಾಕ್ ಗಡಿಯೊಳಗಿನ ಭಯೋತ್ಪಾಕರ ನೆಲೆಗಳ ಮೇಲೆ ದಾಳಿಯ ಕುರಿತಾದ ಸಿನಿಮಾ ಆಗಿದೆ. ಉರಿ ದಾಳಿಗೆ ಪ್ರತಿಕಾರವಾಗಿ ಭಾರತ ನಡೆಸಿದ ದಾಳಿಯ ಕುರಿತಾದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ದೇಶಭಕ್ತಿಯನ್ನು ಬಡಿದೆಬ್ಬಿಸುವ ಸಿನಿಮಾ ಇದಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ